ಉಡುಪಿ

ಉಡುಪಿ: ಜಿಲ್ಲಾ ಬಿಜೆಪಿಯಲ್ಲಿ ಮುಗಿಯದ ಗೊಂದಲ: ಜಾತಿ ಲೆಕ್ಕಾಚಾರದಲ್ಲಿ ಕೈ ತಪ್ಪಲಿದೆಯೇ ಸೂಕ್ತರಿಗೆ ಸ್ಥಾನಮಾನ : vishwanews24

ಉಡುಪಿ: ಜಿಲ್ಲಾ ಬಿಜೆಪಿಯಲ್ಲಿ ಮುಗಿಯದ ಗೊಂದಲ: ಜಾತಿ ಲೆಕ್ಕಾಚಾರದಲ್ಲಿ ಕೈ ತಪ್ಪಲಿದೆಯೇ ಸೂಕ್ತರಿಗೆ ಸ್ಥಾನಮಾನ ..

ಜಿಲ್ಲೆಯ ಕಾರ್ಯಕರ್ತರಿಂದ ರಾಜ್ಯಾಧ್ಯಕ್ಷ ವಿಜಯೇಂದ್ರ ಕಚೇರಿಗೆ ಪತ್ರ..

ಉಡುಪಿ ( Vishwanews24): ಉಡುಪಿ ಬಿಜೆಪಿಯ ನೂತನ ಜಿಲ್ಲಾ ಸಮಿತಿ ರಚನೆಯ ಗೊಂದಲ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ ಈಗಾಗಲೇ ಜಿಲ್ಲಾಧ್ಯಕ್ಷರು ಮತ್ತು ಮೂರು ಮಂದಿ ಪ್ರಧಾನ ಕಾರ್ಯದರ್ಶಿಗಳ ನೇಮಕವಾಗಿದ್ದು ಇನ್ನೂ ವಿವಿಧ ಕ್ಷೇತ್ರಗಳ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ 10 ಹಲವಾರು ಮೋರ್ಚಾಗಳ ನಿಯುಕ್ತಿ ಕೆಲಸ ಬಾಕಿ ಉಳಿದಿದೆ.

ಸಂಘಟನೆ ವಿಚಾರದಲ್ಲಿ ಜಾತಿಯನ್ನು ನೋಡುವುದಿಲ್ಲ ಎಂಬ ತತ್ವ ಸದ್ಯ ಬಿಜೆಪಿ ಕೈ ಬಿಡುವ ಲಕ್ಷಣ ಕಾಣುತ್ತಿದೆ ಈಗಾಗಲೇ ಜಿಲ್ಲಾಧ್ಯಕ್ಷರ ನೇಮಕಾತಿ ಮೊಗವೀರ ಸಮಾಜದಿಂದ ನಡೆದಿದ್ದು ಕಾರ್ಯದರ್ಶಿಗಳನ್ನು ಬಂಟ ಸಮಾಜ ಹಾಗೂ ಜಿಎಸ್ಬಿ ಸಮುದಾಯದಿಂದ ನಿಯುಕ್ತಿ ಗೊಳಿಸಲಾಗಿದೆ ಈ ಪೈಕಿ ಮುಂದೆ ಬಾಕಿ ಇರುವ ಉಪಾಧ್ಯಕ್ಷರು ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಮೋರ್ಚಗಳ ಸಂಚಾಲಕರ ನಿಯುಕ್ತಿಗೊಳಿಸುವಲ್ಲೂ ಜಾತಿ ಲೆಕ್ಕಾಚಾರ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಈ ಜಾತಿ ಲೆಕ್ಕಾಚಾರದ ಪ್ರಕಾರವಾಗಿ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿರುವ ಕಾರ್ಯಕರ್ತರಿಗೆ ಹಿನ್ನಡೆ ಯಾಗುವ ಸಾಧ್ಯತೆ ಹೆಚ್ಚಾಗಿದೆ. ಎನ್ನಲಾಗುತ್ತಿದ್ದು ಜಾತಿ ಆಧಾರದ ಮೇಲೆ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಚುನಾವಣೆಗೆ ಮುನ್ನವೇ ಕ್ಷೇತ್ರದಾದ್ಯಂತ ಭಿನ್ನಮತ ಭುಗಿಲೇಳುವ ಸಾಧ್ಯತೆ ಇದೆ.

ಜಿಲ್ಲಾ ಬಿಜೆಪಿ ಕಚೇರಿಯ ಕಡೆ ತಲೆ ಹಾಕಿ ಮಲಗದ ಕೆಲವರಿಗೆ ಸ್ಥಾನಮಾನಗಳು ದೊರಕುತ್ತಿದೆ ಆದರೆ ನಿಷ್ಠೆಯಿಂದ 30 – 35 ವರ್ಷಗಳಿಂದ ಕಾರ್ಯಕರ್ತರಾಗಿ ದುಡಿದು ಕಾರ್ಯಕರ್ತರ ಜೊತೆಗಿರುವ ಅದೆಷ್ಟೋ ಸಂಘಟನಾತ್ಮಕ ನಾಯಕರಿಗೆ ಅವಕಾಶಗಳು ಕೈತಪ್ಪಿ ಹೋಗುತ್ತಿದೆ ಇದೆಲ್ಲವೂ ಒಂದು ರೀತಿಯ ಜಾತಿ ಲೆಕ್ಕಾಚಾರವು ಆಗಿದೆ ಎನ್ನಲಾಗುತ್ತಿದೆ.

