ಉಡುಪಿ: ವಾಟ್ಸ್ ಅಫ್ ಗೆ ವಾಯ್ಸ್ ಸಂದೇಶ ಕಳುಹಿಸಿ 25 ಲಕ್ಷ ಹಣ ಬಹುಮಾನ ಬಂದಿರುವುದಾಗಿ ನಂಬಿಸಿ ಆನ್‌ಲೈನ್ ಮುಖಾಂತರ ವ್ಯಕ್ತಿಯೊಬ್ಬರಿಗೆ 5,63,150 ಲಕ್ಷ ರೂ. ವಂಚಿಸಿದ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿವಾಕರ್ ಎಂಬವರ ವಾಟ್ಸ್ ಅಫ್ ನಂಬರ್ ಗೆ ಅಪರಿಚಿತ ವ್ಯಕ್ತಿಗಳು ವಾಯ್ಸ್ ಸಂದೇಶ ಕಳುಹಿಸಿ 25 ಲಕ್ಷ ಹಣ ಬಹುಮಾನ ಬಂದಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ದಾಖಲಾತಿಗಳನ್ನು ವಾಟ್ಸ್ ಅಫ್ ಗೆ ಕಳುಹಿಸಿ ದಿವಾಕರ್ ಅವರು ನಂಬುವಂತೆ ಮಾಡಿ ನಂತರ ಯಾರೋ ಅಪರಿಚಿತ ವ್ಯಕ್ತಿಗಳು ದೂರವಾಣಿ ಕರೆ ಮಾಡಿ, ವಿವಿಧ ಇಲಾಖೆಯ ಅಧಿಕಾರಿಗಳೆಂದು ನಂಬಿಸಿ ಬಹುಮಾನದ ಮೊತ್ತಕ್ಕೆ ಡಿಪಾಸಿಟ್ ಹಣವನ್ನು ಕಟ್ಟುವಂತೆ ತಿಳಿಸಿದ್ದಾರೆ.
ಆ ಬಳಿಕ ಎಸ್.ಬಿ.ಐ, ಐಡಿಬಿಐ ಬ್ಯಾಂಕ್ ಗಳ ವಿವಿಧ ಖಾತೆಗಳನ್ನು ನೀಡಿದ್ದು, ಇದನ್ನು ನಂಬಿದ ದಿವಕಾರ್ ಜಲ್ದಿ ಕ್ಯಾಶ್ ನಿಂದ ರೂಪಾಯಿ 1,90,000 ಹಾಗೂ ಐಡಿಐಬಿ ಬ್ಯಾಂಕ್ ನಿಂದ ಉಡುಪಿಯಿಂದ ರೂಪಾಯಿ 3,73,150 ರಂತೆ ಒಟ್ಟು ರೂಪಾಯಿ 5,63,150 ಹಣವನ್ನು ಡಿಪಾಸಿಟ್ ಮಾಡಿರುತ್ತಾರೆ.
ಆದರೆ ಬಳಿಕ ಬಹುಮಾನದ ಹಣವನ್ನು ನೀಡದೆ, ಡಿಪಾಸಿಟ್ ಮಾಡಿಸಿಕೊಂಡ ಹಣವನ್ನು ಕೂಡ ವಾಪಾಸ್ಸು ನೀಡದೆ ಒಟ್ಟು ರೂಪಾಯಿ 5,63,150ಹಣವನ್ನು ಮೋಸ ಮಾಡಿರುವುದಾಗಿ ಸೆನ್ ಅಪರಾಧ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.
ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತ: ಕೇಂದ್ರ ಸರ್ಕಾರ ಆದೇಶ ಬೆಂಗಳೂರು: ಅಡುಗೆ ಎಣ್ಣೆ ಮೇಲಿನ ಆಮದು ಸುಂಕ…
ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಸೆ.28 ರಂದು ಪ್ರದೋಷ್ ಮಾಫಿ ಸಾಕ್ಷಿ ದಾಖಲಿಸಲು ಕೋರ್ಟ್ ಆದೇಶ ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ…
ಬರ ಪರಿಸ್ಥಿತಿ : ಕರ್ನಾಟಕಕ್ಕೆ ನೆರವು ನೀಡುವುದು ಪ್ರಧಾನಮಂತ್ರಿಗಳ ಕರ್ತವ್ಯ : ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು : “ಕರ್ನಾಟಕದಲ್ಲಿ 200ಕ್ಕೂ…
ವಾಕ್ ವಿತ್ ಕಮಿಷನರ್: ಮಂಗಳೂರಿನ ಹಂಪನಕಟ್ಟೆಯಲ್ಲಿ ಹೋಟೆಲ್ ಪರಿಶೀಲನೆ.. ಟ್ರೇಡ್ ಲೈಸೆನ್ಸ್ ಹಾಗೂ ಸ್ವಚ್ಛತೆ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಫುಟ್‌ಪಾತ್ ಒತ್ತುವರಿ…
ಮಂಗಳೂರು : ಎಂಡಿಎಂಎ ಮಾರಾಟಕ್ಕೆ ಯತ್ನ ; 23.20 ಗ್ರಾಂ ಮಾದಕ ವಸ್ತು ವಶ, ಆರೋಪಿ ಬಂಧನ ಮಂಗಳೂರು: ಮಂಗಳೂರು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಉಡುಪಿ: ಟೀಂ ಇಂಡಿಯಾದ…