Featured

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ – vishwanews24

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ

ಉಡುಪಿ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ ಜಾಲದಲ್ಲಿ ಬೀಳಿಸಿ, ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ವಂಚಿಸಿರುವ ಅತ್ಯಂತ ಗಂಭೀರ ಹಾಗೂ ಪೈಶಾಚಿಕ ಪ್ರಕರಣವೊಂದು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತೆಕ್ಕಟ್ಟೆಯ ಜಿತೇಂದ್ರ ಶೆಟ್ಟಿ(ಆರೋಪಿ-1) ಹಾಗೂ ಸುಶಾನ್ ಪೂಜಾರಿ (ಆರೋಪಿ-2) ಎಂಬ ಇಬ್ಬರು ಆರೋಪಿಗಳ ವಿರುದ್ಧ ಪೋಕ್ಸೋ (POCSO) ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಬಂದಿಸಲಾಗಿದೆ.

ಇದನ್ನೂ ಓದಿ:

ಸ್ನಾಪ್‌ಚಾಟ್‌ ಮೂಲಕ ಪರಿಚಯ

ಕೊಡವೂರು ಮಲ್ಪೆ ನಿವಾಸಿಯಾದ 17 ವರ್ಷದ ಅಪ್ರಾಪ್ತ ಬಾಲಕಿಗೆ ಕಳೆದ ಮಾರ್ಚ್ ತಿಂಗಳಲ್ಲಿ ‘ಸ್ನಾಪ್‌ಚಾಟ್’  ಸಾಮಾಜಿಕ ಜಾಲತಾಣದ ಮೂಲಕ ಎರಡನೇ ಆರೋಪಿ ಸುಶಾನ್ ಪೂಜಾರಿ ಪರಿಚಯವಾಗಿದ್ದನು. ಈತನ ಮೂಲಕ ಮೊದಲನೇ ಆರೋಪಿ ಜಿತೇಂದ್ರನ ಪರಿಚಯವಾಗಿದೆ. ಬಾಲಕಿಯ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡ ಜಿತೇಂದ್ರ, ದಿನಾಂಕ 25/03/2026 ರಂದು ಆಕೆಯನ್ನು ಪುಸಲಾಯಿಸಿ ಬ್ರಹ್ಮಾವರ ತಾಲೂಕಿನ ಬಾರ್ಕೂರು-ಮಂದಾರ್ತಿ ರಸ್ತೆಯಲ್ಲಿರುವ ‘ರಶ್ಮಿ ಲಾಡ್ಜ್‌’ಗೆ ಕರೆದೊಯ್ದು ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಲ್ಲದೆ ಈ ವಿಷಯವನ್ನು ಯಾರಿಗೂ ಹೇಳದಂತೆ ಬಾಲಕಿಗೆ ಜೀವಬೆದರಿಕೆ ಒಡ್ಡಿದ್ದಾನೆ.

71 ಗ್ರಾಂ ಚಿನ್ನಾಭರಣ ದೋಚಿದ ವಂಚಕರು:

ದೈಹಿಕ ದೌರ್ಜನ್ಯದ ಬೆನ್ನಲ್ಲೇ ಆರೋಪಿಗಳು ಬಾಲಕಿಯನ್ನು ಆರ್ಥಿಕವಾಗಿಯೂ ಲೂಟಿ ಮಾಡಲು ಸಂಚು ರೂಪಿಸಿದ್ದರು. ಜಿತೇಂದ್ರನು ಬಾಲಕಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ನನ್ನ ತಂದೆಗೆ ಪಾರ್ಶ್ವವಾಯು (Paralysis) ಆಗಿದ್ದು, ತುರ್ತು ಹಣದ ಅಗತ್ಯವಿದೆ. ಮನೆಯಿಂದ ಚಿನ್ನಾಭರಣ ತಂದುಕೊಡು, ಒಂದು ವಾರದಲ್ಲಿ ಬಿಡಿಸಿಕೊಡುತ್ತೇನೆ ಎಂದು ನಂಬಿಸಿದ್ದಾನೆ. ಇದನ್ನು ನಿಜವೆಂದು ನಂಬಿದ ಬಾಲಕಿ ಏಪ್ರಿಲ್ ಮೊದಲ ವಾರದಲ್ಲಿ ಮನೆಯಲ್ಲಿದ್ದ ಕಿವಿಯೋಲೆ, ಚಿನ್ನದ ಉಂಗುರಗಳು, ಗಣಪತಿ ಪೆಂಡೆಂಟ್ ಒಳಗೊಂಡ ಚೈನ್ ಸೇರಿದಂತೆ ಭಾರಿ ಪ್ರಮಾಣದ ಒಡವೆಗಳನ್ನು ತಂದು ರೈಲ್ವೇ ಗೇಟ್ ಬಳಿ ಬೈಕ್‌ನಲ್ಲಿ ಬಂದಿದ್ದ ಜಿತೇಂದ್ರ ಮತ್ತು ಸುಶಾನ್‌ಗೆ ನೀಡಿದ್ದಾಳೆ.

