ಉಡುಪಿ: ಗಾಂಜಾ ಮಾರಾಟ; ಕೇರಳದ ವಿದ್ಯಾರ್ಥಿ ಬಂಧನ – vishwanews24

Featured, ಉಡುಪಿ

ಉಡುಪಿ: ಗಾಂಜಾ ಮಾರಾಟ- ಕೇರಳದ ವಿದ್ಯಾರ್ಥಿ ಬಂಧನ

ಉಡುಪಿ: ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಕೇರಳದ ವಿದ್ಯಾರ್ಥಿಯನ್ನು ಮಣಿಪಾಲ ಪೊಲೀಸರು ಜೂ.5ರಂದು ಸಂಜೆ ವೇಳೆ ಬಂಧಿಸಿದ್ದಾರೆ.

ಆರೋಪಿ ಸಿದ್ದಾರ್ಥ್(22) ಎಂಬಾತ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು .20 ಸಾವಿರ ಮೌಲ್ಯದ 388 ಗ್ರಾಂ ತೂಕದ ಡ್ರಗ್ಸ್ ಹಾಗೂ ಮೊಬೈಲ್ ಫೋನ್ ಹ್ಯಾಂಡ್ ಸೆಟ್ 45 ಸಾವಿರ ವಶಪಡಿಸಿಕೊಂಡಿದ್ದಾರೆ.

ಮಂಗಳೂರು: ಕಾಂಗ್ರೆಸ್ ಸೋಲಿನ ಬೆನ್ನಲ್ಲೇ ಭುಗಿಲೆದ್ದ ಕಾರ್ಯಕರ್ತರ ಆಕ್ರೋಶ: ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು – vishwanews24

ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಅಪಾರ್ಟ್‌ಮೆಂಟ್‌ನ ಮೇಲೆ ಮಾದಕ ವಸ್ತು ಚಟುವಟಿಕೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ದೇವರಾಜ್ ಟಿ ವಿ ಮತ್ತು ಸಬ್ ಇನ್ಸ್‌ಪೆಕ್ಟರ್ ರಾಘವೇಂದ್ರ ಸಿ, ಎಎಸ್‌ಐಗಳಾದ ವಿವೇಕಾನಂದ ಮತ್ತು ಶೈಲೇಶ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಆರೋಪಿಯಿಂದ ಸುಮಾರು .20 ಸಾವಿರ ಮೌಲ್ಯದ 388 ಗ್ರಾಂ ತೂಕದ ಡ್ರಗ್ಸ್ ಹಾಗೂ ಮೊಬೈಲ್ ಫೋನ್ ಹ್ಯಾಂಡ್ ಸೆಟ್ 45 ಸಾವಿರ ವಶಪಡಿಸಿಕೊಂಡಿದ್ದಾರೆ.

ಬಂಧಿತ ವ್ಯಕ್ತಿ ಮಣಿಪಾಲದ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುವ ಉದ್ದೇಶ ಹೊಂದಿದ್ದ ಎಂದು ತಿಳಿದುಬಂದಿದೆ. ಸದ್ಯ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ನೈಋತ್ಯ ಪದವೀಧರರ ಕ್ಷೇತ್ರ ಚುನಾವಣೆ : ಡಾ. ಧನಂಜಯ್ ಸರ್ಜಿ ಭರ್ಜರಿ ಗೆಲುವು – vishwanews24

Leave a Reply