Featured

ಉಡುಪಿ ಕಾಂಗ್ರೇಸ್‍ನಲ್ಲಿ “ಕೃಷ್ಣಾ” ಬಿಟ್ಟು ಇನ್ನಾರೂ ನಿಂತರೂ ಢಂ ಢಮಾರ್..!! vishwanews24 https://wp.me/p9KQap-jlS

ಉಡುಪಿ ಕಾಂಗ್ರೇಸ್‍ನಲ್ಲಿ “ಕೃಷ್ಣಾ” ಬಿಟ್ಟು ಇನ್ನಾರೂ ನಿಂತರೂ ಢಂ

ಢಮಾರ್..!!

ನೀತಿ-ನಿಯತ್ತಿನ ಕೃಷ್ಣನಿಗೆ ಒಳಿದು ಬರುವುದೇ ಕಾಂಗ್ರೇಸ್ ಟಿಕೆಟ್

ಉಡುಪಿ: ಕರಾವಳಿ ಪ್ರಭಲ ರಾಜಕೀಯ ಶಕ್ತಿ ಕೇಂದ್ರ ಅದರಲ್ಲೂ ವಿಶೇಷವಾಗಿ ದಕ ಮತ್ತು ಉಡುಪಿಯ ರಾಜಕೀಯ ಚಿತ್ರಣ ರಾಜ್ಯಕ್ಕೇನೆ ಒಂದು ರೀತಿಯ ಶಕ್ತಿ ಮದ್ದು ಇಲ್ಲಿನ ಫಲಿತಾಂಶ ಅಥಾವ ಚಿತ್ರಣ ಇಡೀ ರಾಜ್ಯಕ್ಕೆ ರೋಲ್ ಮಾಡೆಲ್ ಎಂಬುದು ಸದ್ಯ ತಿಳಿದಿರುವ ವಿಚಾರವಾಗಿದೆ.ಇನ್ನೂ ಕೆಲವೇ ತಿಂಗಳಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದೆ ಅದರ ರಣಕಹಳೆಯನ್ನು ಈಗಾಗಲೇ ಊದಿ ಶಸ್ತ್ರಭ್ಯಾಸ ಕೂಡ ಎಲ್ಲಾ ರಾಜಕೀಯ ಪಕ್ಷದಲ್ಲಿ ಆರಂಭವಾಗಿದೆ ಅದರಲ್ಲೂ ವಿಶೇಷವಾಗಿ ಉಡುಪಿ ಜಿಲ್ಲೆ ಕೂಡ ಒಂದು , ಇಲ್ಲಿನ ಐದು ವಿಧಾನ ಸಭಾ ಕ್ಷೇತ್ರದಲ್ಲಿ ಒಂದೇ ಪಾರ್ಟಿಯ ಶಾಸಕರು ಗೆದ್ದು ಬರಬೇಕೆಂಬ ಹಂಬಲದೊಂದಿದೆ ಪ್ರಮುಖ ಎರಡು ರಾಷ್ಟ್ರೀಯ ಪಕ್ಷಗಳು ಪಣತೊಟ್ಟು ಕೆಲಸಮಾಡುತ್ತಿದೆ ಮತ್ತು ಗೆಲ್ಲುವ ಕುದುರೆಯನ್ನೇ ಆರಿಸಿತಂದು ಕಣಕ್ಕಿಳಿಸುವ ಪ್ರಯತ್ನ ಜೋರಾಗಿಯೇ ನಡೆಯುತ್ತಿದೆ .ಈ ನಡುವೆ ಕೆಲವು ವರ್ಷಗಳಿಂದ ನೆಲಕಚ್ಚಿ ಹೋಗಿದ್ದ ಕಾಂಗ್ರೇಸ್ ಪಾರ್ಟಿ ಕೂಡ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಗದ್ದುಗೇರುವ ಆಸೆಯಿಂದ ಆಕಾಂಕ್ಷಿಗಳ ಅಹವಾಲು ಸ್ವೀಕರಿಸಿಕೊಂಡು ಸ್ಕುಟಿನಿ ನಡೆಸುವ ಕೆಲಸ ಕೆಪಿಸಿಸಿ ವಲಯಲ್ಲಿ ನಡೆಯುತ್ತಿರುವ ಬಗ್ಗೆ ಖುದ್ದಾಗಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಇಂತಹುದರ ನಡುವೆ ಉಡುಪಿಯಲ್ಲಿ ಕಾಂಗ್ರೇಸ್ ಪಾರ್ಟಿಯಲ್ಲಿ ಗೆಲ್ಲಬಹುದಾದ ಕುದುರೆ ಯಾವುದೆಂಬುದರ ವಿಶ್ಲೇಷಣೆ ಇಲ್ಲಿದೆ.

