ಉಡುಪಿ: ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಅಂಬಲಪಾಡಿ ಗ್ರಾ. ಪಂ ವ್ಯಾಪ್ತಿಯಲ್ಲಿ ಹಲವರು ಕಾಂಗ್ರೆಸ್ ಪಕ್ಷ ಸೇರ್ಪಡೆ -Vishwanews24

Featured, ಉಡುಪಿ

ಉಡುಪಿ: ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಅಂಬಲಪಾಡಿ ಗ್ರಾ. ಪಂ ವ್ಯಾಪ್ತಿಯಲ್ಲಿ ಹಲವರು ಕಾಂಗ್ರೆಸ್ ಪಕ್ಷ ಸೇರ್ಪಡೆ -Vishwanews24

ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಗ್ರಾಮ ಪಂಚಾಯತ್ ಚುನಾವಣೆ ಸಮಾಲೋಚನಾ ಸಭೆಯಲ್ಲಿ ಡಿ.9ರ ಬುಧವಾರದಂದು ನಡೆಯಿತು.

ಈ ವೇಳೆ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲಕ್ಷ್ಮಣ್ ಪೂಜಾರಿ ಅಂಬಲಪಾಡಿ ಸದಾನಂದ ಕಾಂಚನ್ ಬಂಕರ್‍ಕಟ್ಟೆ, ದಾಮೋದರ್ ಕುಂದರ್, ದಯಾನಂದ ಪೂಜಾರಿ, ಕರುಣಾಕರ್, ಚಂದ್ರಶೇಖರ್ ಇವರ ನೇತೃತ್ವದಲ್ಲಿ ಸಾಯಿನಾಥ್ ಕೋಟ್ಯಾನ್, ನವೀನ್ ಸುವರ್ಣ, ಶ್ರೀಧರ್, ಗಣೇಶ್ ಪೂಜಾರಿ, ಅಶೋಕ್ ಆಚಾರ್ಯ, ಪ್ರಶಾಂತ್ ಕುಂದರ್, ವಿವೇಕಾನಂದ, ರಾಜೇಶ್ ಆಚಾರ್ಯ, ವಿನ್ಯಾಸ, ವಿನುತ್, ಪ್ರಜ್ವಲ್, ಪ್ರಸನ್ನ, ಉಜ್ವಲ್ ಕುಂದರ್, ಅಜಯ, ಇವರುಗಳು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪ್ರಮೋದ್ ಮಧ್ವರಾಜ್‍ ಅವರ ಅಭಿಮಾನದಿಂದ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ನೂತನವಾಗಿ ಸೇರ್ಪಡೆಗೊಂಡವರಿಗೆ ಕಾಂಗ್ರೆಸ್ ಧ್ವಜವನ್ನು ನೀಡುವುದರ ಮೂಲಕ ಪಕ್ಷಕ್ಕೆ ಸೇರ್ಪಡೆಗೊಂಡರು.