ಉಡುಪಿ: ಗ್ಯಾಸ್​​ ಅಭಾವವನ್ನೇ ಬಂಡವಾಳ ಮಾಡಿಕೊಂಡ ಆನ್‌ಲೈನ್‌ ವಂಚಕರು ; ಎಪಿಕೆ ಆ್ಯಪ್ ಕಳುಹಿಸಿ ಗ್ರಾಹಕರಿಗೆ ವಂಚನೆ – vishwanews24

Featured, ಉಡುಪಿ

ಉಡುಪಿ: ಗ್ಯಾಸ್​​ ಅಭಾವವನ್ನೇ ಬಂಡವಾಳ ಮಾಡಿಕೊಂಡ ಆನ್‌ಲೈನ್‌ ವಂಚಕರು ; ಎಪಿಕೆ ಆ್ಯಪ್ ಕಳುಹಿಸಿ ಗ್ರಾಹಕರಿಗೆ ವಂಚನೆ 

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡಿರುವ ಆನ್‌ಲೈನ್‌ ವಂಚಕರು ಅನಾಮಧೇಯ ಎಪಿಕೆ ಫೈಲ್‌ಗಳನ್ನು ಕಳುಹಿಸಿ ಗ್ರಾಹಕರನ್ನು ವಂಚಿಸುವ ಘಟನೆಗಳು ನಡೆಯುತ್ತಿವೆ.

ಮುಂಬಯಿಯಲ್ಲಿದ್ದು ಸದ್ಯ ಉಡುಪಿಯಲ್ಲಿರುವ ಲೀಲಿ ಪ್ಲೋರಿನ್ ಡಿಸಿಲ್ವಾ ವಂಚನೆಗೊಳಗಾದವರು. ಅವರಿಗೆ ಮಾ.11 ರಂದು ಬೆಳಗ್ಗೆ 11.30ಕ್ಕೆ ಮುಂಬಯಿಯ ಮಹಾನಗರ ಗ್ಯಾಸ್ ಲಿಮಿಡೆಟ್ ನಿಂದ ದೇವೇಶ ಜೋಷಿ ಕರೆ ಮಾಡಿ ಗ್ಯಾಸ್ ಗೆ ಆನ್‌ಲೈನ್‌ನಲ್ಲಿ ಹಣ ಪಾವತಿಸಿರುವ ಬಗ್ಗೆ ಅಪ್‌ಡೇಟ್ ಆಗಿಲ್ಲ ಎಂದು ತಿಳಿಸಿ ವಾಟ್ಸ್ ಆ್ಯಪ್ ನಲ್ಲಿ ಮಹಾನಗರ ಗ್ಯಾಸ್ ಎಪಿಕೆ ಆ್ಯಪ್ ಕಳುಹಿಸಿ ಅದನ್ನು ಡೌನ್‌ಲೋಡ್ ಮಾಡುವಂತೆ ತಿಳಿಸಿದ್ದಾರೆ.

ಇದನ್ನೂ ಓದಿ :

ಉಡುಪಿ:  ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಳ ಬ್ರಹ್ಮಕಲಶೋತ್ಸವ: ಮನೆ ಮನೆಗೆ ಕಾಣಿಕೆ ಡಬ್ಬಿ, ಆಮಂತ್ರಣ ಪತ್ರಿಕೆ ಬಿಡುಗಡೆ – vishwanews24

 

ಅದರಂತೆ ಲೀಲಿ ಪ್ಲೋರಿನ್ ಡಿಸಿಲ್ವಾ ಅದನ್ನ ಡೌನ್‌ಲೋಡ್ ಮಾಡಿದ್ದಾರೆ. ಈ ವೇಳೆ ತಾಂತ್ರಿಕ ದೋಷ ಕಂಡುಬಂದ ಪರಿಣಾಮ ಆರೋಪಿಯು ಲೀಲಿ ಪ್ಲೋರಿನ್ ಡಿಸಿಲ್ವಾ ಅವರ ಪತಿಯ ಕೆನರಾ ಬ್ಯಾಂಕ್ ಸಂತೆಕಟ್ಟೆ ಬ್ರಾಂ ಖಾತೆ ಸಂಖ್ಯೆ ಪಡೆದುಕೊಂಡಿದ್ದಾರೆ. ಅನಂತರ ಅವರ ಎರಡೂ ಬ್ಯಾಂಕ್ ಖಾತೆಗಳಿಂದ ಒಟ್ಟು 69,005 ರೂ.ಕಡಿತಗೊಂಡಿದೆ. ಈ ವಂಚನೆಯ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply