ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ: ಬೈಂದೂರು ತಾಲೂಕು ಅಧ್ಯಕ್ಷರಾಗಿ ತಬ್ರೇಝ್, ಕಾರ್ಯದರ್ಶಿಯಾಗಿ ತುಫೈಲ್ ಆಯ್ಕೆ – vishwanews24
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ: ಬೈಂದೂರು ತಾಲೂಕು ಅಧ್ಯಕ್ಷರಾಗಿ ತಬ್ರೇಝ್, ಕಾರ್ಯದರ್ಶಿಯಾಗಿ ತುಫೈಲ್ ಆಯ್ಕೆ
ಉಡುಪಿ: ಜಿಲ್ಲಾ ಮುಸ್ಲಿಮ್ ಒಕ್ಕೂಟದ ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾಗಿ ಶಮ್ಸ್ ತಬ್ರೇಝ್ ನಾಗೂರು ಮತ್ತು ಕಾರ್ಯದರ್ಶಿಯಾಗಿ ತುಫೈಲ್ ಶಹಾಬುದ್ದೀನ್ ಬೈಂದೂರು ಆಯ್ಕೆಯಾಗಿದ್ದಾರೆ. ಇಂದು ನಡೆದ ಬೈಂದೂರು ತಾಲೂಕು ಘಟಕದ ಚುನಾವಣೆಯಲ್ಲಿ 2025-26 ನೇ ಸಾಲಿಗೆ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಖುರ್ಷಿದ್ ಹಬೀಬುಲ್ಲಾ ಬೈಂದೂರು, ಜೊತೆ ಕಾರ್ಯದರ್ಶಿಯಾಗಿ ಝೈನುಲ್ ಆಬಿದೀನ್ ಹಲಗೇರಿ, ಕೋಶಾಧಿಕಾರಿಯಾಗಿ ಸಯ್ಯದ್ ಅಜ್ಮಲ್ ಶೀರೂರು ಆಯ್ಕೆಯಾದರು.
ತಾಲೂಕು ಸಮಿತಿಯ ಸದಸ್ಯರಾಗಿ ಶೇಖ್ ಫಯಾಝ್ ಅಲಿ, ಮುಹಮ್ಮದ್ ಸಿರಾಜ್, ಪಟಗಾರ್ ಶಕೀಲ್, ಶಬೀರ್ ಬೈಂದೂರು, ಅಮೀನ್ ಗೋಳಿಹೊಳೆ, ಆಫ್ತಾಬ್ ಕಿರಿಮಂಜೇಶ್ವರ, ಮುಹಮ್ಮದ್ ಅಶ್ರಫ್ ನಾಗೂರು, ಜಾಫರ್ ಸಾದಿಕ್ ಬೈಂದೂರು, ಶುಐಬ್ ಅರಿಹೊಳೆ ಶೀರೂರು ಮತ್ತು ಕಫ್ಸಿ ಮುಹಮ್ಮದ್ ಶೀರೂರು ಆಯ್ಕೆಯಾದರು.
ಎಚ್. ಎಸ್. ಸಿದ್ದೀಕ್ ಶೀರೂರು, ಶೇಖ್ಜಿ ಹಬೀಬುಲ್ಲಾ ಶೀರೂರು, ಅಬ್ದುಲ್ ಖಾದರ್ ಬಾಪ್ಸೈ ಬೈಂದೂರು, ಮುಸ್ತಫಾ ಬಡಾಕೆರೆ ಮತ್ತು ನೌಷಾದ್ ನಾವುಂದ ಅವರನ್ನು ತಾಲೂಕು ಸಮಿತಿ ಸದಸ್ಯರಾಗಿ ಸಹಕರಣ ಮಾಡಿಕೊಳ್ಳಲಾಯಿತು.
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪಿಕ್ ಪಾಕೆಟ್ ಪ್ರಕರಣ ; ಪ್ರವಾಸಿಗರೇ ಟಾರ್ಗೆಟ್ – vishwanews24
