Featured

ಉಡುಪಿ : ಅ.8 ರಿಂದ ಜಿಲ್ಲೆಯಲ್ಲಿ ಥಿಯೇಟರ್‍ಗಳು ಓಪನ್ -Vishwanews24

ಉಡುಪಿ : ಅ.8 ರಿಂದ ಜಿಲ್ಲೆಯಲ್ಲಿ ಥಿಯೇಟರ್‍ಗಳು ಓಪನ್ -Vishwanews24

ಉಡುಪಿ : ನಾಳೆಯಿಂದ ರಾಜ್ಯಾದ್ಯಂತ ಚಿತ್ರಮಂದಿರಗಳು ತೆರೆಯಲು ಅನುಮತಿ ನೀಡಿದ್ದು, ಚಿತ್ರಗಳು ಪ್ರದರ್ಶನ ಕಾಣಲಿದೆ. ಆದರೆ, ಕರಾವಳಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮಾತ್ರ ಇನ್ನೂ ಒಂದು ವಾರಗಳ ಕಾಲ ಯಾವುದೇ ಚಿತ್ರ ಮಂದಿರಗಳು ತೆರೆಯುವುದಿಲ್ಲ.

ಪಿತೃಪಕ್ಷ ಇರುವುದರಿಂದ ಥಿಯೇಟರ್‍ಗಳನ್ನು ಮತ್ತೆ ಓಪನ್ ಮಾಡಲು ಆಡಳಿತ ಮಂಡಳಿ ಒಪ್ಪುತ್ತಿಲ್ಲ. ಆದ್ದರಿಂದ ಉಡುಪಿ ಜಿಲ್ಲೆಯಲ್ಲಿ ಅ.1 ರಂದು ಯಾವುದೇ ಚಿತ್ರಮಂದಿರಗಳನ್ನು ಓಪನ್ ಮಾಡದೆ ಇರಲು ತೀರ್ಮಾನಿಸಲಾಗಿದೆ. ಮಲ್ಟಿಪ್ಲೆಕ್ಸ್ ಗಳು ಈಗಾಗಲೇ ಆರಂಭವಾಗಿದ್ದು, ಸಿಂಗಲ್ ಸ್ಕ್ರೀನ್ ಥಿಯೇಟರ್‍ಗಳನ್ನು ಒಂದು ವಾರದ ನಂತರ ಓಪನ್ ಮಾಡಲು ತೀರ್ಮಾನಿಸಲಾಗಿದೆ. ಅದರಂತೆ ಉಡುಪಿಯ ಕಲ್ಪನಾ, ಅಲಂಕಾರ, ಆಶೀರ್ವಾದ್ ಸೇರಿದಂತೆ ಕಾರ್ಕಳ ಮತ್ತು ಕುಂದಾಪುರ ತಾಲೂಕಿನ ಥಿಯೇಟರ್‍ಗಳು ಅಕ್ಟೋಬರ್ ಎಂಟರ ನಂತರ ತೆರೆದುಕೊಳ್ಳಲಿವೆ.

ಅಕ್ಟೋಬರ್ ಮೊದಲ ವಾರದಲ್ಲಿ ಪಿತೃಪಕ್ಷ ಇರುವುದರಿಂದ ಶುಭ ಕಾರ್ಯಗಳನ್ನು ಪಿತೃಪಕ್ಷದಲ್ಲಿ ಮಾಡೋದಿಲ್ಲ. 8 ನೇ ತಾರೀಖಿನಿಂದ ಥಿಯೇಟರ್‍ಗಳು ಓಪನ್ ಮಾಡಬೇಕು ಅಂದ್ರೆ ಸುಮಾರು 30 ಸಾವಿರ ರೂಪಾಯಿ ಖರ್ಚು ಇದೆ. 5 ತಿಂಗಳಿಂದ ಥಿಯೇಟರ್ ಬಂದ್ ಇರುವುದರಿಂದ ಸೀಟುಗಳು ಕಾರ್ಪೆಟ್ ಗಳು, ಹಾಲ್, ಜಗಲಿ ಸ್ಕ್ರೀನ್ ಸೇರಿದಂತೆ ಥಿಯೇಟರ್‍ರೊಳಗೆ ಸಂಪೂರ್ಣ ಶುಚಿತ್ವ ಮಾಡಬೇಕಾಗಿದೆ. ಕೊರೊನಾ ಮೊದಲ ಅಲೆಯ ಸಂದರ್ಭ 11 ತಿಂಗಳು ಥಿಯೇಟರ್ ಓಪನ್ ಆಗಿರಲಿಲ್ಲ ಈ ಸಂದರ್ಭದಲ್ಲಿ ಎಲ್ಲಾ ಚಿತ್ರಮಂದಿರಗಳಿಗೆ 40 ಸಾವಿರ ರುಪಾಯಿ ಖರ್ಚಾಗಿತ್ತು.

ಅಕ್ಟೋಬರ್ 1ಕ್ಕೆ ಯಾವುದು ದೊಡ್ಡ ಬಜೆಟ್ ನ ಚಿತ್ರಗಳು, ದೊಡ್ಡ ಸ್ಟಾರ್ ಕಾಸ್ಟ ಚಿತ್ರಗಳು ರಿಲೀಸ್ ಇಲ್ಲ. ಪಿತೃಪಕ್ಷ ಈಗ ನಡೆಯುತ್ತಿದೆ. ಮಹಾಲಯ ಅಮಾವಾಸ್ಯೆ ನಂತರ ಒಳ್ಳೆ ದಿನಗಳು ಇರುವುದರಿಂದ ಆನಂತರ ಥಿಯೇಟರ್‍ಗಳನ್ನು ಓಪನ್ ಮಾಡುತ್ತೇವೆ. ಅನಾದಿಕಾಲದಿಂದ ಜನ ನಂಬಿಕೊಂಡು ಬಂದಿರುವುದರಿಂದ ದಿನಗಳು ಒಳ್ಳೆಯದಲ್ಲ ಎಂಬ ನಂಬಿಕೆ ನಮ್ಮಲ್ಲಿದೆ. ಯಾವುದೇ ಸಮಸ್ಯೆಗಳು ಆಗದಿರಲಿ, ಒಳ್ಳೆ ಬ್ಯುಸಿನೆಸ್ ಆಗಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ವಿ.ಎಸ್ ಹೊಳ್ಳ ಅವರು ಮಾಹಿತಿ ನೀಡಿದ್ದಾರೆ.

Vishwa News 24

Recent Posts

ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ – vishwanews24

ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…

19 hours ago

ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ – vishwanews24

ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…

20 hours ago

ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ – vishwanews24

ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…

20 hours ago

ಉಡುಪಿ : ವ್ಯಕ್ತಿ ನಾಪತ್ತೆ – vishwanews24

ಉಡುಪಿ : ವ್ಯಕ್ತಿ ನಾಪತ್ತೆ      ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…

21 hours ago

ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ – vishwanews24

ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…

21 hours ago

ಉಡುಪಿ : ಜು. 10 ರಂದು ನೇರ ಸಂದರ್ಶನ – vishwanews24

ಉಡುಪಿ : ಜು. 10 ರಂದು ನೇರ ಸಂದರ್ಶನ      ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ‍್ಸ್ ಬಿಲ್ಡಿಂಗ್s…

21 hours ago