ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ದಾವೂದ್ ಅಬೂಬಕ್ಕರ್ ಅಧ್ಯಕ್ಷರಾಗಿ ನೇಮಕ.vishwanews24
ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ದಾವೂದ್ ಅಬೂಬಕ್ಕರ್
ಅಧ್ಯಕ್ಷರಾಗಿ ನೇಮಕ
ಕಾಪು: ಉಡುಪಿ ಜಿಲ್ಲಾ ಬಿಜೆಪಿ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷರಾಗಿ ದಾವೂದ್ ಅಬೂಬಕ್ಕರ್ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ನೇಮಕ ಮಾಡಿದ್ದಾರೆಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಸಮಾಜ ಸೇವೆ ಹಾಗೂ ವಿವಿದ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ದಾವೂದ್ ಅಬೂಬಕ್ಕರ್ ಕಳೆದ ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು ಮಾತ್ರವಲ್ಲದೆ ವಿವಿಧ ಪಕ್ಷದ ಜವಬ್ದಾರಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರು.