ಜಾತಿ-ಧರ್ಮ-ಲಿಂಗ ಲೆಕ್ಕಚಾರದ ಪ್ರಕಾರ ಕಳೆದ ಬಾರಿಯ ಚುನಾವಣೆಯಲ್ಲಿ ಬಿಲ್ಲವ-ಬಂಟ-ಮೊಗವೀರ-ಭಂಡಾರಿ ಸಮುದಾಯಕ್ಕೆ ಟಿಕೆಟ್ ನೀಡಿದ್ದರೂ ಒಂದೇ ಒಂದು ಸೀಟ್ ಗೆದ್ದು ಬಂದಿಲ್ಲ ಶೂನ್ಯ ಸಾಧನೆ ಆದರೇ ಈ ಸಲ ಉಡುಪಿ ಕ್ಷೇತ್ರದಲ್ಲಿ ಪ್ರಭಲ ಜಾತಿಯ ಆಕಾಂಕ್ಷಿಗಳ ನಡುವೆ ಬ್ರಾಹ್ಮಣ ಸಮುದಾಯದ ಆಕಾಂಕ್ಷೀ ಅಭ್ಯರ್ಥಿಯ ಹೆಸರು ಓಡಾಡಲು ಶುರುವಾಗಿದೆ.  ಅದು ಕೆ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ -ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಪ್ರಚಾರ ಸಮಿತಿಯ ಅಧ್ಯಕ್ಷರು ಮತ್ತು ನಿಸ್ವಾರ್ಥ ಸೇವೆಯ ಜನಸೇವಕ ಈ ಹೆಸರು ಉಡುಪಿ ಕ್ಷೇತ್ರದ ಯಾವ ಮೂಲೆಯಲ್ಲಿ ಹೋದರು ಪ್ರತಿಯೊಬ್ಬರ ಬಾಯಲ್ಲೂ ಕೇಳಿ ಬರುವ ಅತ್ಯಂತ ಚಿರಪರಿಚಿತ ಹೆಸರು ಕಾರಣ ಅವರು ಮಾಡುತ್ತಿರುವ ಸೇವೆ ಹಾಗೂ ಸಾಧನೆ.ಹಾಗದರೇ ಹಿನ್ನಲೆಯೇನು ಈ ವ್ಯಕ್ತಿಯದ್ದು ಸಮಾಜ ಸೇವೆ-ಧಾರ್ಮಿಕ ಮುಂದಾಳು-ಉದ್ಯಮಿ-ದಾನಿ-ಯುವಕರ ಪಾಲಿಗೆ ಅಪ್ಪಟ ಸ್ನೇಹಿತ- ಆಓ ಚಾಲಕ ಮಾಲಕರ ಹೃದಯಸ್ನೇಹಿ- ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಒಂದು ಕರೆ ನೀಡಿದರೆ ಸಾವಿರಾರು ಮಂದಿಯನ್ನು ಸೇರಿಸಬಹುದಾದ ಉಡುಪಿ ಕಾಂಗ್ರೇಸ್ನ ಏಕೈಕ ನಾಯಕ.ಹೌದು ಇದೇ ಹೆಸರು ಉಡುಪಿ ಉಡುಪಿ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಳಿ ಬರುತ್ತಿರುವಂತದ್ದು ದೇವಸ್ಥಾನ-ಮಠ-ಮಂದಿರ-ಚರ್ಚ್-ಸಾರ್ವಜನಿಕ ಸಮಾರಂಭ-ಕ್ರಿಕೆಟ್ ಟೂರ್ನಮೆಂಟ್-ಸಮಾಜ ಸೇವೆ- ಆಸ್ಪತ್ರೆ ಅಯ್ಯೋ ಇಷ್ಟೊಂದು ಊಹೆ ಮಾಡಲು ಅಸಾಧ್ಯವಾಗಿರುವ ಪಾದರಸದಂತೆ ಕಾರ್ಯ ನಿರ್ವಹಿಸುವ “ಕೃಷ್ಣಾ” ಈ ಸಲ ಕಾಂಗ್ರೇಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿ.ಕೋವಿಡ್ ಸಮಯಲ್ಲಿ ಕೋಟಿಗಟ್ಟಲೆ ಹಣವನ್ನು ಸಮಾಜಕ್ಕೆ ನೀಡಿ-ಅದೆಷ್ಟೋ ಶವಗಳನ್ನು ಅಂತ್ಯಕ್ರೀಯೆ ಮುಗಿಸಿ ಮನೆಮಗನಂತೆ ನಿಂತವ-ಸಾವಿರಾರು ರೋಗಿಗಳ ಪಾಲಿಗೆ ತನ್ನ ಧನಸಹಾಯದ ಮುಖಾಂತರ ಸಂಜೀವಿನಿಯಾದವ-ಆಟೋ ಚಾಲಕ ಮಾಲಕರ ಕಷ್ಟದಲ್ಲಿ ಸ್ಪಂದಿಸಿದವ-ಯುವಕರ ಅಚ್ಚುಮೆಚ್ಚಿನ ಕ್ರೀಡೆ ಕ್ರಿಕೇಟ್ ಸಾವಿರಾರು ಪಂದ್ಯಾಟದಲ್ಲಿ ಬಾಗವಹಿಸಿ ಪ್ರೋತ್ಸಾಹಿಸಿದವರು,ದೇಗುಲ ನಿರ್ಮಾಣ ಮಾಡಿದವರು, ಸಾಂಸ್ಕøತಿಕ ಕಾರ್ಯಕ್ರಮಗಳ ರೂವಾರಿ-ಪಕ್ಷದ ಚಟುವಟಿಕೆಯನ್ನು ನಿರಂತರವಾಗಿ ಮಾಡಕೊಂಡು ಈ ಸಲ ಕಾಂಗ್ರೇಸ್ ಪಾರ್ಟಿಯಿಂದ ಟಿಕೆಟ್ ಕೇಳುತ್ತಿರುವ ಕೃಷ್ಣಾಮೂರ್ತಿ ಆಚಾರ್ಯರ ಹಿಂದಿದೆ ಯುವನಾಯಕರ ದೊಡ್ಡ ಶಕ್ತಿ ಅದೇ ಅವರಿಗೆ ನೀಡಿದ್ದು ಗೆದ್ದೆ ಗೆಲ್ಲುವೆ ಎಂಬ ಸ್ಪೂರ್ತಿ.