ಇದನ್ನೂ ಓದಿ:

ಇದಾದ 15 ದಿನಗಳ ನಂತರ, ಕೊಟ್ಟ ಚಿನ್ನವನ್ನು ಬಿಡಿಸಬೇಕಾದರೆ ಇನ್ನುಳಿದ ಚಿನ್ನವನ್ನೂ ತರಬೇಕೆಂದು ಆರೋಪಿಗಳು ಬಾಲಕಿಯನ್ನು ಮತ್ತೆ ಹೆದರಿಸಿದ್ದಾರೆ. ಆರೋಪಿಗಳ ಮಾತಿಗೆ ಹೆದರಿದ ಬಾಲಕಿ ಪುನಃ ಮನೆಯಲ್ಲಿದ್ದ 2 ಚಿನ್ನದ ಚೈನ್, ಒಂದು ರಿಂಗ್ ಹಾಗೂ ಪೆಂಡೆಂಟ್ ಅನ್ನು ತಂದುಕೊಟ್ಟಿದ್ದಾಳೆ. ಆರೋಪಿಗಳು ಒಟ್ಟಾರೆ ಸುಮಾರು 71 ಗ್ರಾಂ ತೂಕದ ಚಿನ್ನಾಭರಣಗಳನ್ನು ಬಾಲಕಿಯಿಂದ ದೋಚಿದ್ದಾರೆ.

ಹಣ ಹಾಗೂ ಒಡವೆಗಳನ್ನು ಪೀಕಿದ ಮೇಲೂ ಆರೋಪಿಗಳ ಕಾಮದಾಹ ಅಡಗಿರಲಿಲ್ಲ. ದಿನಾಂಕ 01-04-2026 ರಂದು ಕಾರಿನಲ್ಲಿ ಹಾಗೂ 15-04-2026 ರಂದು ಬೈಕ್‌ನಲ್ಲಿ ಬಂದ ಆರೋಪಿಗಳು ಆಕಾಶವಾಣಿ ಬಳಿಯಿಂದ ಬಾಲಕಿಯನ್ನು ಮತ್ತೆ ಅದೇ ರಶ್ಮಿ ಲಾಡ್ಜ್‌ಗೆ ಅಪಹರಿಸಿಕೊಂಡು ಹೋಗಿದ್ದಾರೆ. ಅಲ್ಲಿ ಒಂದನೇ ಆರೋಪಿ ಜಿತೇಂದ್ರ ಬಾಲಕಿಯ ಮೇಲೆ ಸರಣಿ ಅತ್ಯಾಚಾರ ಎಸಗಿದ್ದು, ಎರಡನೇ ಆರೋಪಿ ಸುಶಾನ್ ಈ ಕೃತ್ಯಕ್ಕೆ ಸಂಪೂರ್ಣವಾಗಿ ಸಹಕರಿಸಿ ಸಾಥ್ ನೀಡಿದ್ದಾನೆ.ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅಗತ್ಯ ಕಾನೂನು ಕ್ರಮ ಕೈಗೊಂಡಿದ್ದಾರೆ.

Vishwa News 24

Recent Posts

ಉಡುಪಿ : ಯುವತಿ ನಾಪತ್ತೆ -vishwanews24

ಉಡುಪಿ : ಯುವತಿ ನಾಪತ್ತೆ ಉಡುಪಿ : ಉಡುಪಿ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ…

7 hours ago

ಪಡುಬಿದ್ರಿ : ವ್ಯಕ್ತಿ ನಾಪತ್ತೆ -vishwanews24

ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ: ಎಲ್ಲೂರು ಗ್ರಾಮ ಅದಮಾರು ಅಂಚೆ ಅಂಬೇಡ್ಕರ್ ರೋಡ್ ಆಶಿರ್ವಾದ ಹೌಸ್ ನಿವಾಸಿ ಹರ್ಷಲ್…

7 hours ago

ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ -vishwanews24

ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ ಉಡುಪಿ: ತುಳು ಭಾಷೆಗೆ ಅಧಿಕೃತ…

8 hours ago

ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ -vishwanews24

ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಶೀಘ್ರ…

9 hours ago

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು -vishwanews24

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು…

12 hours ago

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ -vishwanews24

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…

12 hours ago