ಉಡುಪಿ : ಕೊರೋನಾ ವೈರಸ್‌ ಶಂಕೆ!! , ನಾಲ್ವರು ಜಿಲ್ಲಾ ಆಸ್ಪತ್ರೆಗೆ ದಾಖಲು ..?? -Vishwanews24

Featured, ಉಡುಪಿ

ಉಡುಪಿ : ಉಡುಪಿಯಲ್ಲೂ ಕೊರೋನಾ ವೈರಸ್‌ ಭೀತಿ ಉಂಟಾಗಿದ್ದು ಉಡುಪಿ ಜಿಲ್ಲಾಸ್ಪತ್ರೆ ಐಸೋಲೇಟೆಡ್ ವಾರ್ಡ್‌ಗೆ ನಾಲ್ವರು ದಾಖಲಾಗಿದ್ದಾರೆ. ನಾಲ್ವರಿಗೂ ಕೊರೋನಾ ವೈರಸ್‌ ಸೋಂಕು ತಗಲಿರುವ ಶಂಕೆಯಿದೆ.

ಈ ನಾಲ್ವರ ಪೈಕಿ ಮೂವರು ಚೀನಾದಿಂದ ಬಂದ ಒಂದು ಕುಟುಂಬದವರಾಗಿದ್ದು ಓರ್ವ ಪ್ರತ್ಯೇಕ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದಾಖಲಾಗಿರುವ ಈ ನಾಲ್ವರು ಸ್ಥಳಿಯರೇ ಆಗಿದ್ದು ದಾಖಲಾದ ಪೈಕಿ ಇಬ್ಬರಿಗೆ ಸಾಮಾನ್ಯ ಶೀತ, ಕೆಮ್ಮು ಕಾಣಿಸಿಕೊಂಡಿದ್ದು ಮುಂಜಾಗ್ರತಾ ಕ್ರಮವಾಗಿ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಲ್ವರು ಕೂಡಾ ಆರೋಗ್ಯವಾಗಿದ್ದು ವೈದ್ಯಕೀಯ ಪರೀಕ್ಷೆಗೆ ರೋಗಿಗಳ ಅಗತ್ಯ ಸ್ಯಾಂಪಲ್ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.