Featured

ಉಡುಪಿ: ಏ.3ರಂದು ಕೋಟ ಶ್ರೀನಿವಾಸ ಪೂಜಾರಿಯವರ ನಾಮಪತ್ರ ಸಲ್ಲಿಕೆ ; ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ – Vishwanews24

ಉಡುಪಿ: ಏ.3ರಂದು ಕೋಟ ಶ್ರೀನಿವಾಸ ಪೂಜಾರಿಯವರ ನಾಮಪತ್ರ ಸಲ್ಲಿಕೆ ; ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ

ಉಡುಪಿ: ಏ.3ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಬೆಳಿಗ್ಗೆ ಗಂಟೆ 10ಕ್ಕೆ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ.

ಮಾಜಿ ಕೇoದ್ರ ಸಚಿವ, ಹಿಂದೂ ಫೈರ್ ಬ್ರಾoಡ್ ಬಸವನಗೌಡ ಪಾಟೀಲ್ ಯತ್ನಾಳ್ ರವರು ದಿಕ್ಸೂಚಿ ಭಾಷಣ ಮಾಡಲಿರುವರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್, ಜಿಲ್ಲೆಯ ಶಾಸಕರುಗಳಾದ ಯಶ್ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಸಹಿತ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ.

ಪಕ್ಷದ ಪ್ರಮುಖರು, ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ, ಮಹಾಶಕ್ತಿ ಕೇoದ್ರ, ಶಕ್ತಿ ಕೇಂದ್ರ ಮತ್ತು ಬೂತ್ ಪದಾಧಿಕಾರಿಗಳು, ಸಮಿತಿ ಸದಸ್ಯರು, ಕಾರ್ಯಕಾರಿಣಿ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಪಕ್ಷದ ಹಿತೈಷಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ರಾಜ್ಯಕ್ಕೆ 3705.30 ಕೋಟಿ ರೂ. ಬರ ಪರಿಹಾರ ನೀಡಿ: ಸಿಎಂ ಡಿ.ಕೆ.ಶಿವಕುಮಾರ್ ಮನವಿ – vishwanews24

ರಾಜ್ಯಕ್ಕೆ 3705.30 ಕೋಟಿ ರೂ. ಬರ ಪರಿಹಾರ ನೀಡಿ: ಸಿಎಂ ಡಿ.ಕೆ.ಶಿವಕುಮಾರ್ ಮನವಿ ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಸಿಎಂ…

1 minute ago

ಮಣಿಪಾಲ: ಕ್ಯು ಆರ್ ಕೋಡ್ ಬದಲಿಸಿ 12 ಲಕ್ಷ ರೂಪಾಯಿ ವಂಚನೆ – vishwanews24

ಮಣಿಪಾಲ: ಕ್ಯು ಆರ್ ಕೋಡ್ ಬದಲಿಸಿ 12 ಲಕ್ಷ ರೂಪಾಯಿ ವಂಚನೆ ಮಣಿಪಾಲ: ಕಂಪೆನಿ ಕ್ಯು ಆರ್‌ಕೋಡ್ ಬಳಸದೆ ಮರ್ಚೆಂಟ್…

11 minutes ago

ಬಂಟ್ವಾಳ, ಬೆಳ್ತಂಗಡಿ, ಉಳ್ಳಾಲ , ಉಡುಪಿ, ಬೈಂದೂರು ಬರಪೀಡಿತ ತಾಲೂಕು : ರಾಜ್ಯ ಸರಕಾರ ಘೋಷಣೆ – vishwanews24

ಬಂಟ್ವಾಳ, ಬೆಳ್ತಂಗಡಿ, ಉಳ್ಳಾಲ , ಉಡುಪಿ, ಬೈಂದೂರು ಬರಪೀಡಿತ ತಾಲೂಕು : ರಾಜ್ಯ ಸರಕಾರ ಘೋಷಣೆ ಮಂಗಳೂರು/ಉಡುಪಿ: ದ. ಕ.…

15 minutes ago

ಉಚ್ಚಿಲ ದಸರಾ : ಅ.13ರಂದು ಕುಸ್ತಿ ಸ್ಪರ್ಧೆ – vishwanews24

ಉಚ್ಚಿಲ ದಸರಾ : ಅ.13ರಂದು ದೇವಸ್ಥಾನದ ಮುಂಭಾಗದಲ್ಲಿ ಕುಸ್ತಿ ಸ್ಪರ್ಧೆ ಉಚ್ಚಿಲ: ದ.ಕ. ಮೊಗವೀರ ಮಹಾಜನ ಸಂಘದ ವತಿಯಿಂದ ಉಚ್ಚಿಲ…

36 minutes ago

ಉಡುಪಿ: ಅ. 11ರಿಂದ 20ರವರೆಗೆ ಕೆಎಸ್‌ಆರ್‌ಟಿಸಿಯಿಂದ ದಸರಾ ವಿಶೇಷ ಪ್ಯಾಕೇಜ್ ಪ್ರವಾಸ – vishwanews24

ಉಡುಪಿ: ಅ. 11ರಿಂದ 20ರವರೆಗೆ ಕೆಎಸ್‌ಆರ್‌ಟಿಸಿಯಿಂದ ದಸರಾ ವಿಶೇಷ ಪ್ಯಾಕೇಜ್ ಪ್ರವಾಸ ಉಡುಪಿ : ದಸರಾ ಹಬ್ಬದ ಪ್ರಯುಕ್ತ ಸಾರ್ವಜನಿಕರು…

1 hour ago

ಅಪಘಾತದಲ್ಲಿ ಮೃತಪಟ್ಟ ಪುತ್ರನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು – vishwanews24

ಅಪಘಾತದಲ್ಲಿ ಮೃತಪಟ್ಟ ಪುತ್ರನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು ಹಾಸನ: ಹೊಳೆನರಸೀಪುರದ ಚಾಕೇನಹಳ್ಳಿ ಕಟ್ಟೆ ಗ್ರಾಮದಲ್ಲಿ ಅಪಘಾತದಿಂದ…

1 hour ago