Featured

ಉಡುಪಿ : ಕೊರಗ ಸಮುದಾಯದ ಮೇಲೆ ಪೊಲೀಸರಿಂದ ಹಲ್ಲೆಆರೋಪಕ್ಕೆ ದೂರು ಹಾಗೂ ಪ್ರತಿದೂರು ದಾಖಲು – Vishwanews24

ಉಡುಪಿ : ಕೊರಗ ಸಮುದಾಯದ ಮೇಲೆ ಪೊಲೀಸರಿಂದ ಹಲ್ಲೆಆರೋಪಕ್ಕೆ ದೂರು ಹಾಗೂ ಪ್ರತಿದೂರು ದಾಖಲು – Vishwanews24

ಮೆಹೆಂದಿ ಕಾರ್ಯಕ್ರಮದಲ್ಲಿದ್ದ ಹಲವರ ಮೇಲೆ ದೂರು ನೀಡಿದ ಪೊಲೀಸ್‌ ಸಿಬ್ಬಂದಿ..

ಕೋಟ: ಬ್ರಹ್ಮಾವರ ತಾಲೂಕಿನ ಕೋಟೆತಟ್ಟು ಬಾರಿಕೆರೆ ಕೊರಗ ಸಮುದಾಯದ ವ್ಯಕ್ತಿಯೊಬ್ಬರ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮ ನಡೆಯುತ್ತಿದ್ದಾಗ ಕೋಟ ಪೊಲೀಸರು ಭೇಟಿ ನೀಡಿ ಲಾಠಿ ಪ್ರಹಾರ ನಡೆಸಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ದೂರು ಹಾಗೂ ಪ್ರತಿದೂರುಗಳು ದಾಖಲಾಗಿವೆ.

ಜಯರಾಮ ನಾಯ್ಕ ಎಲ್‌ (27) ಇವರು ಕೋಟ ಪೊಲೀಸ್‌‌ ಠಾಣೆಯಲ್ಲಿ ಕಾನ್ಸ್‌‌ಟೇಬಲ್‌‌ ಆಗಿ ಕೆಲಸ ಮಾಡಿಕೊಂಡಿದ್ದು, ಡಿ.27ರಂದು ಇವರನ್ನು ಠಾಣಾ ಮೀಸಲು ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ಕರ್ತವ್ಯ ಮುಗಿಸಿ ವಿಶ್ರಾಂತಿಯಲ್ಲಿರುವ ಸಂದರ್ಭ ಠಾಣಾ ಪೊಲೀಸ್‌‌ ಉಪನಿರೀಕ್ಷಕ ಸಂತೋಷ್‌‌ ಬಿ ಪಿ ಅವರು ರಾತ್ರಿ 10.45ರ ಸುಮಾರಿಗೆ ಕರೆ ಮಾಡಿ ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುವಿನ ರಾಜೇಶ್ ಎನ್ನುವವರ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮಕ್ಕೆ ಏರು ಧ್ವನಿಯಲ್ಲಿ ಡಿಜೆ ಸೌಂಡ್ ಹಾಕಿ, ಮನೆಯ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಸುಮಾರು 30-50 ಜನ ಮಧ್ಯ ಸೇವನೆ ಮಾಡಿ ಕೇಕೆ ಹಾಕುತ್ತಾ, ನೃತ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ಧಾರೆ.

