Featured

ಅಸ್ಸಾಂನಲ್ಲಿ ಬಹುಪತ್ನಿತ್ವಕ್ಕೆ ಕಡಿವಾಣ : ಒಂದಕ್ಕಿಂತ ಹೆಚ್ಚು ಮದುವೆಯಾದರೆ ಸರ್ಕಾರಿ ಉದ್ಯೋಗದಿಂದ ವಜಾ – vishwanews24

ಅಸ್ಸಾಂನಲ್ಲಿ ಬಹುಪತ್ನಿತ್ವಕ್ಕೆ ಕಡಿವಾಣ : ಒಂದಕ್ಕಿಂತ ಹೆಚ್ಚು ಮದುವೆಯಾದರೆ ಸರ್ಕಾರಿ ಉದ್ಯೋಗದಿಂದ ವಜಾ

ದಿಸ್ಪುರ್ : ಅಸ್ಸಾಂ ಸರ್ಕಾರವು ಬಹುಪತ್ನಿತ್ವಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಒಂದಕ್ಕಿಂತ ಹೆಚ್ಚು ಮದುವೆಯಾದರೆ ಸರ್ಕಾರಿ ನೌಕರರಿಗೆ ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದೆ.

ಒಂದಕ್ಕಿಂತ ಹೆಚ್ಚು ಮದುವೆಯಾದರೆ ಸರ್ಕಾರಿ ನೌಕರರಿಗೆ ಕೆಲಸದಿಂದ ಗೇಟ್‌ಪಾಸ್ ನೀಡಲು ಹಾಗೂ ಬಹುಪತ್ನಿತ್ವ ಸಾಬೀತಾದರೆ ಸರ್ಕಾರಿ ಉದ್ಯೋಗದಿಂದ ವಜಾಗೊಳಿಸಲು ಅಸ್ಸಾಂ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗ ಪಡೆಯುವುದಕ್ಕೂ ಅವರು ಅನರ್ಹರಾಗಲಿದ್ದಾರೆ.

ಅಸ್ಸಾಂ ಸೇವಾ ನಿಯಮಗಳು 1964ಕ್ಕೆ ತಿದ್ದುಪಡಿ ತರಲಾಗಿದ್ದು, ಇದರಲ್ಲಿನ ನಿಯಮ 7ಕ್ಕೆ ಹೊಸ ಕಲಂ 6 ಅನ್ನು ಸೇರ್ಪಡೆ ಮಾಡಲಾಗಿದೆ. ಈ ಕಠಿಣ ನಿಯಮವು ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮದ ಸರ್ಕಾರಿ ನೌಕರರಿಗೂ ಅನ್ವಯಿಸಲಿದೆ.

ಈ ಬಗ್ಗೆ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಾತನಾಡಿ, ಏಕರೂಪ ನಾಗರಿಕ ಸಂಹಿತೆ ಜಾರಿಯಾದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಕೇವಲ ಅಮಾನತು ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ, ಇನ್ನು ಮುಂದೆ ಉದ್ಯೋಗದಿಂದಲೇ ವಜಾಗೊಳಿಸುವ ಕಠಿಣ ಕ್ರಮಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದಾರೆ.

Vishwa News 24

Recent Posts

ಅಗ್ನಿಪಥ್ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಮಹತ್ವದ ಬದಲಾವಣೆ ; ಅಗ್ನಿವೀರರಿಗೆ 2 ವರ್ಷ ಸೇವಾ ವಿಸ್ತರಣೆ – vishwanews24

ಅಗ್ನಿಪಥ್ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಮಹತ್ವದ ಬದಲಾವಣೆ .. ಅಗ್ನಿವೀರರ ಸೇವಾ ಅವಧಿ 2 ವರ್ಷ ವಿಸ್ತರಣೆ ನವದೆಹಲಿ: ಕೇಂದ್ರ…

6 minutes ago

ಕಾರ್ಕಳ:  ಯುವತಿಗೂ ನ್ಯಾಯ ಸಿಗಬೇಕು ; ಪ್ರದೀಪ್ ಪೂಜಾರಿ ಸಾವಿಗೂ ನ್ಯಾಯ ದೊರೆಯಬೇಕು : ಶುಭದ ರಾವ್ – vishwanews24

ಕಾರ್ಕಳ:  ಯುವತಿಗೂ ನ್ಯಾಯ ಸಿಗಬೇಕು ; ಪ್ರದೀಪ್ ಪೂಜಾರಿಯ ಸಾವಿಗೂ ನ್ಯಾಯ ದೊರೆಯಬೇಕು : ಶುಭದ ರಾವ್ ಕಾರ್ಕಳ: ಪೆರ್ಡೂರಿನಲ್ಲಿ…

24 minutes ago

ಮಂಗಳೂರು: ಬೈಕಂಪಾಡಿಯಲ್ಲಿ ಅಕ್ರಮ ಗೋ ಸಾಗಾಟ ಪತ್ತೆ:  ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 16 ಗೋವುಗಳ ರಕ್ಷಣೆ – vishwanews24

ಮಂಗಳೂರು: ಬೈಕಂಪಾಡಿಯಲ್ಲಿ ಅಕ್ರಮ ಗೋ ಸಾಗಾಟ ಪತ್ತೆ: 16 ಗೋವುಗಳ ರಕ್ಷಣೆ  ಮಂಗಳೂರು: ನಗರದ ಬೈಕಂಪಾಡಿ ಪರಿಸರದಲ್ಲಿ ಬುಧವಾರ ಮುಂಜಾನೆ…

45 minutes ago

ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಶಾಕ್ ; ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿ – vishwanews24

ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಶಾಕ್ ; ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿ ಬೆಂಗಳೂರು : ರಾಜ್ಯದಲ್ಲಿ ಬಸ್ ಪ್ರಯಾಣ…

1 hour ago

ನ. 13ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ: ನಮ್ಮ ಮೆಟ್ರೋ ಪಿಂಕ್ ಲೈನ್‌ನ ಎಲಿವೇಟೆಡ್ ಮಾರ್ಗ ಉದ್ಘಾಟನೆ – vishwanews24

ನ. 13ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ: ನಮ್ಮ ಮೆಟ್ರೋ ಪಿಂಕ್ ಲೈನ್‌ನ ಎಲಿವೇಟೆಡ್ ಮಾರ್ಗ ಉದ್ಘಾಟನೆ ಬೆಂಗಳೂರು: ಪ್ರಧಾನಿ ನರೇಂದ್ರ…

2 hours ago

ಗೃಹಲಕ್ಷ್ಮೀ ಫಲಾನುಭವಿಗಳೇ ಎಚ್ಚರ: ಮರುಪರಿಶೀಲನೆ ನೆಪದಲ್ಲಿ OTP, ಬ್ಯಾಂಕ್ ವಿವರ ಕೇಳುವ ಸೈಬರ್ ವಂಚಕರ ಜಾಲ – vishwanews24

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳೇ ಎಚ್ಚರವಾಗಿರಿ.. ಗೃಹಲಕ್ಷ್ಮಿ ಯೋಜನೆಯ ಹೆಸರಲ್ಲಿ ಸಕ್ರಿಯವಾಗಿವೆ ಸೈಬರ್‌ ವಂಚನೆ ಜಾಲ ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ನೆಪದಲ್ಲಿ…

4 hours ago