ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಹಿರಿಯ ಶಿಕ್ಷಕಿಗೆ ಸನ್ಮಾನ -Vishwanews24
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಹಿರಿಯ ಶಿಕ್ಷಕಿಗೆ ಸನ್ಮಾನ -Vishwanews24
ಉಡುಪಿ: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಶಿಕ್ಷಕಿ ಶ್ರೀಮತಿ ನಳಿನಿ ಆಚಾರ್ಯ ಕಾರ್ಕಳ ಇವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ನಮ್ಮ ಬಾಳಿಗೆ ದೀವಿಗೆಯಾದ, ನಮ್ಮ ಇಡೀ ಬದುಕು ರೂಪಿಸಿದ ಶಿಕ್ಷಕರೆಲ್ಲರನ್ನೂ ಸ್ಮರಿಸೋಣ. ಉತ್ತಮ ಸಮಾಜದ ರೂಪಕರಾದ ಶಿಕ್ಷಕರ ಋಣ ನಮ್ಮ ಮೇಲಿದೆ .ಹಾಗಾಗಿ ನಾವಿಂದು ಶಿಕ್ಷಕರನ್ನು ಗೌರವಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ನಾಯಕಿಯರಾದ ಶ್ರೀಮತಿ ಸುರೇಖ ಚಂದ್ರಹಾಸ, ಶ್ರೀಮತಿ ಅಪ್ಪಿ, ಮಂಗಳೂರು ಉತ್ತರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ, ಕೆಪಿಸಿಸಿ ಕಾರ್ಯದರ್ಶಿ ಶ್ರೀಮತಿ ವೆರೋನಿಕಾ ಕರ್ನೇಲಿಯೋ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್, ಉಡುಪಿ ಬ್ಲಾಕ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಹಿರಿಯಡ್ಕ ಬ್ಲಾಕ್ ಅಧ್ಯಕ್ಷೆ ಸಂಧ್ಯಾ ಶೆಟ್ಟಿ, ಕಾಪು ಬ್ಲಾಕ್ ಅಧ್ಯಕ್ಷೆ ಪ್ರಭಾ ಶೆಟ್ಟಿ, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷೆ ಗೋಪಿ ನಾಯ್ಕ, ವಂಡ್ಸೆ ಬ್ಲಾಕ್ ಅಧ್ಯಕ್ಷೆ ಮಂಜುಳಾ ದೇವಾಡಿಗ, ಮಾಜಿ ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜ್ಯೋತಿ ಮೆನನ್, ಪ್ರಭಾ ಕಾರ್ಕಳ ಸುಗುಣ ಪೂಜಾರ್ತಿ ಮುಂತಾದವರು ಉಪಸ್ಥಿತರಿದ್ದರು.
