ಉಡುಪಿ: ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸೊಸೈಟಿಯಿಂದ ಗ್ರಾಹಕರಿಗೆ ವಂಚನೆ , ಸಂತ್ರಸ್ತರಿಂದ ಕಚೇರಿಗೆ ಮುತ್ತಿಗೆ – Vishwanews24
ಉಡುಪಿ: ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸೊಸೈಟಿಯಿಂದ ಗ್ರಾಹಕರಿಗೆ ವಂಚನೆ , ಸಂತ್ರಸ್ತರಿಂದ ಕಚೇರಿಗೆ ಮುತ್ತಿಗೆ
ಉಡುಪಿ: ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸೊಸೈಟಿಯಿಂದ 100 ಕೋಟಿಗೂ ಮಿಕ್ಕಿ ವಂಚನೆ ಆರೋಪ ಬಂದಿದ್ದು, ಸಹಕಾರಿ ಬ್ಯಾಂಕ್ ಕಚೇರಿಗೆ
ಸಂತ್ರಸ್ತರು ಉಡುಪಿ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸೊಸೈಟಿಗೆ ಭೇಟಿ ನೀಡಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಸಹಕಾರ ಬ್ಯಾಂಕ್ ಮುಖ್ಯಸ್ಥ ಬಿ ವಿ ಲಕ್ಷ್ಮೀನಾರಾಯಣ ನಾಪತ್ತೆಯಾಗಿದ್ದಾರೆ.
ಇನ್ನು ವಿವಿಧ ಸೊಸೈಟಿ ಮತ್ತು ಗ್ರಾಹಕರಿಂದ 100 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿ ವಂಚಿಸಿದ್ದು, ಠೇವಣಿ ಹಣವನ್ನು ಹಲವು ಕಡೆ ಹೂಡಿಕೆ ಮಾಡಿ ಸೊಸೈಟಿ ನಷ್ಟದಲ್ಲಿದೆ ಎನ್ನಲಾಗಿದೆ.
ಉಡುಪಿ ಕಮಾಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಸಾವಿರಾರು ಜನರು ಠೇವಣಿ ಹಣವನ್ನು ಇಟ್ಟಿದ್ದು, ಜೂನ್ ತಿಂಗಳಿಂದ ಗ್ರಾಹಕರಿಗೆ ಸೊಸೈಟಿ ಯಾವುದೇ ಬಡ್ಡಿಯನ್ನು ನೀಡದೆ ಸತಾಯಿಸುತ್ತಿದ್ದು, ಇದೀಗ ಹಣಕ್ಕಾಗಿ ಗ್ರಾಹಕರು ಸೊಸೈಟಿಗೆ ಮುತ್ತಿಗೆ ಹಾಕಿದ್ದಾರೆ
ಇನ್ನು ಉಡುಪಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರು: ಕುಕ್ಕರ್ ಸ್ಫೋಟದಲ್ಲಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಮನೆ ನವೀಕರಣ – Vishwanews24
