Featured

ಉಡುಪಿ : ಗೋ ಬ್ಯಾಕ್ ಶೋಭಾ ಅಭಿಯಾನ  ಅವರ ಪಕ್ಷದ ಕಾರ್ಯಕರ್ತರಿಂದ ನಡೆಯುತ್ತಿದೆ ಎನ್ನುವುದು ಅವರು ತಿಳಿದಿರಲಿ : ರಮೇಶ್ ಕಾಂಚನ್ – Vishwanews24

ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ ಶೋಭಾ ಹೇಳಿಕೆ ಹತಾಶೆಯ ಪರಮಾವಧಿ ..

ಸಂಸದೆ ಮೊದಲು ತಮ್ಮ ಸ್ಥಾನವನ್ನು ಭದ್ರಪಡಿಸುವ ಪರಿಸ್ಥಿತಿ ಎದುರಾಗಿದೆ ಎನ್ನುವುದನ್ನು ಮರೆಯದಿರಲಿ..

ಉಡುಪಿ: ಲೋಕಸಭಾ ಚುನಾವಣೆಯ ಬಳಿಕ ಕರ್ನಾಟಕ ರಾಜ್ಯದ ಕಾಂಗ್ರೆಸ್ ನೇತ್ರತ್ವದ ಸರಕಾರ ಪತನವಾಗಲಿದೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಹೇಳಿಕೆ ಹತಾಶೆಯ ಪರಮವಾಧಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಹೇಳಿದ್ದಾರೆ.

ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರ ನುಡಿದಂತೆ ಜನತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆಗೊಳಿಸಿ ಜನರ ಮನ್ನಣೆಗೆ ಪಾತ್ರವಾಗುತ್ತಿದ್ದು ಇದನ್ನು ಸಹಿಸಲು ಸಾಧ್ಯವಾಗದ ಸಚಿವೆ ಇಲ್ಲಸಲ್ಲದ ಹೇಳಿಕೆಗಳ ಮೂಲಕ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನಾದರೂ ಗೆಲ್ಲಿಸುವುದರ ಮೂಲಕ ರಾಜ್ಯದ ಜನತೆ ಬಿಜೆಪಿಗೆ ಸೂಕ್ತ ಪಾಠ ಕಲಿಸಲಿದ್ದಾರೆ. ಸೂಕ್ತ ಸಂಖ್ಯಾಬಲದೊಂದಿಗೆ ರಾಜ್ಯ ಸರಕಾರ ಅಧಿಕಾರ ನಡೆಸುತ್ತಿದ್ದು ಈ ಬಾರಿ ಆಪರೇಶನ್ ಕಮಲ ನಡೆಸಲು ಹೊರಟರೆ ಇದಕ್ಕೆ ಬಗ್ಗುವ ನಾಯಕರು ಯಾರೂ ಇಲ್ಲ. ನೇರವಾಗಿ ಎದುರಿಸಲು ಸಾಧ್ಯವಾಗದ ಬಿಜೆಪಿಗರು ಆಪರೇಶನ್ ಕಮಲದಂತಹ ವಾಮ ಮಾರ್ಗಗಳನ್ನು ಹುಡುಕುವುದರಲ್ಲಿ ನಿಸ್ಸೀಮರು ಎನ್ನುವುದು ಜಗತ್ತಿಗೆ ತಿಳಿದ ವಿಚಾರವಾಗಿದೆ.

