ಮಂಗಳೂರು : ತುಳು ಭಾಷೆಯನ್ನು ಕರ್ನಾಟಕ ಹಾಗೂ ಕೇರಳ ಸರ್ಕಾರದ ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ತುಳು ಭಾಷಿಗರಿಂದ ಟ್ವಿಟ್ಟರ್ ಅಭಿಯಾನ ಪ್ರಾರಂಭವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೂಡಾ ಈ ಅಭಿಯಾನಕ್ಕೆ ಪ್ರತಿಕ್ರಿಯಿಸಿದ್ದು, “ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ” ಎಂದು ತುಳುವಿನಲ್ಲಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಡಿರುವ ಅವರು, “ಪೆದ್ದ್ ತಾಂಕಿದಿನ ಅಪ್ಪೆ ಲೆಕ ಮಟ್ಟೆಲ್ ಡ್ ಮಾನಾಯಿನ ಅಪ್ಪೆ ಬಾಸೆಗ್ ರಾಜ್ಯ ಬಾಸೆದ ಮಾನಾದಿಗೆ ತಿಕ್ಕೊಡು ಪನ್ಪಿನ ಪೊರಂಬಾಟಗ್ ಎನ್ನ ಬೆರಿಸಾಯ ಉಂಡು. ತುಲು ಬಾಸೆನ್ 8ನೇ ಪರಿಚ್ಛೇದಗ್ ಸೇರ್ಪಾವರೆ ಸರಕಾದೊಟ್ಟುಗು ಪಾತೆರಕತೆ ಆವೊಂದುಂಡು. ಒಂಜಾತ್ ತಾಂತ್ರಿಕ ದೋಷಲೆನ್ ಸರಿ ಮಲ್ತ್ದ್ ನಮ್ಮ ಅವಧಿಡ್ ತುಲು ಬಾಸೆಗ್ ರಾಜ್ಯದ ಅಧಿಕೃತ ಬಾಸೆ ಪನ್ಪುನ ಮಾನಾದಿಗೆ ಕೊರ್ಪಾವ ( ಹೆತ್ತ ತಾಯಿಯ ರೀತಿ ಇರುವ ನಮ್ಮ ಮಾತೃಭಾಷೆಗೆ ರಾಜ್ಯ ಭಾಷೆಯ ಮಾನ್ಯತೆ ಸಿಗಬೇಕು ಎನ್ನುವ ಹೋರಾಟಕ್ಕೆ ನನ್ನ ಬೆಂಬಲವೂ ಇದೆ. ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ. ಒಂದಿಷ್ಟು ತಾಂತ್ರಿಕ ದೋಷಗಳನ್ನು ಸರಪಡಿಸಿ ನಮ್ಮ ಆಡಳಿತದ ಅವಧಿಯಲ್ಲೇ ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆ ಎನ್ನುವ ಮಾನ್ಯತೆಯನ್ನು ಕೊಡಿಸುತ್ತೇವೆ)” ಎಂದು ತಿಳಿಸಿದ್ದಾರೆ.
“ತುಳು ರಾಜ್ಯದ ಆಡಳಿತಾತ್ಮಕ ಭಾಷೆ ಆಗಬೇಕು, ತುಳುವಿಗೆ ವಿಶೇಷ ಮಾನ್ಯತೆ ಸಿಗಬೇಕೆನ್ನುವ ತುಳುನಾಡಿನ ಬಂಧುಗಳ ಹೋರಾಟಕ್ಕೆ ನನ್ನದೂ ಧ್ವನಿ ಇದೆ.ತುಳು ಒಂದು ಭಾಷೆ ಮಾತ್ರವಲ್ಲ,ತುಳು ಒಂದು ಸಂಸ್ಕೃತಿ-ಪರಂಪರೆ.ಅದ್ಭುತ ಇತಿಹಾಸ ಇರುವ ತುಳುನಾಡಿನ ಭಾಷೆಗೆ ಶೀಘ್ರ ವಿಶೇಷ ಮಾನ್ಯತೆ ಸಿಗಬೇಕು ಎನ್ನುವುದು ನನ್ನ ಆಶಯ” ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೂಡಾ ಟ್ವೀಟ್ ಮೂಲಕ ಬೆಂಬಲ ಸೂಚಿಸಿದ್ದಾರೆ.
ಪೆದ್ದ್ ತಾಂಕಿದಿನ ಅಪ್ಪೆ ಲೆಕ ಮಟ್ಟೆಲ್ ಡ್ ಮಾನಾಯಿನ ಅಪ್ಪೆ ಬಾಸೆಗ್ ರಾಜ್ಯ ಬಾಸೆದ ಮಾನಾದಿಗೆ ತಿಕ್ಕೊಡು ಪನ್ಪಿನ ಪೊರಂಬಾಟಗ್ ಎನ್ನ ಬೆರಿಸಾಯ ಉಂಡು. ತುಲು ಬಾಸೆನ್ 8ನೇ ಪರಿಚ್ಛೇದಗ್ ಸೇರ್ಪಾವರೆ ಸರಕಾದೊಟ್ಟುಗು ಪಾತೆರಕತೆ ಆವೊಂದುಂಡು.(1)#TuluofficialinKA_KL #ತುಳುನಾಡು #ತುಳುಭಾಷೆ #TuluTo8thSchedule
— Nalinkumar Kateel (@nalinkateel) June 13, 2021
ತುಳು ರಾಜ್ಯದ ಆಡಳಿತಾತ್ಮಕ ಭಾಷೆ ಆಗಬೇಕು,ತುಳುವಿಗೆ ವಿಶೇಷ ಮಾನ್ಯತೆ ಸಿಗಬೇಕೆನ್ನುವ ತುಳುನಾಡಿನ ಬಂಧುಗಳ ಹೋರಾಟಕ್ಕೆ ನನ್ನದೂ ಧ್ವನಿ ಇದೆ.ತುಳು ಒಂದು ಭಾಷೆ ಮಾತ್ರವಲ್ಲ,ತುಳು ಒಂದು ಸಂಸ್ಕೃತಿ-ಪರಂಪರೆ.ಅದ್ಭುತ ಇತಿಹಾಸ ಇರುವ ತುಳುನಾಡಿನ ಭಾಷೆಗೆ ಶೀಘ್ರ ವಿಶೇಷ ಮಾನ್ಯತೆ ಸಿಗಬೇಕು ಎನ್ನುವುದು ನನ್ನ ಆಶಯ.@BSYBJP#TuluOfficialinKA_KL
— Kota Shrinivas Poojari (@KotasBJP) June 13, 2021
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…