Featured

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ – vishwanews24

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯು, ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ 2026-27ನೇ ಸಾಲಿಗೆ ಖಾಲಿಯಿರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಪರಿಶೀಲಿಸಿ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.

ಆಡಿಯೋಲಜಿಸ್ಟ್ / ಸ್ಪೀಚ್ ಥೆರಪಿಸ್ಟ್ ಹುದ್ದೆಯ ವಿವರ:
ಖಾಲಿಯಿರುವ 01 ಆಡಿಯೋಲಜಿಸ್ಟ್/ಸ್ಪೀಚ್ ಥೆರಪಿಸ್ಟ್ (Audiologist / Speech Therapist) ಹುದ್ದೆಗೆ RCI ನಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ Speech and Language Pathology ಯಲ್ಲಿ ಬ್ಯಾಚುಲರ್ ಡಿಗ್ರಿ (Bachelors Degree) ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 25,000 ರೂ. ವೇತನ ಸಿಗಲಿದೆ.

ಇದನ್ನೂ ಓದಿ: 

ಕ್ಲಿನಿಕಲ್ ಸೈಕಾಲಜಿಸ್ಟ್ ಹುದ್ದೆಯ ಅರ್ಹತೆ:
ಕ್ಲಿನಿಕಲ್ ಸೈಕಾಲಜಿಸ್ಟ್ (Clinical Psychologist) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ 01 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು RCI ನಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ Child Psychology ಯಲ್ಲಿ ಮಾಸ್ಟರ್ ಡಿಗ್ರಿ (Master’s Degree) ಪೂರ್ಣಗೊಳಿಸಿರಬೇಕು. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ 2 ವರ್ಷಗಳ ಕಾರ್ಯಾನುಭವ ಇದ್ದವರಿಗೆ ಆದ್ಯತೆ ನೀಡಲಾಗುತ್ತಿದ್ದು, ಮಾಸಿಕ 25,000ರೂ. ವೇತನ ನಿಗದಿಪಡಿಸಲಾಗಿದೆ.

ಆಪ್ಟೋಮೆಟ್ರಿಸ್ಟ್ ಹುದ್ದೆಯ ವಿವರಗಳು:
ಆಪ್ಟೋಮೆಟ್ರಿಸ್ಟ್ (Optometrist) ವಿಭಾಗದಲ್ಲಿ 01 ಹುದ್ದೆ ಖಾಲಿಯಿದ್ದು, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Optometry ಯಲ್ಲಿ ಬ್ಯಾಚುಲರ್ ಅಥವಾ ಮಾಸ್ಟರ್ ಡಿಗ್ರಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ಅನುಭವ ಇರುವವರಿಗೆ ಮುಂಚೂಣಿ ಆದ್ಯತೆ ಇರಲಿದ್ದು, ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ 17,278 ರೂ. ವೇತನ ನೀಡಲಾಗುತ್ತದೆ.

ಇದನ್ನೂ ಓದಿ: 

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಕೊನೆಯ ದಿನಾಂಕ:
ಆಸಕ್ತರು ಅಧಿಕೃತ ವೆಬ್‌ಸೈಟ್ udupi.nic.in ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ಪ್ರಮಾಣಪತ್ರಗಳನ್ನು ಲಗತ್ತಿಸಿ, ದಿನಾಂಕ 19/09/2026 ರ ಸಂಜೆ 4:00 ಗಂಟೆಯೊಳಗೆ ‘ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಎನ್.ಹೆಚ್.ಎಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಅಜ್ಜರಕಾಡು, ಉಡುಪಿ’ ಇಲ್ಲಿಗೆ ನೇರವಾಗಿ ಸಲ್ಲಿಸಬೇಕಾಗುತ್ತದೆ. ಈ ನೇಮಕಾತಿಯು ಸಂಪೂರ್ಣವಾಗಿ ಜಿಲ್ಲಾ ಆರೋಗ್ಯ ಸಂಘ ಉಡುಪಿ ಇದರ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.

