ಉಡುಪಿ : ಜಿಲ್ಲಾ ಬಿಜೆಪಿ ಅಧ್ಯಕ್ಷರ ತಾರತಮ್ಯ ನೀತಿ :- ಕಂಗೆಟ್ಟ ಕಾರ್ಯಕರ್ತರಿಂದ ಪ್ರತಿಭಟನೆ ತಯಾರಿ – vishwanews24

Featured, ಉಡುಪಿ

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರ ತಾರತಮ್ಯ ನೀತಿ – ಕಂಗೆಟ್ಟ ಕಾರ್ಯಕರ್ತರಿಂದ ಪ್ರತಿಭಟನೆ ತಯಾರಿ 

ಉಡುಪಿ: ಸದ್ಯ ಉಡುಪಿ ಜಿಲ್ಲಾ ಬಿಜೆಪಿ ಪಕ್ಷ ಸಂಘಟನೆ ಹೊರತು ಪಡಿಸಿ ಪ್ರತಿದಿನ ಹೊಸ ರೂಪಾಂತರ ಸುದ್ದಿಗಳಿಗೆ ಕಾರಣವಾಗುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರ ವಿರುದ್ಧ ಅಸಮಾಧಾನ ಸ್ಪೋಟಗೊಂಡ ಬೆನ್ನಲ್ಲೇ ಎಂ.ಎಲ್.ಸಿ ಚುನಾವಣೆಯಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಇವರಿಗೆ ವಿರೋಧ ವ್ಯಕ್ತವಾಗಿತ್ತು.

ಅದು‌ ಮುಗಿದ ಕೆಲವೇ ದಿನದಲ್ಲಿ ಕಾರ್ಯಕರ್ತರು ಹಾಗೂ ಜಿಲ್ಲಾಧ್ಯಕ್ಷರ ನಡುವಿನ ಭಿನ್ನಮತ ಸೋಮವಾರದ ದಿನದಂದು ಕೈ ಕೈ ಮಿಲಾಯಿಸುವ ಮಟ್ಟಿಗೆ ಬೆಳೆದುಹೋಗಿದೆ.

ಸೋಮವಾರದಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆಂದು ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ಪಾರ್ಟಿ ಕಚೇರಿಯಿಂದ ಹೊರ ನಡೆಯಿರಿ ಎಂದು ತಾಕಿತ್ತು ಮಾಡಿದ್ದಾರೆ ಎನ್ನಲಾಗಿದೆ.

ಉಡುಪಿ: ಜೂನ್ 21 ರಂದು ನೇರ ಸಂದರ್ಶನ – vishwanews24

ಇದರಿಂದ ಬೇಸತ್ತ ಕಾರ್ಯಕರ್ತರು ಪ್ರತಿಭಟನೆ ಮುಗಿದ ನಂತರ ಜಿಲ್ಲಾಧ್ಯಕ್ಷರ ನಡೆಯ ಬಗ್ಗೆ ಪ್ರಶ್ನಿಸಿದ ಸಮಯದಲ್ಲಿ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಹಾಲಿ ನಗರಸಭ ಸದಸ್ಯರೊಬ್ಬರು ಪಾರ್ಟಿ ಕಚೇರಿ ಟೇಬಲನ್ನು ಬಡಿದು ಬಡಿದು ನೀವು ಬಿಜೆಪಿ ಪಾರ್ಟಿ ಕಚೇರಿಗೆ ಬರಲು ಯಾವ ಹಂತದ ಪದಾಧಿಕಾರಿಗಳು ಎಂಬ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.

ಇದರಿಂದ ಬೇಸತ್ತ ಕಾರ್ಯಕರ್ತರು ಪಾರ್ಟಿ ಕಚೇರಿಯಿಂದ ಹೊರನಡೆದು ಅಸಮಾಧಾನ ಹೊರಹಾಕಿದ್ದು , ಸೂಕ್ತ ನ್ಯಾಯ ಸಿಗದೆ ಇದ್ದಲ್ಲಿ ಪಾರ್ಟಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಮಾಹಿತಿ ಹೊರಬಿದ್ದಿದೆ.

ಈ ನಡುವೆ ಇತ್ತೀಚಿನ ಎರಡೂ ಚುನಾವಣೆಯಲ್ಲಿ ಪಕ್ಷದ ವಿರುದ್ದ ಕೆಲಸ ಮಾಡಿದ ಪದಾಧಿಕಾರಿಗಳ ಪಟ್ಟಿಯು ಪಕ್ಷದ ಹಿರಿಯರ ಕೈ ತಲುಪಿದ್ದು ಯಾವುದೇ ಸಂಧರ್ಭದಲ್ಲಿ ಉಡುಪಿ ಜಿಲ್ಲೆಯ ತಂಡದ ಬದಲಾವಣೆಯ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಬ್ಯುರೋ ರಿಪೋರ್ಟ್
ವಿಶ್ವನ್ಯೂಸ್24

ಕಟೀಲು ಶ್ರೀದುರ್ಗಾ ಪರಮೇಶ್ವರಿ ಕ್ಷೇತ್ರಕ್ಕೆ ಸ್ವರ್ಣಪಾದುಕೆ ಹಾಗೂ ಒಡ್ಯಾಣ ಸಮರ್ಪಣೆ – vishwanews24

Leave a Reply