ಈ ಸಲ ಉಡುಪಿಯಲ್ಲಿ ಬದಲಾವಣೆ ಬಯಸುತ್ತಿರುವ ಜನರಿಗೆ ಕೃಷ್ಣಾಮೂರ್ತಿ ಆಚಾರ್ಯ ಆದರೇ ಬದಲಾವಣೆ ಇಲ್ಲಾಂದ್ರೆ ಈಗಿರುವ ಊಟವೆ ಸಾಕು ಅನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಉಡುಪಿಯ ಜನ ಬುದ್ದಿವಂತರು ಕೇವಲ ಚುನಾವಣೆ ಸಮಯಲ್ಲಿ ಇನ್ನೋವ ಕಾರ್ ಹಿಡ್ಕೊಂಡು ಬಂದು ಫೋಸ್ ಕೊಟ್ಟವರಿಗೆ ಜೈ ಹಾಕುವಷ್ಟು ಮೂರ್ಖರು ಖಂಡಿತ ಅಲ್ಲಾ ನಿರಂತರವಾಗಿ ಜನಸಾಮಾನ್ಯರೊಂದಿಗೆ ಸಾಮಾನ್ಯರಂತೆ ಬದುಕಬಲ್ಲ ನಾಯಕನನ್ನೆ ಆರಿಸುವ ತಾಕತ್ತಿರುವ ಜನ ಈ ಸಲದ ಮಟ್ಟಿಗೆ ಕೃಷ್ಣಾಮೂರ್ತಿ ಆಚಾರ್ಯ ಕೈ ಬಿಡುವ ಲಕ್ಷಣ ಕಾಣುತ್ತಿಲ್ಲ ಇದನ್ನ ಹೊರತು ಪಡಿಸಿ ಇನ್ನಾರೂ ಕಾಂಗ್ರೇಸ್ ನಲ್ಲಿ ಸ್ಪರ್ದೀಸಿದರೂ ಬಿಜೆಪಿಯ ಗಾಳಿಗೆ ಹಾರಿ ತೂರಿ ಛಿದ್ರವಾಗುವ ಪ್ರಮೇಯವೆ ಜಾಸ್ತಿಯಾಗಿದೆ.ಉಡುಪಿಯಲ್ಲಿ ಕೃಷ್ಣಾಮೂರ್ತಿ ಆಚಾರ್ಯರ ಅಭಿಮಾನಿ ಬಳಗ ಬೃಹತ್ ಮರವಾಗಿ ಬೆಳೆದು ನಿಂತಿದೆ ಅದು ಪಕ್ಷ-ಜಾತಿ-ಧರ್ಮ ನೋಡಿ ಅಲ್ಲ ಕೇವಲ ಆ ವ್ಯಕ್ತಿ ಮಾಡುತ್ತಿರುವ ಸಮಾಜಸೇವೆಗಾಗಿ ಉಡುಪಿ ಪರ್ಯಾಯಕ್ಕೆ 30 ವರ್ಷಗಳಿಂದ ನಿರಂತರ ಸಾಂಸ್ಕøತಿಕ ಕಾರ್ಯಕ್ರಮ ಆಯೋಜನೆ ಮಾಡಿದ ಹೆಗ್ಗಳಿಕೆ-ಪ್ರವಾಹ ಅನಾಹುತ ಎದುರಾದಗ ತನ್ನದೇ ಆದ ಟಾಸ್ಕ್ ಪೋರ್ಸ್,ಅಫಘಾತವಾದಗ ಅಂಬ್ಯೂಲೆನ್ಸ್, ಹಸಿದಾಗ ಅನ್ನ-ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ,ನೂರಾರು ಆರೋಗ್ಯ ಶಿಬಿರ,ಗೋಶಾಲೆ ನಿರ್ವಹಣೆ,ರಕ್ತದಾನ ಶಿಬಿರ-17 ವರ್ಷಗಳಿಂದ ಸಾರ್ವಜನಿಕ ಗಣೆಶೋತ್ಸವ,ಯಾವುದೇ ಸಮಯದಲ್ಲೋ ಒಂದು ಕರೆ ಮಾಡಿ ಸಮಸ್ಯೆ ಹೇಳಿಕೊಂಡ ಕೆಲಸ ನಿಮಿಷದಲ್ಲಿ ಇತ್ಯರ್ಥ ಹಾಡುವ ವ್ಯಕ್ತಿಯನ್ನ ಉಡುಪಿಯ ಜನತೆ ಮರೆಯುದುಂಟೆ.
