ಉಡುಪಿ : ಒಂದು ತಿಂಗಳ ಪರ್ಯಂತ ಜರುಗಿದ ಕೋಳ್ಯೂರು ವೈಭವ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಅರ್ಥಪೂರ್ಣವಾಗಿ ಸಂಯೋಜಿಸಿದ ಬಗ್ಗೆ ಕೋಳ್ಯೂರು ರಾಮಚಂದ್ರ ರಾಯರ ಮಕ್ಕಳು ನವೆಂಬರ್ ೧೫ ರಂದು ಯಕ್ಷಗಾನ ಕಲಾರಂಗದ ಕಚೇರಿಗೆ ಆಗಮಿಸಿ ಪದಾಧಿಕಾರಿಗಳಿಗೆ ಧನ್ಯವಾದ ಸಮರ್ಪಿಸಿದರು.
ಕೋಳ್ಯೂರರ ಪುತ್ರ ಕೆ. ಶ್ರೀಧರ ರಾವ್ ಹಾಗೂ ಪುತ್ರಿ ಶ್ರೀಮತಿ ಮೀರಾರವರು ಮಾತನಾಡಿ ತಮ್ಮ ತಂದೆಯವರ ನವತ್ಯಬ್ದ ಕಾರ್ಯಕ್ರಮವು ಯಕ್ಷಗಾನ ಚರಿತ್ರೆಯ ಪುಟಗಳಲ್ಲಿ ದಾಖಲಾಗುವಂತೆ ರೂಪಿಸಿ ಕಾರ್ಯಗತಗೊಳಿಸಿದ ಯಕ್ಷಗಾನ ಕಲಾರಂಗಕ್ಕೆ ನಮ್ಮ ಕುಟುಂಬ ಸದಾ ಋಣಿಯಾಗಿದೆ ಎಂದು ಹೃದಯತುಂಬಿ ಕೃತಜ್ಞತೆಯ ಮಾತುಗಳನ್ನಾಡಿದರು.
ಕೋಳ್ಯೂರು ಕುಟುಂಬದ ಪರವಾಗಿ ಸಂಸ್ಥೆಗೆ ಸಮ್ಮಾನಪತ್ರ ನೀಡಿ ಅಭಿನಂದಿಸಿದರು. ವೀಡಿಯೋ ಎಡಿಟಿಂಗ್ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿದ ಮೋಹನ್ ದಾಸ್ ಪೈ ಇವರನ್ನು ಗೌರವಿಸಲಾಯಿತು. ಕೋಳ್ಯೂರರವರ ಮೊಮ್ಮಗ ನಟರಾಜ್‍ರವರು ಯಕ್ಷಗಾನ ಕಲಾರಂಗದ ವೆಬ್‍ಸೈಟ್ ವಿನ್ಯಾಸ ಮಾಡುವ ಹೊಣೆ ತನ್ನದೆಂದು ಭರವಸೆ ನೀಡಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್ ರಾವ್ ಎಲ್ಲರಿಗೂ ಶಾಲು ಸ್ಮರಣಿಕೆ ನೀಡಿ ಗೌರವಿಸಿದರು. ಸಂಸ್ಥೆಯ ಚಟುವಟಿಕೆಯ ಬಗ್ಗೆ ವಿಶೇಷ ಆಸ್ಥೆಯನ್ನು ಹೊಂದಿದ ಮಹಾನ್ ಕಲಾವಿದ ಕೋಳ್ಯೂರರ ತೊಂಭತ್ತರ ಸಂಭ್ರಮದ ಕಾರ್ಯಕ್ರಮದ ಸಂಯೋಜನೆಯಿ0ದ ಸಂಸ್ಥೆಯ ಘನತೆ ವೃದ್ಧಿಯಾಗಿದೆ ಎಂದು ಕಾರ್ಯದರ್ಶಿ ಮುರಳಿ ಕಡೆಕಾರ್ ತನ್ನ ಪ್ರಾಸ್ತಾವಿಕ ಮಾತುಗಳಲ್ಲಿ ನುಡಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಿಸಿದರು.
ಇಂಧನ ದರ ಏರಿಕೆ : ಏರ್ ಇಂಡಿಯಾ, ಇಂಡಿಗೋ 250 ದೇಶೀಯ ವಿಮಾನಗಳ ಹಾರಾಟ ಕಡಿತ ನವದೆಹಲಿ :ಭಾರತದ ಪ್ರತಿಷ್ಟಿತ…
ಕಾಸರಗೋಡು: ಇಲಿ ಪಾಷಾಣ ಸೇವಿಸಿ ನವವಿವಾಹಿತೆ ಆತ್ಮಹತ್ಯೆ ಕಾಸರಗೋಡು : ಮದುವೆಯಾದ ಕೇವಲ ಒಂದೂವರೆ ತಿಂಗಳಲ್ಲೇ ನವವಿವಾಹಿತೆಯೊಬ್ಬರು ಇಲಿ ಪಾಷಾಣ…
ಮನೆಯ ಎಸಿ ಸ್ಫೋಟ : ಸಿಸಿಐ ಮಾಜಿ ಮುಖ್ಯಸ್ಥ ಧನೇಂದ್ರ ಕುಮಾರ್ ಸಾವು ಹೊಸದಿಲ್ಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗದ (CCI) ಮಾಜಿ…
ಧರ್ಮಸ್ಥಳ: ಮತ್ತು ಬರುವ ಜ್ಯೂಸ್ ನೀಡಿ ವೃದ್ಧೆಯ ಹತ್ತು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿ ; ಪ್ರಕರಣ…
ಕೊಂಕಣ ರೈಲ್ವೆ ಮಾನ್ಸೂನ್ ವೇಳಾಪಟ್ಟಿ ಪ್ರಕಟ : ಜೂ. 15ರಿಂದ ಅ. 20ರ ವರೆಗೆ ಜಾರಿಗೆ ಉಡುಪಿ: ಮುಂಗಾರು ಸವಾಲಿಗೆ…
ಜೂ.12ರವರೆಗೆ ಮಂಗಳೂರು ಜಂಕ್ಷನ್ - ಮುಂಬೈ ಸಿಎಸ್‌ಎಂಟಿ ರೈಲು ಥಾಣೆಯವರೆಗೆ ಸಂಚಾರ ಮಂಗಳೂರು: ಮುಂಬೈ ಸಿಎಸ್‌ಎಂಟೆ ನಿಲ್ದಾಣದಲ್ಲಿ ಪ್ಲಾಟ್‌ಫಾರಂ ವಿಸ್ತರಣಾ…