ಉಡುಪಿ : ಗುಂಡಿಬೈಲು ವ್ಯಕ್ತಿ ನೇಣಿಗೆ ಶರಣು – vishwanews24

Featured, ಉಡುಪಿ

ಉಡುಪಿ: ಗುಂಡಿಬೈಲು ನಿವಾಸಿ ನೇಣಿಗೆ ಶರಣು

ಉಡುಪಿ : ಮನನೊಂದ ವ್ಯಕ್ತಿಯೊಬ್ಬರು ಮನೆಯ ಬಾವಿಯ ರಾಟೆ ಅಳವಡಿಸುವ ಪೈಪಿಗೆ, ಲುಂಗಿಯಿಂದ ನೇಣು ಬೀಗಿದುಕೊಂಡು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ರಾತ್ರಿ ಗುಂಡಿಬೈಲಿನಲ್ಲಿ ನಡೆದಿದೆ.

ಆತ್ಮಹತ್ಯೆಗೈದಿರುವ ವ್ಯಕ್ತಿಯನ್ನು ಮಾದವ ಪೂಜಾರಿ (58) ಎಂದು ಗುರುತಿಸಲಾಗಿದೆ. ಮರದ ಮಿಲ್ಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರೆಂದು ತಿಳಿದುಬಂದಿದೆ.

ಕುಂದಾಪುರ :  ರೈಲ್ವೆ ಮೇಲ್ದರ್ಜೆಗೆ ಆದ್ಯತೆ :  ಕೋಟ ಭರವಸೆ – vishwanews24

ಆತ್ಮಹತ್ಯೆಗೆ ಸ್ವಷ್ಟ ಕಾರಣ ತಿಳಿದುಬಂದಿಲ್ಲ. ನಗರ ಪೋಲಿಸ್ ಠಾಣೆಯ ಪೋಲಿಸರು ಘಟನಾ ಸ್ಥಳದಲ್ಲಿಗೆ ಬಂದು ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡುವರು ಶವವನ್ನು ಜಿಲ್ಲಾಸ್ಪತ್ರೆಯ ಶವ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಇಲಾಖೆಗೆ ಸಹಕರಿಸಿದರು.

Leave a Reply