ಉಡುಪಿ : ಅಟಲ್‌ಜೀ ಜನ್ಮ ದಿನಾಚರಣೆ ಪ್ರಯುಕ್ತ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ನೀಲಾವರ ಗೋಶಾಲೆಯಲ್ಲಿ ಗೋ-ಸೇವೆ -Vishwanews24
ಉಡುಪಿ :ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಅಟಲ್‌ಜೀ ಜನ್ಮ ದಿನಾಚರಣೆ ಪ್ರಯುಕ್ತ ನೀಲಾವರ ಗೋಶಾಲೆಯಲ್ಲಿ ಗೋ-ಸೇವೆ -Vishwanews24
ಉಡುಪಿ :ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ನೀಲಾವರಗೋಶಾಲೆಯಲ್ಲಿ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಅಂಗವಾಗಿ ಮತ್ತುಇತ್ತೀಚೆಗೆ ರಾಜ್ಯ ಸರಕಾರ ಜಾರಿಗೆ ತಂದ ಗೋಹತ್ಯೆ ನಿಷೇದಕಾಯ್ದೆಯನ್ನು ಸ್ವಾಗತಿಸಿ ಗೋಶಾಲೆಯನ್ನು ಸ್ವಚ್ಛಗೊಳಿಸಿ, ಗೋಪೂಜೆ ಮಾಡುವ ಮೂಲಕ ಆಚರಿಸಿದರು.
ಯುವಮೋರ್ಚಾಜಿಲ್ಲಾಅಧ್ಯಕ್ಷರಾದ ವಿಖ್ಯಾತ್ ಶೆಟ್ಟಿ ಮಾತನಾಡಿ ಅಟಲ್‌ಜೀ ಕೇವಲ ಅಜಾತ ಶತ್ರುಅಲ್ಲ,ನಿಜಾರ್ತದಲ್ಲಿ ವಿಶ್ವ ಮಾನವಎಂಬುವುದಕ್ಕೆಅವರ ನಡೆ ನುಡಿಸಾಕ್ಷಿ. ಅತ್ಯಂತ ಸರಳ ಜೀವನ ಶೈಲಿ ಅಳವಡಿಸಿಕೊಂಡಿದ್ದ ವಾಜಪೇಯಿ ಅವರು ಯಾರ ಮನಸ್ಸನ್ನು ನೋವಿಸಿದವರಲ್ಲ. ಪ್ರತಿಪಕ್ಷಗಳನ್ನು ಸಹ ಗೌರವಯುತವಾಗಿ ಕಾಣುತ್ತಿದ್ದಅವರನ್ನುಅಜಾತ ಶತ್ರು ಎಂದು ದೇಶದ ಜನತೆ ಕರೆಯುತ್ತಿದ್ದರು ಎಂದರು.
ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಕುಮಾರಿ ಶ್ವೇತಾರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಅಟಲ್‌ಜೀಯವರು ದೇಶದಲ್ಲಿ ಗೋಹತ್ಯೆನಿಷೇದ ಆಗುವ ಬಗ್ಗೆ ಬಹಳ ಪ್ರಯತ್ನ ಪಟ್ಟಿದ್ದರು. ಇಂದಿನ ಸಮಯದಲ್ಲಿ ರಾಜ್ಯ ಸರಕಾರ ಜಾರಿಗೆ ತಂದ ಗೋಹತ್ಯೆ ನಿಷೇದದಿಂದ ಸ್ವರ್ಗಿಯ ಶ್ರೀಯುತ ಅಟಲ್ ಬಿಹಾರಿ ವಾಜಪೇಯಿಯವರ ಅಂದಿನ ಪ್ರಯತ್ನಇವತ್ತು ಸಾಕಾರಗೊಂಡಿರುವುದಕ್ಕೆ ಗೋಪ್ರೇಮಿಗಳು ಸಂತಸವ್ಯಕ್ತಪಡಿಸಿರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಪ್ರಧಾನ ಕಾರ್ಯದರ್ಶಿಗಳಾದ ಶರತ್‌ಶೆಟ್ಟಿ ಉಪ್ಪುಂದ, ವಿನೋದ್ ಪೂಜಾರಿ ಶಾಂತಿನಿಕೇತನ, ಕಾರ್ಯದರ್ಶಿ ಅಭಿರಾಜ್ ಸುವರ್ಣ ಮತ್ತು ಇನ್ನಿತರ ಯುವಮೋರ್ಚಾ ಜಿಲ್ಲಾ ಮತ್ತು ಮಂಡಲ ಪಧಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
