Featured

ಲಾವಣ್ಯ ಹತ್ಯೆ ಪ್ರಕರಣ : ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಆರೋಪಿ ಪೊಲೀಸ್ ವಶಕ್ಕೆ – vishwanews24

ಲಾವಣ್ಯ ಹತ್ಯೆ ಪ್ರಕರಣ : ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಆರೋಪಿ ಪೊಲೀಸ್ ವಶಕ್ಕೆ

ಮಂಗಳೂರು: ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಜುಲೈ 16ರಂದು ನಡೆದ ಲಾವಣ್ಯ ಹತ್ಯೆ ಪ್ರಕರಣದ ಆರೋಪಿ, ಬೆಳ್ತಂಗಡಿ ಓಡಿಲ್ನಾಳ ನಿವಾಸಿ ಚೇತನ್ ನನ್ನು ಬಂಟ್ವಾಳ ನಗರ ಪೊಲೀಸರು ಸೋಮವಾರ (ಜುಲೈ 27) ಅಧಿಕೃತವಾಗಿ ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತನ ಆರೋಗ್ಯ ಸ್ಥಿರಗೊಂಡ ಹಿನ್ನೆಲೆಯಲ್ಲಿ 11 ದಿನಗಳ ಬಳಿಕ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಕಕ್ಯಪದವು ನಿವಾಸಿ ಲಾವಣ್ಯ ಎಂಬ ಯುವತಿಯನ್ನು ಆರೋಪಿ ಚೇತನ್ ಸಾರ್ವಜನಿಕ ಸ್ಥಳದಲ್ಲೇ ಮಾರಕಾಸ್ತ್ರದಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದ. ಕೃತ್ಯ ಎಸಗಿದ ಬಳಿಕ ಕಾರಿನಲ್ಲಿ ಪರಾರಿಯಾಗಿದ್ದ ಆರೋಪಿಯನ್ನು ಘಟನೆ ನಡೆದ ಮರುದಿನವೇ ಪೊಲೀಸರು ಮಂಗಳೂರಿನಲ್ಲಿ ವಶಕ್ಕೆ ಪಡೆದಿದ್ದರು. ಆದರೆ, ಕೃತ್ಯದ ಬಳಿಕ ಆರೋಪಿ ಇಲಿಪಾಷಾಣ ಸೇವಿಸಿದ್ದ ಎನ್ನಲಾದ ಹಿನ್ನೆಲೆಯಲ್ಲಿ ಆತನನ್ನು ಮೊದಲು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಹಾಗೂ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದ ಚೇತನ್ ಚೇತರಿಸಿಕೊಂಡ ನಂತರ ಆತನನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಸಂಪೂರ್ಣವಾಗಿ ಗುಣಮುಖನಾದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ಎಎಸ್‌ಪಿ ಯಶ್ ಕುಮಾರ್ ಶರ್ಮ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣೆಯ ಇನ್ಸ್‌ಪೆಕ್ಟರ್ ಆನಂತಪದ್ಮನಾಭ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

Vishwa News 24

Recent Posts

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…

2 days ago

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ : ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! vishwanews24

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…

2 days ago

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  – vishwanews24

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…

2 days ago

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು – vishwanews24

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…

2 days ago

ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ – vishwanews24

 ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್‌.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…

2 days ago

ಉಡುಪಿ: ತುಳುನಾಡಿನ, ತುಳು ಜನರ ಭಾವನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ : ರಮೇಶ್ ಕಾಂಚನ್ – vishwanews24

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…

2 days ago