ಉಡುಪಿ : ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದುದರ ಪರಿಣಾಮವಾಗಿ ಪತ್ತೆಯಾಗುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ.
ಜಿಲ್ಲೆಯಲ್ಲಿ ಇಂದು 223 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಪೈಕಿ ಉಡುಪಿಯಲ್ಲಿ 105, ಕುಂದಾಪುರ 61, ಕಾರ್ಕಳ 51 ಹಾಗೂ ಹೊರ ಜಿಲ್ಲೆಯ 6 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 3222 ಕೋವಿಡ್ ಸಕ್ರಿಯ ಪ್ರಕರಣ ಗಳಿವೆ.
ಇಂದು ಜಿಲ್ಲೆಯಲ್ಲಿ ಉಡುಪಿಯ ಇಬ್ಬರು ಮಹಿಳೆಯರು ಮತ್ತು ಕುಂದಾಪುರದ ಓರ್ವ ಮಹಿಳೆ ಮತ್ತು ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಜೂ.12 ರಂದು ಜಿಲ್ಲೆಯಲ್ಲಿ 345 ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ಹೊರ ಬಂದಿದ್ದು, ಕೋವಿಡ್ 2ನೇ ಅಲೆ ಆರಂಭ ಆದಾಗಿನಿಂದ ಈವರೆಗೆ 37,274 ಮಂದಿ ಗುಣಮುಖರಾಗಿದ್ದಾರೆ. ಹಾಗೂ ಜಿಲ್ಲೆಯಲ್ಲಿ ಒಟ್ಟು ಈವರೆಗೆ ಪತ್ತೆಯಾದ 64,277 ಕೋವಿಡ್ ಸಕ್ರಿಯ ಪ್ರಕರಣಗಳಲ್ಲಿ 60695 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ.
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…