ಉಡುಪಿ: ಖಗ್ರಸಾ ಚಂದ್ರಗ್ರಹಣ – 1008 ಕೃಷ್ಣ ಭಕ್ತರಿಂದ 1008 ಬಾರಿ ಸ್ವಾಮಿ ಶ್ರೀ ಕೃಷ್ಣಾಯ ನಮಃ ಮಂತ್ರ ಜಪ ಪಠಣ – vishwanews24

Featured, ಉಡುಪಿ

ಉಡುಪಿ: ಖಗ್ರಸಾ ಚಂದ್ರಗ್ರಹಣ – 1008 ಕೃಷ್ಣ ಭಕ್ತರಿಂದ 1008 ಬಾರಿ ಸ್ವಾಮಿ ಶ್ರೀ ಕೃಷ್ಣಾಯ ನಮಃ ಮಂತ್ರ ಜಪ ಪಠಣ

ಉಡುಪಿ: ಆಗಸ್ಟ್ 1 ರಿಂದ 48 ದಿನಗಳ ಕಾಲ ತನಕ ನಡೆಯುವ ಶ್ರೀ ಕ್ರಷ್ಣ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರು ಹಾಗೂ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಲೋಕಕಲ್ಯಾಣಕ್ಕಾಗಿ ಸಂಕಲ್ಪಿಸಿರುವ ಸ್ವಾಮಿ ಶ್ರೀ ಕ್ರಷ್ಣಾಯನಮ: ಮಂತ್ರಜಪ ಪಠಣ ಪ್ರತಿ ಜಿಲ್ಲೆ/ರಾಜ್ಯ/ದೇಶ/ವಿದೇಶಗಳಲ್ಲಿ ಕೋಟಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಪಠಣವಾಗುತ್ತಿದ್ದು ಸೆ. 7ರ ಭಾನುವಾರ ಬೆಳಿಗ್ಗೆ 10 ರಿಂದ 11ರವರಿಗೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಭಾದ್ರಪದ ಶುಕ್ಲ ಪೂರ್ಣಿಮ ಖಗ್ರಸಾ ಚಂದ್ರ ಗ್ರಹಣ ಪ್ರಯುಕ್ತ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಸಂಯುಕ್ತ ಆಶ್ರಯದಲ್ಲಿ 1008 ಕ್ರಷ್ಣಭಕ್ತರಿಂದ 1008 ಬಾರಿ ಸ್ವಾಮಿ ಶ್ರೀ ಕೃಷ್ಣಾಯ ನಮಃ ಮಂತ್ರದ ಜಪ ಪಠಣ ಸಾಮೂಹಿಕವಾಗಿ ನಡೆಯಲಿದೆ.

ಶ್ರೀ ಕ್ರಷ್ಣ ಸದ್ಭಕ್ತರು ಮನೆ ಮಂದಿಯೊಂದಿಗೆ ಸಾಂಪ್ರದಾಯಿಕ ಶೈಲಿಯ ವಸ್ತ್ರದಾರಣೆಯೊಂದಿಗೆ ಶ್ರೀ ಕೃಷ್ಣ ನಾಮಸ್ಮರಣೆಯ ಈ ಉತ್ಸವದಲ್ಲಿ ಭಾಗವಹಿಸಿ ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂಬುದು ಶ್ರೀಗಳ ಆಶಯ.

ಪುತ್ತೂರಿನ ಮೊದಲ ಕಿನ್ನಿಪಿಲಿ ಖ್ಯಾತಿಯ ‘ಪಿಲಿ ರಾಧಣ್ಣ’ ನಿಧನ  – vishwanews24

Leave a Reply