ಉಡುಪಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಟೋಲ್ ಗದ್ದಲ,ಆಡಳಿತ ಪಕ್ಷದ ಸದಸ್ಯರಿಂದ ಸಭತ್ಯಾಗ.

Featured, ಉಡುಪಿ

ಉಡುಪಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಟೋಲ್ ಗದ್ದಲ,ಆಡಳಿತ ಪಕ್ಷದ ಸದಸ್ಯರಿಂದ ಸಭತ್ಯಾಗ.

ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್‍ನ 14 ನೇ ಸಾಮಾನ್ಯ ಸಭೆಯು ಟೋಲ್ ಹಾಗೂ ಮರುಳುಸಮಸ್ಯೆಗೆ ಬಲಿಯಾಯಿತು.
ಕೋರಂ ಇಲ್ಲದೆ ಅರ್ಧಗಂಟೆ ತಡವಾಗಿ ಆರಂಭವಾದ ಸಭೆಯು ಪ್ರಶ್ನಾವಳಿಯ ಸಮಯದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರು ಸಾಸ್ತಾನ ಮತ್ತು ಹೆಜಮಾಡಿಯ ಟೋಲ್ ಗೇಟ್‍ಗಳಲ್ಲಿ ಸ್ಥಳಿಯ ವಾಹನಗಳಿಗೆ ಟೋಲ್ ಸಂಗ್ರಹಿಸುವ ವಿರುದ್ಧ ಮಾತನಾಡಿದರು.ಅದಕ್ಕೆ ಧ್ವನಿಗೂಡಿಸಿದ ಗೀತಾಂಜಲಿ ಎಂ ಸುವರ್ಣ ಹೆಜಮಾಡಿ ಟೋಲ್‍ನಲ್ಲಿ ಪೋಲಿಸರನ್ನ ಹಾಕಿ ಸ್ಥಳಿಯ ವಾಹನಗಳಿಗೆ ಟೋಲ್ ಸಂಗ್ರಹಿಸುತ್ತಾರೆ ಪ್ರತಿಭಟನೆ ಮಾಡಿದವರರನ್ನ ಬಂಧನ ಮಾಡುತ್ತಾರೆ ಇದು ಎಷ್ಟು ಸರಿ ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೂಡ ಕೈಗೊಂಡಿಲ್ಲ ಎಂದರು.
ಈ ವಿಚಾರವಾಗಿ ರೇಶ್ಮಾ ಉದಯ ಶೆಟ್ಟಿ ಹಾಗೂ ಪ್ರತಾಪ್ ಶೆಟ್ಟಿ ಮಾರಾಡಿ ಧ್ವನಿಗೂಡಿಸಿ ಸರಿಯಾದ ಸರ್ವೀಸ್ ರಸ್ತೆ ನಿರ್ಮಾಣ ಮಾಡಿಲ್ಲ, ಪೂರ್ತಿ ಹೆದ್ದಾರಿ ಕಾಮಗಾರಿ ಮುಗಿಯದೇ ಸ್ಥಳಿಯ ವಾಹನಗಳಿಗೆ ಟೋಲ್ ಸಂಗ್ರಹಿಸುತ್ತಿರುವುದು ಹಗಲು ದರೋಡೆ ಎಂದು ಬೇಸರ ವ್ಯಕ್ತ ಪಡಿಸಿದರು.
ಒಟ್ಟಾರೆಯಾಗಿ ಇಂದಿನ ಜಿಲ್ಲಾ ಪಂಚಾಯತ್‍ನ ಸಾಮಾನ್ಯ ಸಭೆಯು ಟೋಲ್ ಗಲಾಟೆಯೊಂದಿಗೆ ಅರ್ಧಕ್ಕೆ ಮೊಟಕುಗೊಂಡಿತು.