ಉಡುಪಿ: ಅ.24 ರಂದು ಶ್ರೀಕೃಷ್ಣ ಮಠಕ್ಕೆ ಸುತ್ತೂರು ಶ್ರೀ – vishwanews24
ಉಡುಪಿ: ಅ.24 ರಂದು ಶ್ರೀಕೃಷ್ಣ ಮಠಕ್ಕೆ ಸುತ್ತೂರು ಶ್ರೀ
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರ ಆಶಯದಂತೆ ಮೈಸೂರಿನ ಶ್ರೀ ಸುತ್ತೂರು ಮಠದ ಶ್ರೀ ಶಿವ ರಾತ್ರಿ ದೇಶಿಕೇಂದ್ರ ಸ್ವಾಮೀಜಿ ಯವರು ಅ.24 ರಂದು ಶ್ರೀಕೃಷ್ಣ ಮಠಕ್ಕೆ ಆಗಮಿಸಿ ಶ್ರೀಕಷ್ಣನ ದರ್ಶನ ಪಡೆಯುವರು. ಇದೇ ಸಂದರ್ಭ ಗೀತಾ ಮಂದಿರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಪುತ್ತಿಗೆ ನೃಸಿಂಹ ಸಭಾಭವನ’ವನ್ನು ಸಂಜೆ 4ಕ್ಕೆ ಸುತ್ತೂರು ಶ್ರೀಗಳು ಉದ್ಘಾಟಿಸಿ ಆಶೀರ್ವಚನ ನೀಡುವರು.
ಪರ್ಯಾಯ ಶ್ರೀ ಪುತ್ತಿಗೆ ಮಠಾ ಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿರುವರು. ಒಡಿಶಾ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅಧ್ಯಕ್ಷತೆ ವಹಿಸುವರು.
ಮಂಗಳೂರು : ಅ.22 ರಂದು ಕಪಿಲಾ ಗೋ ಶಾಲೆಯಲ್ಲಿ ಸಾರ್ವಜನಿಕ ಗೋಪೂಜಾ ಕಾರ್ಯಕ್ರಮ – vishwanews24
ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್‌ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಮೊದಲಾದವರು ಭಾಗವಹಿಸುವರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6ರಿಂದ 8ರ ತನಕ ಪ್ರಖ್ಯಾತ ಡ್ರಮ್ಸ್ ಕಲಾವಿದ ಶಿವಮಣಿ ಅವರಿಂದ “ನಾದ ವೈಭವಂ’ ನಡೆಯಲಿದೆ ಎಂದು ಶ್ರೀಮಠದ ಪ್ರಕಟನೆ ತಿಳಿಸಿದೆ.
ಮಂಗಳೂರು: ಮೊಬೈಲ್ ಫೋನ್ ಹ್ಯಾಕ್ ; 64,000 ರೂ. ಕಳೆದುಕೊಂಡ ವ್ಯಕ್ತಿ – vishwanews24