ಕಾಂಗ್ರೆಸ್ ಸರಕಾರ ಪತನದ ಚಿಂತೆ ಮಾಡುತ್ತಿರುವ ಸಂಸದೆ ಶೋಭಾ ಕರಂದ್ಲಾಜೆಯವರು ಮೊದಲು ತಮ್ಮ ಸ್ಥಾನವನ್ನು ಭದ್ರಪಡಿಸುವ ಪರಿಸ್ಥಿತಿ ಎದುರಾಗಿದೆ ಎನ್ನುವುದನ್ನು ಮರೆಯದಿರಲಿ. ಅವರ ಪಕ್ಷದ ಕಾರ್ಯಕರ್ತರಿಗೆ ಧ್ವನಿಯಾಗಬೇಕಾಗಿದ್ದು ಸಂಸದೆ ಕೈಗೆ ಸಿಗದೆ ಇರುವುದರಿಂದ ನೊಂದಿರುವ ಸಹಸ್ರಾರು ಕಾರ್ಯಕರ್ತರು ಪಕ್ಷದ ವರಿಷ್ಠರಿಗೆ ದೂರು ನೀಡಿರುವುದು ಅವರ ಕಾರ್ಯಕರ್ತರಿಗೆ ಎಷ್ಟೊಂದು ನೋವು ನೀಡಿದ್ದಾರೆ ಎನ್ನುವುದು ತೋರಿಸುತ್ತದೆ. ಈಗಾಗಲೇ ಗೋ ಬ್ಯಾಕ್ ಶೋಭಾ ಅಭಿಯಾನ ನಡೆಯುತ್ತಿದ್ದು ಅವರ ಪಕ್ಷದ ಕಾರ್ಯಕರ್ತರಿಂದ ಎನ್ನುವುದು ಅವರು ತಿಳಿದರಲಿ. ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ನೀಡಲು ವಿಫಲರಾಗಿರುವ ಶೋಭಾ ಕರಂದ್ಲಾಜೆ ಅವರ ವಿರುದ್ದ ಇಂತಹ ಅಭಿಯಾನ ನಡೆಯುತ್ತಿರುವುದು ಸರಿಯಾಗಿ ಇದೆ. ಮಲ್ಪೆ ರಾಷ್ಟ್ರೀಯ ಹೆದ್ದಾರಿ, ಸಂತೆಕಟ್ಟೆ ಅಂಡರ್ ಪಾಸ್, ಇಂದ್ರಾಳಿ ಸೇತುವೆ ಇಂತಹ ಹತ್ತು ಹಲವು ಸಮಸ್ಯೆಗಳಿಂದ ಜನರನ್ನು ಎದುರಿಸಲು ಸಾಧ್ಯವಾಗದ ಅವರ ಕಾರ್ಯಕರ್ತರು ಗೋ ಬ್ಯಾಕ್ ಚಳುವಳಿ ನಡೆಸುತ್ತಿದ್ದಾರೆ ಇದನ್ನು ಸರಿ ಮಾಡಬೇಕಾಗಿರುವ ಸಂಸದೆಯವರು ರಾಜ್ಯ ಸರಕಾರದ ವಿರುದ್ದ ಮಾತನಾಡುವ ಯಾವುದೇ ನೈತಿಕ ಹಕ್ಕು ಹೊಂದಿಲ್ಲ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಹೇಳಿದ್ದಾರೆ.

Vishwa News 24

Recent Posts

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ -vishwanews24

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…

10 minutes ago

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ -vishwanews24

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…

22 minutes ago

ಮೂಡುಬಿದಿರೆ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ;  ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು  -vishwanews24

ಮೂಡುಬಿದಿರೆ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ;  ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು  ಮೂಡುಬಿದಿರೆ : ಚಲಿಸುತ್ತಿದ್ದ ಕಾರಿನ ಫಾಗ್ ಲೈಟ್‌ನಿಂದ ಅಕಸ್ಮಾತ್ತಾಗಿ ಬೆಂಕಿ…

3 hours ago

ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ ಕೊಡುತ್ತಾರೆ, ಕೊಡದೆ ಎಲ್ಲಿ ಹೋಗುತ್ತಾರೆ : ಪ್ರಿಯಾಂಕ ಖರ್ಗೆ -vishwanews24

ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ ಕೊಡುತ್ತಾರೆ, ಕೊಡದೆ ಎಲ್ಲಿ ಹೋಗುತ್ತಾರೆ : ಪ್ರಿಯಾಂಕ ಖರ್ಗೆ ಬೆಂಗಳೂರು: ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ…

3 hours ago

ಉಡುಪಿ : ಬಾಲಕಿ ನಾಪತ್ತೆ -vishwanews24

ಉಡುಪಿ : ಬಾಲಕಿ ನಾಪತ್ತೆ ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ…

17 hours ago

ಮಂಗಳೂರು ವಿಮಾನ ನಿಲ್ದಾಣದಲ್ಲಿ ‘ಉಬರ್’ ಸೇವೆ ಆರಂಭ -vishwanews24

ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಉಬರ್' ಸೇವೆ ಆರಂಭ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ…

20 hours ago