ಉಡುಪಿ ಜಿಲ್ಲಾ ಪ್ಲವರ್ ಡೆಕೋರೇಟರ್ಸ್ ಮಾಲಕರ ಸಂಘ ಉದ್ಘಾಟನೆ ಸಮಾರಂಭ :- ಪತ್ರಿಕಾಗೋಷ್ಠಿಯಲ್ಲಿ ಅಕ್ಷಯ ಜೈನ್ – Vishwanews24

Featured, ಉಡುಪಿ

ಉಡುಪಿ ಜಿಲ್ಲಾ ಪ್ಲವರ್ ಡೆಕೋರೇಟರ್ಸ್ ಮಾಲಕರ ಸಂಘ ಉದ್ಘಾಟನೆ ಸಮಾರಂಭ:-ಪತ್ರಿಕಾಗೋಷ್ಠಿ

ಉಡುಪಿ: ಜಿಲ್ಲಾ ಪ್ಲವರ್ ಡೆಕೋರೇಟರ್ ಮಾಲಕರ ನೇತೃತ್ವದಲ್ಲಿ ಹಿರಿಯ ಸಮಾನ ಉದ್ಯಮಿಗಳ ಮಾರ್ಗದರ್ಶನದಲ್ಲಿ, ಗಣ್ಯರ ಉಪಸ್ಥಿತಿಯಲ್ಲಿ ಉಡುಪಿ ಜಿಲ್ಲಾ ಪ್ಲವರ್ ಡೆಕೋರೇಟರ್ ಮಾಲಕರ ಸಂಘದ ಉದ್ಘಾಟನಾ ಸಮಾರಂಭ ನವೆಂಬರ್ 13 ಆದಿತ್ಯವಾರ ಸಂಜೆ ನಾಲ್ಕು ಗಂಟೆಗೆ ಶ್ಯಾಮಿಲಿ ಸಭಾಭವನ ಅಂಬಲಪಾಡಿ ಉಡುಪಿ ಇಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅಕ್ಷಯ ಜೈನ್ ತಿಳಿಸಿದರು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ರಘುಪತಿ ಭಟ್ ನೆರವೇರಿಸಲಿದ್ದು, ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಪ್ರವರ್ತಕರಾದ ಡಾ. ಜಿ ಶಂಕರ್ ಅವರು ಲಾಂಛನ ಅನಾವರಣ ಮಾಡಲಿದ್ದಾರೆ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾಕ್ಟರ್ ಮೋಹನ್ ಆಳ್ವ ಇವರ ಸಭಾಧ್ಯಕ್ಷತೆ ಇರಲಿದೆ.

ಮಂಗಳೂರು : ಕರಾವಳಿಯಲ್ಲಿ ಹರಡುತ್ತಿರುವ ಕೆಂಗಣ್ಣು ಕಾಯಿಲೆ ಸಮಸ್ಯೆ – Vishwanews24

ಗಣ್ಯ ಉಪಸ್ಥಿತಿಯಲ್ಲಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಸುನಿಲ್ ಕುಮಾರ್ ಶಾಸಕರಾದ ಲಾಲಾಜಿ ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಉಡುಪಿ ನಗರಸಭಾ ಅಧ್ಯಕ್ಷರಾದ ಸುಮಿತ್ರ ನಾಯಕ್ ,ಉಡುಪಿ ಮಂಗಳೂರು ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ , ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ , ಮನೋಹರ್ ಶೆಟ್ಟಿ ,ರಾಮಕೃಷ್ಣ ಕುಂದರ್, ಉದಯಕುಮಾರ್, ಜನಾರ್ಧನ ಕೊಡವೂರು,ಜಲೀಲ್ ಸಾಹೇಬ್, ಅಶ್ವಿತ್ ಕೊಟ್ಟಾರಿ ಸುಲಕ್ಷಣ್ ಬಿ ರೈ ,ವಿಲ್ಫ್ರೆಡ್ ಪಿಂಟೋ ಉಪಸ್ಥಿತರಿರುವರು ಎಂದರು.

ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರಿಗೆ ಗೌರವ ಸನ್ಮಾನ ಕಾರ್ಯಕ್ರಮ ಜರಗಲಿದ್ದು ತದನಂತರ ಚೇತನ್ ಬ್ಯಾಂಡ್ಸ್ ಬಳಗ ಮಂಗಳೂರು ಇವರಿಂದ ಸಂಗೀತ ಮತ್ತು ಮನೋರಂಜನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮಿಳು ನಟ ವಿಶಾಲ್ ಭೇಟಿ.. ಆಶ್ಲೇಷ ಬಲಿ ಪೂಜೆ ನೆರವೇರಿಸಿದ ನಟ – Vishwanews24

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಶೆಟ್ಟಿ ಕಾಪು ,ಕೋಶಾಧಿಕಾರಿ ಸುರೇಶ್ ಅಮೀನ್, ಸಂಘಟನಾ ಕಾರ್ಯದರ್ಶಿ ಈಶಾನ್ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು

Leave a Reply