ಚುನಾವಣೆಯ ಸಮಯದಲ್ಲೂ ಕೂಡ ಜಾತಿ ತಾರತಮ್ಯದೊಂದಿಗೆ ಅವಕಾಶಗಳು ತಪ್ಪಿ ಹೋಗುತ್ತಿದ್ದು ಸಂಘಟನೆಯ ಚಟುವಟಿಕೆ ನಡೆಸಲು ಕೂಡ ಯೋಗ್ಯವಾದ ಸ್ಥಾನಮಾನಗಳು ಸಿಗದೇ ವಂಚಿತರಾಗುತ್ತಿದ್ದೇವೆ ಎಂಬ ಮಾತು ಹಿರಿಯ ನಾಯಕರಲ್ಲಿ ಕೇಳಿ ಬರುತ್ತಿದೆ.

ಕಾರ್ಯಕರ್ತರ ಜೊತೆಗಿದ್ದು ಕಾರ್ಯಕರ್ತರ ಜೊತೆಗೆ ಬೆರೆತು ಕಾರ್ಯಕರ್ತರಿಂದ ಕಾರ್ಯಕರ್ತರಿಗಾಗಿ ಕಾರ್ಯಕರ್ತರಿಗೋಸ್ಕರ ಇರುವ ಬಿಜೆಪಿ ಪಾರ್ಟಿ ಸದ್ಯ ಆಳುವ ನಾಯಕರ ಕೈಗೊಂಬೆಯಾಗಿದ್ದು ನಾಯಕತ್ವದ ಕೈಯಡಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಇವ ನಮ್ಮ ಜನ ಎಂಬ ಮಾತಿಗೆ ಪಾರ್ಟಿಯ ಜವಾಬ್ದಾರಿಯುತ ಹುದ್ದೆಗಳು ನಿಷ್ಠಾವಂತರಿಗೆ ಹಾಗೂ ಕೆಲಸ‌ ಮಾಡುವವರಿಗೆ ಕೈ ತಪ್ಪುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ.

ಜಿಲ್ಲೆಯ ಕಾರ್ಯಕರ್ತರಿಂದ ವಿಜಯೇಂದ್ರ ಕಚೇರಿಗೆ ಪತ್ರ
ಉಡುಪಿ ಜಿಲ್ಲೆಯಿಂದ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರಿಗೆ ಕಾರ್ಯಕರ್ತರ ಮನದಾಳದ ನೋವಿನ ಪತ್ರವು ಕಡತ ಸೇರಿಕೊಂಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಹಿಂದಿನ ದಿನಗಳಲ್ಲಿ ಬೇರೆ ಪಾರ್ಟಿಯಿಂದ ಬಂದವರಿಗೆ ಸೂಕ್ತ ಸ್ಥಾನಮಾನ ಕೊಡುವಲ್ಲಿ ಇಲ್ಲಿನ ನಾಯಕರು ಕೆಲಸ ಮಾಡುತ್ತಿದ್ದು ಪಕ್ಷದಲ್ಲಿ ನಿರಂತರ ಚಟುವಟಿಕೆಯಲ್ಲಿರುವ ನಮಗೆ ಯಾವುದೇ ರೀತಿಯ ಸ್ಥಾನಮಾನಗಳು ದೊರಕುತ್ತಿಲ್ಲ ಹಾಗಾಗಿ ನಿಮ್ಮ ಅವಧಿಯಲ್ಲಾದರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನಾಯಕರಿಗೆ ಸೂಕ್ತ ಸ್ಥಾನಮಾನಗಳಲ್ಲಿ ನಿಯುಕ್ತಿಗೊಳಿಸುವಂತೆ ಆಗ್ರಹಿಸಿ ಮತ್ತು ಮನವಿ ಪತ್ರವನ್ನು ಸಲ್ಲಿಸಿದೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ಚುನಾವಣೆಯ ಹೊಸ್ತಿಲಲ್ಲೇ ಈ ರೀತಿಯ ಭಿನ್ನಮತದ ರಾಗಗಳು ರಾಜ್ಯದಲ್ಲಿ ಉದ್ಭವಿಸುವುದು ಸಾಮಾನ್ಯ ಆದರೆ ಸಂಘಟನಾತ್ಮಕ ದೃಷ್ಟಿಯಲ್ಲಿ ಜಾತಿ ವ್ಯವಸ್ಥೆಯನ್ನು ಬದಿಗಿಟ್ಟು ಕಮಿಟಿ ರಚನೆ ಆಗಬೇಕೆಂಬುದು ದಿ.ಡಾಕ್ಟರ್ ವಿ ಎಸ್ ಆಚಾರ್ಯರವರ ಕನಸಾಗಿತ್ತು ಸದ್ಯ ಈ ಕನಸು ಉಡುಪಿ ಜಿಲ್ಲೆಯಲ್ಲಿ ನುಚ್ಚುನೂರಾಗುತ್ತಾ ಎಂಬುದು ಕಾದು ನೋಡಬೇಕಾಗಿದೆ.

ಬ್ಯುರೋ ರಿಪೋರ್ಟ್ ವಿಶ್ವ ನ್ಯೂಸ್ 24 ಉಡುಪಿ

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

7 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

8 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

8 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

9 hours ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

9 hours ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

9 hours ago