ಉಡುಪಿ: ಅಕ್ಟೋಬರ್ 12ರಂದು ಮಹಾನ್ ಸಂತ ಗುರೂಜಿ ಸಾಯಿ ಈಶ್ವರ್ ಇವರಿಂದ “ಮಕ್ಕಳ ಜ್ಞಾನ ವಿಕಸನ ಶಿಬಿರ” -Vishwanews24

Featured, ಉಡುಪಿ

ಉಡುಪಿ: ಇದೇ ಬರುವ ಅಕ್ಟೋಬರ್ .12 ಶನಿವಾರ ಬನ್ನಂಜೆ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಮಕ್ಕಳ ಜ್ಞಾನ ವಿಕಸನ ಶಿಬಿರ ಆಯೋಜಿಸಲಾಗಿದೆ.

ಶಿಬಿರದಲ್ಲಿ ಭಾಗವಹಿಸುವ ಮಕ್ಕಳ ನಕಾರಾತ್ಮಕ ಶಕ್ತಿಯನ್ನು ತೆಗೆದು ಧನಾತ್ಮಕ ಶಕ್ತಿ ಜಾಗ್ರತಗೊಳಿಸುವುದು.ದೇಹದ ಆಧ್ಯಾತ್ಮ ಕೇಂದ್ರ ಜಾಗರಣಗೊಳಿಸುವುದು.ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಧ್ಯಾನ ಕ್ರಿಯೆ ಬಗ್ಗೆ ಮಾಹಿತಿ. ಮಕ್ಕಳ ಮಾನಸಿಕ , ಆರೋಗ್ಯ ವಿಕಾಸನ.ಮಕ್ಕಳ ಸಣ್ಣಪುಟ್ಟ ತಪ್ಪು ನಡವಳಿಕೆ ಯಿಂದ ಭವಿಷ್ಯದಲ್ಲಿ ಮುಂದೆ ಬರುವ ಸಮಸ್ಯೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು.ಹಿರಿಯರಿಗೆ ಗೌರವಿಸುವುದು ಹೇಗೆ ಮತ್ತು ಅದರಿಂದ ಆಗುವ ಶೇಯಸ್ಸಿನ ಬಗ್ಗೆ ಮಾಹಿತಿ.ಜೀವನಕ್ಕೆ ಗುರಿ ಮತ್ತು ಅದರತ್ತ ಹೋಗುವ ದಾರಿ ಇವುಗಳ ಬಗ್ಗೆ ಶಿಭಿರ ದಲ್ಲಿ ಮಕ್ಕಳಿಗೆ ವಿಷೇಶ ತರಬೇತಿ ನೀಡಲಾಗುತ್ತದೆ.

“ಮಕ್ಕಳೇ ವಿಶ್ವದ ಮುಂದಿನ ಭವಿಷ್ಯ” ಎಂಬ ಕಾರ್ಯಕ್ರಮವನ್ನು ರಾಜ್ಯದ ಅನೇಕ ಕಡೆ ಆಯೋಜಿಸಿದ ಮಹಾನ್ ಸಂತ ಗುರೂಜಿ ಸಾಯಿ ಈಶ್ವರ್ ಇವರು ಈ ಶಿಬಿರವನ್ನು ಆಯೋಜಿಸಿದ್ದಾರೆ.

ಒಂದು ಆರೋಗ್ಯಕರ ಮನೆಯ ಪರಿಸರದಲ್ಲಿ ಮಕ್ಕಳ ಬೆಳವಣಿಗೆ, ಮಕ್ಕಳ ಜ್ಞಾನದ ಸರ್ವತೋಮುಖ ವಿಕಾಸಕ್ಕೆ ದಾರಿಯಾಗಲಿದೆ ಈ ಶಿಬಿರ, ಮಕ್ಕಳಿಗೆ ನಿಯಮಿತ ಬದುಕುವ ದಾರಿ ಯೊಂದಿಗೆ ಅವರ ದೇಹದಲ್ಲಿಯ ಆತ್ಮ , ತೇಜಸ್ವು (AURA) ಬಗ್ಗೆ ಅರಿವು ಮೂಡಿಸಿ ಮಕ್ಕಳಿಗೆ ಉತ್ತಮ ಸಂಸ್ಕೃತಿ , ಸಂಸ್ಕಾರಯುತ ಜೀವನ ರೂಪಿಸಲು ಈ ಶಿಬಿರ ಮಾರ್ಗದರ್ಶನ ನೀಡುತ್ತದೆ.

ಶಿಬಿರದಲ್ಲಿ 7 ರಿಂದ 18 ವರ್ಷ ಪ್ರಾಯದ ಮಕ್ಕಳು ಭಾಗವಹಿಸಲು ಅವಕಾಶವಿದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ ಶ್ರೀಮತಿ ಸ್ನೇಹಾ ಸಂಪತ್ ಶೆಟ್ಟಿ 9731028652, ಪ್ರಸಾದ್ ಎಸ್ ಅಮೀನ್ 7619115623 ಇವರನ್ನು ಸಂಪರ್ಕಿಸಲು ಸಾಯಿ ಸಾಂತ್ವನ ಮಂದಿರ (ಟ್ರಸ್ಟ್) ತಿಳಿಸಿದೆ.