ಇಂತಹ ವ್ಯಕ್ತಿಗಳು ವಿಧಾನಸಭೆ ಪ್ರವೇಶಿಸಬೇಕೆಂಬುದು ಜನ ಸಾಮಾನ್ಯರ ಆಸೆ ಇಂತಹ ಆಸೆಗೆ ಕಾಂಗ್ರೇಸ್ ಪಾರ್ಟಿ ಅವಕಾಶ ಮಾಡಿಕೊಡುತ್ತಾ ಎಂಬುದು ಸದ್ಯದ ಪ್ರಶ್ನೆಇನ್ನು ಉಡುಪಿ ಕ್ಷೇತ್ರ ಕಾಂಗ್ರೇಸ್‍ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿಯೇ ಇದೆ ಆದರೆ ಅದೆಷ್ಟೋ ಆಕಾಂಕ್ಷಿಗಳಿಗೆ ವಾರ್ಡ್ ಸಂಖ್ಯೆ ಕೂಡ ಗೊತ್ತಿರದ ಪರಿಸ್ಥಿತಿಯಿದೆ ಬರೀ ದುಡ್ಡು ಜಾತಿಗೆ ಸೀಮಿತವಾಗದೇ ಸಮಾಜದ ಒಳಿತಿಗಾಗಿ ಕಾಂಗ್ರೇಸ್ ಟಿಕೆಟ್ ಹಂಚಿಕೆ ಮಾಡಿದರೆ ಉಡುಪಿಯಲ್ಲಿ ಕೃಷ್ಣಾ ಅವರ ಗೆಲುವು ಸಮೀಪವಿದೆ ಇನ್ನಾರೂ ನಿಂತರೂ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಾಂಗ್ರೇಸ್‍ನ ಕಟ್ಟಿಟ್ಟ ಬುತ್ತಿ.ಪೊಲಿಟಿಕಲ್ ಬ್ಯುರೋ- ವಿಶ್ವನ್ಯೂಸ್ 24

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

4 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

4 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

4 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

4 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

4 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

4 days ago