ಉಡುಪಿ : ಅನುಷ್ಠಾನ ಸಮಿತಿಗೆ ಸದಸ್ಯರ ಆಯ್ಕೆ : ಪ.ಜಾತಿ / ಪಂಗಡದವರಿಂದ ಅರ್ಜಿ ಆಹ್ವಾನ -Vishwanews24
ಉಡುಪಿ : ಅನುಷ್ಠಾನ ಸಮಿತಿಗೆ ಸದಸ್ಯರ ಆಯ್ಕೆ : ಪ.ಜಾತಿ / ಪಂಗಡದವರಿಂದ ಅರ್ಜಿ ಆಹ್ವಾನ -Vishwanews24
ಉಡುಪಿ : ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಪರಿಶಿಷ್ಟ ಜಾತಿ/ ಪಂಗಡದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ಕುರಿತು ಸರ್ಕಾರದಿಂದ ಜಾರಿಗೊಳ್ಳುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಜಿಲ್ಲಾ ಮಟ್ಟದ ಅನುಷ್ಟಾನ ಸಮಿತಿಯ 3 ನಾಮ ನಿರ್ದೇಶಿತ ಸದಸ್ಯರ ಅವಧಿ ಮುಗಿದಿದ್ದು, ಹೊಸ ಸದಸ್ಯರನ್ನು ಆಯ್ಕೆ ಮಾಡಲು ಪರಿಶಿಷ್ಟ ಜಾತಿಗೆ ಸೇರಿದ ದಕ್ಕಲ್/ದಕ್ಕಲ ದಕ್ಕಲಿಗ, ಬುಡ್ಗಜಂಗಮ್, ಹಂದಿಜೋಗಿ, ಶಿಳ್ಳೆಕ್ಯಾತ, ಸುಡುಗಾಡುಸಿದ್ಧ, ಚೆನ್ನದಾಸರ್/ಹೊಲೆಯದಾಸರ್, ಗೋಸಂಗಿ, ಮಾಂಗ್ಗಾರುಡಿ, ಗಂಟಿಚೋರ್, ದೊಂಬರ, ಮಾಲದಾಸರಿ, ಹೊಲೆಯದಾಸರಿ, ಮಾಲಸನ್ಯಾಸಿ, ಜಗ್ಗಲಿ, ಸಿಂಧೋಳ್ಳು, ಬಕುಡ, ಬಂಡಿ, ಆಸಾದಿ, ಮಾಸ್ತಿ, ಪಂಬದ, ಮುಕ್ರಿ, ಭಂಗಿ, ತೋಟಿ, ಆದಿಯ, ಅಜಿಲ, ಭೈರ, ಬತಾಡ, ಬೆಳ್ಳಾರ, ಗೊಡ್ಡ, ಹಲ್ಲೀರ್, ವಲ್ಹಾರ್, ಜಾಂಬುವುಲು, ಕಲ್ಲಾಡಿ, ಕೂಸ, ಕೋಟೆಗಾರಮೆಟ್ರಿ, ಮೈಲ, ಮೆಂಗಾವರ್, ನಾಡಿಯಾ, ನಲಕದಾಯ, ನಾಯಡಿ, ಬಿಂಡ್ಲ, ಬೈಗಾರ, ಚಕ್ಕಲಿಯನ್, ಪಾಲೆ, ಪರವನ್, ಅರುಂದತಿಯಾರ್, ಮದರಿ, ಜಾಂಬುವುಲು, ಕಲ್ಲಡಿ, ಕೂಸ, ಅಗೆರ್, ಮಚಲ, ಕೊರಮ/ಕೊರವ, ಕೊರವರ್ಕೊರಚ (ಕೊರಚರ್) ಹಾಗೂ ಪರಿಶಿಷ್ಟ ಪಂಗಡದ ಚೆಂಚು ಚೆಂಚುವಾರ್, ಗೌಡಲು, ಹಕ್ಕಿಪಿಕ್ಕಿ, ಪಾರ್ದಿ, ಅಡವಿನ್, ಚಿಂಚಲ್, ಪಾನ್ಸಿಪಾರ್ದಿ, ಹರಣಶಿಕಾರಿ, ಹಸಲರು, ಇರುಳಿಗ, ಕತೋಡಿ, ಕಟ್ಕರಿ, ಧೋರ್ಕತೋಡಿ, ಧೋರ್ಕಟ್ಕರಿ, ಸನ್ಕಟ್ಕರಿ, ಕುಡಿಯ, ಪಣಿಯನ್, ರಾಜಗೊಂಡ, ಗೊಂಡ, ನಾಯಕ್ಪಾಡ್, ದುಬಲ, ತಾಳವ್ಯ, ಹಳಪಟ್ಟಿ, ಗಮಟ, ಗಮಟಿ, ಮಾನಚೈ, ಪಡವಿ, ವಲವೈ, ಇರುಳರ್, ಕಮ್ಮಾರ, ಕೊಂಡಕಾಪಾಸ್, ಕೊಯ, ಬಿನೆಕೋಯ, ಕುರುಬ, ಮೇದ, ಮೇದರಿ, ಗೌರಿಗ, ಬುರುಗ, ಯರವ, ಬೌಚ, ಬಂಚ, ಬಿಲ್, ಬಿಲ್ಗರಾಸಿಯಾ, ದೋಲಿಬಿಲ್, ಡುಂಗ್ರಿಬಿಲ್, ಡುಂಗ್ರಿಗರಾಸಿಯಾ, ರಾವಲ್ಬಿಲ್, ತಡವಿಬಿಲ್, ಭಾಗಲಿಯ, ಬಿಲಾಲ, ಪರ್ವ ವಸವ, ವಸವೆ, ಅಡಿಯನ್, ಬರಡ ಉಪಜಾತಿಗಳಿಗೆ ಸೇರಿರುವ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ರಜತಾದ್ರಿ ಮಣಿಪಾಲ ಕಚೇರಿಯನ್ನು ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
