ಜಿಲ್ಲೆಯಾದ್ಯಂತ ಜನವರಿ 21ರಿಂದ ಜನವರಿ 29 ರವರೆಗೆ “ವಿಜಯ ಸಂಕಲ್ಪ ಅಭಿಯಾನ” ನಡೆಯುತ್ತಿದ್ದು, ಇಂದು ದಿನಾಂಕ 21-01-2023 ರಂದು ಕರಂಬಳ್ಳಿ ವಾರ್ಡಿನ ಬೂತ್ ಸಂಖ್ಯೆ 146 ವ್ಯಾಪ್ತಿಯಲ್ಲಿ ನಡೆದ “ವಿಜಯ ಸಂಕಲ್ಪ ಅಭಿಯಾನ” ದಲ್ಲಿ ಶಾಸಕರಾದ ಕೆ. ರಘುಪತಿ ಭಟ್ ರವರು ಭಾಗವಹಿಸಿದರು.
ಕರಂಬಳ್ಳಿ ವಾರ್ಡಿನ ಬೂತ್ ಸಂಖ್ಯೆ 146 ವ್ಯಾಪ್ತಿಯ ಮನೆ ಮನೆಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಕರಪತ್ರ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಕಳೆ 2018 ರಿಂದ ಈ ವರೆಗೆ ಶಾಸಕ ರಘುಪತಿ ಭಟ್ ಅವರು ಮಂಜೂರುಗೊಳಿಸಿದ ಅನುದಾನದ ಸಮಗ್ರ ವಿವರದ ಸಾಧನೆಯ ಕಿರುಹೊತ್ತಿಗೆ ನೀಡಿ 8000090009 ನಂಬರಿಗೆ ಕರೆ ನೀಡುವ ಮೂಲಕ ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವದ ನೋಂದಣಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಗಿರಿಧರ್ ಆಚಾರ್ಯ ಕರಂಬಳ್ಳಿ, ವಿಜಯ ಸಂಕಲ್ಪ ಅಭಿಯಾನದ ಉಸ್ತುವಾರಿಗಳಾದ ರಾಘವೇಂದ್ರ ಕಿಣಿ, ಕರಂಬಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕಿಶೋರ್ ಕರಂಬಳ್ಳಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ್, ಬೂತ್ ಅಧ್ಯಕ್ಷರಾದ ಪಾಂಡುರಂಗ ಶೆಟ್ಟಿಗಾರ್, ಗಿರೀಶ್ ಕೆ, ಜಯಕರ ಆಚಾರ್ಯ, ಸತ್ಯನಾರಾಯಣ, ಕಾರ್ಯಕರ್ತರಾದ ಮಂಜುಳಾ ಪ್ರಸಾದ್, ಉಷಾ ಪೂಜಾರಿ, ಗಿರೀಶ್ ಉಪಸ್ಥಿತರಿದ್ದರು.
ಸುಳ್ಯ: ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…
ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ ಬೆಂಗಳೂರು: ನನಗೆ ಮದ…
ಎಂಆರ್‌ಪಿಎಲ್ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…
ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…
ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…