Featured

ಉಡುಪಿ: ಆನ್‌ಲೈನ್‌ ವಂಚನೆ : 12.25 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ – vishwanews24

ಉಡುಪಿ: ಆನ್‌ಲೈನ್‌ ವಂಚನೆ: ₹ 12.25 ಲಕ್ಷ ಕಳೆದುಕೊಂಡ ವ್ಯಕ್ತಿ

ಉಡುಪಿ: ಅಧಿಕ ಲಾಭಾಂಶದ ಆಸೆಗೆ ಆನ್‌ಲೈನ್ ಲಿಂಕ್ ಬಳಸಿ ಹೂಡಿಕೆ ಮಾಡಿದ ವಿದೇಶದಲ್ಲಿ ಉದ್ಯೋಗದಲ್ಲಿರುವ ಹೆರ್ಮುಂಡೆ ನಿವಾಸಿಯೊಬ್ಬರು 12.25 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಕಾರ್ಕಳ ತಾಲೂಕಿನ ಹೆರ್ಮುಂಡೆ ವಿಷ್ಣುಮೂರ್ತಿ ದೇವಸ್ಥಾನ ಸಮೀಪದ ಬೀಜಪಾಡಿ ಮನೆಯ ಲಿಯೋ ಜೆರೋಮ್ ಮೆಂಡೋನ್ಸಾ (40) ಅವರು ಸುಮಾರು 15 ವರ್ಷಗಳಿಂದ ದುಬ್ಬಾಯಲ್ಲಿ ಕಂಪ್ಯೂಟರ್ ಎಕ್ಸಸರೀಸ್ ಸೇಲ್ಸ್ ಕೆಲಸ ಮಾಡಿಕೊಂಡಿದ್ದು, ಕಾರ್ಕಳ ಕಣಜಾರು ಕೆನರಾ ಬ್ಯಾಂಕ್‌ನಲ್ಲಿ ಎನ್‌ಆರ್‌ಐ ಖಾತೆ, ನಿಟ್ಟೆ ದೂಪದಕಟ್ಟೆ ಯೂನಿಯನ್ ಬ್ಯಾಂಕ್‌ನಲ್ಲಿ ಎಸ್‌ಬಿ ಖಾತೆ ಹೊಂದಿದ್ದರು.

ನ. 12ರಂದು ಲಿಯೋ ಅವರು ದುಬ್ಬಾಯಲ್ಲಿರುವಾಗ ಅವರನ್ನು ಯಾರೋ ಅಪರಿಚಿತರು ‘ಇನ್‌ಸ್ಟಾಫ್ಲೋ ಅರ್ನಿಂಗ್’ ಎಂಬ ಹೆಸರಿನ ಟೆಲಿಗ್ರಾಮ್ ಗ್ರೂಪಿಗೆ ಸೇರಿಸಿದ್ದು, ಅದರಲ್ಲಿ ಪ್ರಿಯಾ, ಡಿಪನ್ನಿತಾ ಖಾತೆಯಿಂದ ಚಾಟಿಂಗ್ ಆರಂಬಿಸಿ ರೆವೆನ್ಯೂ ಟಾಸ್ಕ್‌ನಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿದರು. ಅದರಂತೆ ಲಿಯೋ ಮೊದಲು ಅವರು ತಿಳಿಸಿದ ಖಾತೆಗೆ 1,100 ರೂ. ಹೂಡಿಕೆ ಮಾಡಿದ್ದು 1,530 ರೂ. ಲಾಭ ಬಂದಿರುತ್ತದೆ. ಹಾಗೆಯೇ ಸುಮಾರು 10 12 ಬಾರಿ 1,100 ರೂಪಾಯಿಯಂತೆ ಅವರು ತಿಳಿಸಿದ ಖಾತೆಗೆ ಹೂಡಿಕೆ ಮಾಡಿದ್ದು, ಪ್ರತೀ ಬಾರಿಯೂ 1,530 ರೂ. ಲಾಭಾಂಶ ದೊರೆತಿರುತ್ತದೆ. ಅನಂತರ ನ.14ರಂದು ನಿಶ್ಚಿತಾ ಶೆಟ್ಟಿ ಎಂಬ ಖಾತೆದಾರರು ಚಾಟಿಂಗ್ ಮೂಲಕ ಲಿಯೋ ಅವರಿಗೆ ಹಲವು ಟಾಸ್ಕ್ ನೀಡಿದ್ದರು.

digitvisionuoce.cc ಎಂಬ ವೆಬ್ ವಿಳಾಸ ನೀಡಿ, ಅದರಲ್ಲಿ ಯುಸರ್ ನೇಮ್, ಐಡಿ ಹಾಕುವಂತೆ ತಿಳಿಸಿದ್ದರು, ಅದರಂತೆ ಯುಸರ್ ನೇಮ್ ಹಾಗೂ ಐಡಿ ಹಾಕಿದರು. ಆ ಬಳಿಕ ಅವರು 4,00,000 ರೂ.ಗಳನ್ನು WIPRO BTC/USDT ಷೇರ್‌ನಲ್ಲಿ ಹೂಡಿಕೆ ಮಾಡುವಂತೆ ತಿಳಿಸಿದ್ದು, ನ. 15 ರಂದು ಸಾಕ್ಷಿ ವೈಷ್ಣವ್ ಎಂಬ ಹೆಸರಿನ ಬ್ಯಾಂಕ್ ಖಾತೆಯನ್ನು ನೀಡಿ ಅದಕ್ಕೆ 50,000 ರೂ. ಗೂಗಲ್ ಪೇ ಮಾಡುವಂತೆ ತಿಳಿಸಿದಂತೆ ಲಿಯೋ ಅವರು 50 ಸಾವಿರ ಗೂಗಲ್ ಪೇ ಮಾಡಿದರು. ಅನಂತರ ನ. 15ರಿಂದ 17ರ ವರೆಗೆ ಹಂತ ಹಂತವಾಗಿ 12,25,000 ರೂಪಾಯಿಗಳನ್ನು ಹೂಡಿಕೆ ಮಾಡಿದ್ದು, ನಿಶ್ಮಿತಾ ಶೆಟ್ಟಿ ಎಂಬ ಖಾತೆದಾರರು ಲಿಯೋ ಅವರು ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಅದರ ಲಾಭಾಂಶವನ್ನಾಗಲೀ ನೀಡದೇ ವಂಚನೆ ಮಾಡಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Vishwa News 24

Recent Posts

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ – vishwanews24

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…

7 hours ago

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ – vishwanews24

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್‌ 21 ರಂದು ನೀಟ್‌–ಯುಜಿ  ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…

7 hours ago

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

1 day ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

1 day ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

1 day ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

1 day ago