Vishwa News 24

Recent Posts

15 ವರ್ಷದೊಳಗಿನ ಮಕ್ಕಳಿಗೆ ಹೊಸ ಪಾಸ್‌ಪೋರ್ಟ್ ನಿಯಮ ಜಾರಿ – vishwanews24

ಪಾಸ್‌ಪೋರ್ಟ್ ನಿಯಮದಲ್ಲಿ ಬದಲಾವಣೆ : 15 ವರ್ಷದೊಳಗಿನ ಮಕ್ಕಳಿಗೆ ಹೊಸ ನೀತಿ, ಅರ್ಜಿ ಶುಲ್ಕ ಪರಿಷ್ಕರಣೆ ನವದೆಹಲಿ: ವಿದೇಶಾಂಗ ಸಚಿವಾಲಯವು…

38 minutes ago

ಉಡುಪಿ: ಹುಲಿ ಕುಣಿತಕ್ಕೆ ಮನಸೋತ ಯತ್ನಾಳ್ ; ಹುಲಿ ವೇಷಧಾರಿಗಳೊಂದಿಗೆ ಭರ್ಜರಿ ಸ್ಟೆಪ್ – vishwanews24

ಉಡುಪಿ: ಹುಲಿ ಕುಣಿತಕ್ಕೆ ಮನಸೋತ ಯತ್ನಾಳ್ ; ಹುಲಿ ವೇಷಧಾರಿಗಳೊಂದಿಗೆ ಭರ್ಜರಿ ಸ್ಟೆಪ್ ಉಡುಪಿ: ಹುಲಿ ಕುಣಿತಕ್ಕೆ ಮನಸೋತ ಶಾಸಕ ಬಸನಗೌಡ ಪಾಟೀಲ್…

45 minutes ago

ಮಂಗಳೂರು: ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ  – vishwanews24

ಮಂಗಳೂರು: ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ  ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಲ್ಲಿ ನಡೆಯಲಿರುವ ಸಚಿವ…

55 minutes ago

ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತ ಮೊಬೈಲ್ ನೆಟ್‌ವರ್ಕ್ ಸಮಸ್ಯೆ; ತಾಂತ್ರಿಕ ಪರಿಹಾರಕ್ಕೆ ಸರ್ಕಾರ ಕ್ರಮ: ಪ್ರಿಯಾಂಕ್ ಖರ್ಗೆ – vishwanews24

ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತ ಮೊಬೈಲ್ ನೆಟ್‌ವರ್ಕ್ ಸಮಸ್ಯೆ; ತಾಂತ್ರಿಕ ಪರಿಹಾರಕ್ಕೆ ಸರ್ಕಾರ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು…

1 hour ago

ಉಡುಪಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರದ ಚಿಂತನೆ : ಡಿಸಿಎಂ ಡಾ.ಜಿ.ಪರಮೇಶ್ವರ್ – vishwanews24

ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಆದ್ಯತೆ : ಡಿಸಿಎಂ ಡಾ.ಜಿ.ಪರಮೇಶ್ವರ್ ಉಡುಪಿ : ಉಡುಪಿ ಜಿಲ್ಲೆಯ…

1 hour ago

ಕರಾವಳಿಯ ವಾತಾವರಣ ಕೆಡಿಸಲು ಹಾಗೂ ವೋಟ್ ಬ್ಯಾಂಕ್‌ಗಾಗಿ ಕ್ಯಾಬಿನಟ್‌ ಸಭೆ : ಯತ್ನಾಳ್ ಲೇವಡಿ  – vishwanews24

ಕರಾವಳಿಯ ವಾತಾವರಣ ಕೆಡಿಸಲು ಹಾಗೂ ವೋಟ್ ಬ್ಯಾಂಕ್‌ಗಾಗಿ ಕ್ಯಾಬಿನಟ್‌ ಸಭೆ : ಯತ್ನಾಳ್ ಲೇವಡಿ  ಉಡುಪಿ: ಕರಾವಳಿಯಲ್ಲಿ ನಡೆಯಲಿರುವ ಸಚಿವ…

2 hours ago