ಬಳಿಕ ಜಯರಾಮ ನಾಯ್ಕ ಅವರು ಇಲಾಖಾ ಜೀಪಿನಲ್ಲಿ ಪಿಎಸ್‌‌ಐ ಸಂತೋಷ್‌‌‌ ಅವರೊಂದಿಗೆ ರಾತ್ರಿ 11.10ರ ಸುಮಾರಿಗೆ ಸ್ಥಳಕ್ಕೆ ಹೋದಾಗ ರಾಜೇಶ್, ಸುದರ್ಶನ್, ಗಣೇಶ ಬಾರ್ಕೂರು, ಸಚಿನ್, ಗಿರೀಶ್, ನಾಗೇಂದ್ರ ಪುತ್ರನ್, ನಾಗರಾಜ ಪುತ್ರನ್ ಮತ್ತು ಇತರರು ಡಿಜೆ ಸೌಂಡ್ ಅನ್ನು ಜೋರಾಗಿ ಹಾಕಿಕೊಂಡು ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಉರಾಳ ಅವರು ಪಿಎಸ್‌ ಅವರಲ್ಲಿ ತನ್ನ ತಾಯಿಗೆ ಹೃದಯ ಸಂಬಂಧಿ ತೊಂದರೆ ಇದ್ದು, ಡಿಜೆ ಸೌಂಡನ್ನು ಮೆಲ್ಲನೆ ಇಡುವಂತೆ 112 ಗೆ ಮಾಹಿತಿ ನೀಡಿದ್ದು, 112 ಸಿಬ್ಬಂದಿಯವರು ಸ್ಥಳಕ್ಕೆ ಬಂದಾಗ ಅವರಲ್ಲಿಯೂ ಸಹ ಆರೋಪಿತರು ಉಡಾಫೆಯಿಂದ ಮಾತನಾಡಿದ್ಧಾರೆ ಎಂದಿದ್ಧಾರೆ. ಈ ವೇಳೆ ಪಿಎಸ್‌ಐ ಅವರು ಡಿಜೆ ಸೌಂಡನ್ನು ಕಡಿಮೆ ಮಾಡುವಂತೆ ತಿಳಿಸಿದಾಗ, ಆರೋಪಿತರು ಗುಂಪು ಕಟ್ಟಿಕೊಂಡು, ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಪಿಎಸ್‌ಐ ಅವರ ಬಳಿ ಬಂದು, ನೀವು ಏನು ಮಾಡುತ್ತೀರಾ ನಾವು ಡಿಜೆ ಸೌಂಡನ್ನು ಬಂದ್‌ ಮಾಡುವುದಿಲ್ಲ ಎಂದು ಉಡಾಫೆಯಿಂದ ಮಾತನಾಡಿ, ಸಮವಸ್ತ್ರದಲ್ಲಿದ್ದ ಪಿಎಸ್‌‌‌ಐ ಅವರನ್ನು ದೂಡಿದ್ದಾರೆ. ಈ ವೇಳೆ ಜಯರಾಮ ನಾಯ್ಕ ಅವರು ಡಿಜೆ ಅನ್ನು ಬಂದ್‌ ಮಾಡಲು ಹೋದಾಗ ಆರೋಪಿತರು ಜಯರಾಮ ನಾಯ್ಕ ಅವರನ್ನು ಸುತ್ತುವರಿದು ದೊಣ್ಣೆಯಿಂದ ಕೈಗೆ ಹೊಡೆದು, ಸಮವಸ್ತ್ರವನ್ನು ಹರಿದು ಹಾಕಿ ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ಧಾರೆ ಎಂದು ಪೊಲೀಸ್‌ ಸಿಬ್ಬಂದಿ ಕೋಟ ಪೊಲೀಸ್‌‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರಾಜೇಶ್‌ ಎಂಬವರು ನೀಡಿದ ದೂರಿನಲ್ಲಿ, ಡಿ.27ರಂದು ರಾತ್ರಿ 10 ರ ಸುಮಾರಿಗೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕೋಟ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಸಂತೋಷ್‌ ಬಿ ಪಿ, ಹೆಚ್.ಸಿ ರಾಮಣ್ಣ, ಹೆಚ್.ಸಿ ಅಶೋಕ್ ಶೆಟ್ಟಿ, ಮಂಜುನಾಥ ಮತ್ತು ಇತರ ಸಿಬ್ಬಂದಿಯವರು ಮೆಹೆಂದಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನುಗ್ಗಿ, ಲಾಠಿಯಿಂದ ಗಣೇಶ ಬಾರ್ಕೂರು ಎಂಬರಿಗೆ ಹೊಡೆದು, ಹಲ್ಲೆ ನಡೆಸಿ ಜೀಪಿಗೆ ತುಂಬುತ್ತಿದ್ದಂತೆ ಹಿರಿಯ ಮಹಿಳೆಯರು ಮನವಿ ಮಾಡಿಕೊಂಡರೂ ಸ್ಪಂದಿಸದೇ, ಲಕ್ಷ್ಮೀ ಎಂಬರಿಗೆ ಲಾಠಿಯಿಂದ ಹಲ್ಲೆ ನಡೆಸಿ, ಸುದರ್ಶನ, ಗಿರೀಶ ಮತ್ತು ಸಚಿನ್ ಎಂಬುವವರನ್ನು ಜೀಪಿಗೆ ತುಂಬಿ ಠಾಣೆಗೆ ಕರೆದುಕೊಂಡು ಹೋಗಿರುವುದಲ್ಲದೇ, ಠಾಣೆಯಲ್ಲಿ ಎಲ್ಲರನ್ನೂ ವಿವಸ್ತ್ರಗೊಳಿಸಿ ಸೆಲ್ ಒಳಗೆ ಹಾಕಿ ಬೆದರಿಕೆ ಹಾಕಿದ್ದಾರೆ ಎಂದು ಕೋಟ ಠಾಣೆಯಲ್ಲಿ ದೂರು ನೀಡಿದ್ದಾರೆ.

Vishwa News 24

Recent Posts

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ – vishwanews24

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ…

6 hours ago

ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ – vishwanews24

ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಮಂಗಳೂರು: ದಸರಾ  ಸಂಭ್ರಮದ ನಡುವೆಯೇ…

6 hours ago

ಮಂಗಳೂರು : ದಸರಾ ಉದ್ಘಾಟನೆಗೆ ಸಿಎಂ ಗೈರು ; ಕರಾವಳಿ ತೀವ್ರ ಜನರಲ್ಲಿ ಅಸಮಾಧಾನ  : ಅಕ್ಷಿತ್ ಸುವರ್ಣ  – vishwanews24

ಮಂಗಳೂರು : ದಸರಾ ಉದ್ಘಾಟನೆಗೆ ಸಿಎಂ ಗೈರು ; ಕರಾವಳಿ ತೀವ್ರ ಜನರಲ್ಲಿ ಅಸಮಾಧಾನ  : ಅಕ್ಷಿತ್ ಸುವರ್ಣ   ಮಂಗಳೂರು:…

6 hours ago

ಮಂಗಳೂರು: ಅಕ್ರಮ ಸಂಬಂಧದ ಶಂಕೆ ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ – vishwanews24

ಮಂಗಳೂರು: ಅಕ್ರಮ ಸಂಬಂಧದ ಶಂಕೆ ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ ಮಂಗಳೂರು: ಅಕ್ರಮ ಸಂಬಂಧದ ಶಂಕೆಯ ಹಿನ್ನೆಲೆ…

6 hours ago

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

2 days ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

2 days ago