ಉಡುಪಿ: ಇಂದು 241 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣ -Vishwanews24

Featured, ಉಡುಪಿ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶನಿವಾರ ಒಟ್ಟು 241 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 7731 ಕ್ಕೆ ಏರಿಕೆಯಾಗಿದೆ.

ಶನಿವಾರ 1556 ವರದಿಗಳು ನೆಗೆಟಿವ್ ಬಂದಿದ್ದು, 241 ಪಾಸಿಟಿವ್ ಬಂದಿವೆ. 1475 ವರದಿಗಳು ಬರುವುದು ಬಾಕಿ ಇದೆ.

ಜಿಲ್ಲೆಯಲ್ಲಿ ಶನಿವಾರ 229 ಮಂದಿ ಗುಣಮುಖರಾಗಿದ್ದು ಇದುವರೆಗೂ 5101 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2560 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಕೋರೊನಾದಿಂದ ಶನಿವಾರ 2 ಸಾವು ಸಂಭವಿಸಿದ್ದು, ಇದುವರೆಗೆ ಕೊರೋನಾದಿಂದ ಒಟ್ಟು 77ಮಂದಿ ಸಾವನಪ್ಪಿದ್ದಾರೆ.