ಉಡುಪಿ : ಅನೈತಿಕ ದಂಧೆ ತಡೆಯಲು ಕಾರ್ಯಾಚರಣೆಗೆ ಇಳಿದ ಎಸ್ಪಿ: ಮಂಗಳಮುಖಿಯರೊಂದಿಗೆ ವಾಗ್ವಾದ ; ಇಬ್ಬರು ಪಿಂಪ್‌ಗಳ ಬಂಧನ – Vishwanews24

Featured, ಉಡುಪಿ

ಉಡುಪಿ : ಅನೈತಿಕ ದಂಧೆ ತಡೆಯಲು ಕಾರ್ಯಾಚರಣೆಗೆ ಇಳಿದ ಎಸ್ಪಿ ಅಕ್ಷಯ್ ಹಾಕೇ ಮಚ್ಚಿಂದ್ರ

ಮಂಗಳಮುಖಿಯರೊಂದಿಗೆ ವಾಗ್ವಾದ ,ಇಬ್ಬರು ಪಿಂಪ್‌ಗಳ ಬಂಧನ

ಉಡುಪಿ : ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪ ಮಂಗಳ ಮುಖಿಯರನ್ನು ಅನೈತಿಕ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಕುರಿತ ದೂರಿನ ಹಿನ್ನೆಲೆಯಲ್ಲಿ ಡಿ.15ರಂದು ತಡರಾತ್ರಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚಿಂದ್ರ ಸ್ವತಃ ತಾವೇ ಕಾರ್ಯಾಚರಣೆ ನಡೆಸಿದ್ದಾರೆ.

ಈ ವೇಳೆ ಇಬ್ಬರು ಪಿಂಪ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಗರದ ಸಿಟಿ ಬಸ್ ನಿಲ್ದಾಣ ಹಾಗೂ ಸರ್ವಿಸ್ ನಿಲ್ದಾಣದ ಸಮೀಪ ಅನೈತಿಕ ದಂಧೆಯಲ್ಲಿ ತೊಡಗಿಸಿಕೊಂಡಿರುವ ಕೆಲವು ಮಂಗಳಮುಖಿಯರು, ವಾಹನ ಗಳನ್ನು ಅಡ್ಡ ಹಾಕಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಾರೆ, ದಾರಿದೀಪವನ್ನು ಒಡೆದು ಹಾಕಿದ್ದಾರೆ ಮತ್ತು ಜನರಿಂದ ಹಣ ವಸೂಲಿ ಮಾಡುತ್ತಾರೆಂಬ ದೂರಿನ ಹಿನ್ನೆಲೆಯಲ್ಲಿ ಎಸ್ಪಿ ಈ ಕಾರ್ಯಾಚರಣೆಗೆ ಇಳಿದಿದ್ದರು. ಸ್ವತಃ ಎಸ್ಪಿಯವರೇ ಸ್ಥಳಕ್ಕೆ ಆಗಮಿಸಿ ಮಂಗಳಮುಖಿಯನ್ನು ಅಲ್ಲಿಂದ ತೆರವುಗೊಳಿಸಲು ಮುಂದಾದರು.

ಮಲ್ಪೆ : ರಾಜ್ಯದ ಮೊದಲ ತೇಲುವ ಸೇತುವೆ ( ಫ್ಲೋಟಿಂಗ್ ಬ್ರಿಡ್ಜ್‌)  ಶೀಘ್ರ ಪ್ರವಾಸಿಗರಿಗೆ ಮುಕ್ತ – Vishwanews24

ಎಸ್ಪಿ ಎಂಬುದನ್ನು ತಿಳಿಯದ ಕೆಲವು ಮಂಗಳ ಮುಖಿಯರು ಎಸ್ಪಿ ಜೊತೆ ವಾಗ್ವಾದಕ್ಕೆ ಇಳಿದು ಅವಾಚ್ಯ ಶಬ್ದಗಳಿಂದ ಬೈದರೆನ್ನಲಾಗಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಲ್ಲರನ್ನು ಚದುಸಿದರು.

ಈ ವೇಳೆ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆ ಗ್ರಾಹಕರನ್ನು ರಿಕ್ಷಾದಲ್ಲಿ ಕರೆ ತಂದು ಅನೈತಿಕ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಇಬ್ಬರು ಪಿಂಪ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಅವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುಬಿದ್ರಿ: ಹೆಜ್ಜೇನು ದಾಳಿ – ರಕ್ಷಣೆಗಾಗಿ ಸಮುದ್ರಕ್ಕೆ ಹಾರಿದ ವ್ಯಕ್ತಿ ಸಾವು, ಒರ್ವ ಗಂಭೀರ ಹಲವರಿಗೆ ಗಾಯ – Vishwanews24

Leave a Reply