ಉಡುಪಿ: ಜಿಲ್ಲೆಯಿಂದ ಬಾಂಗ್ಲಾ ವಲಸಿಗರು ಹಾಗೂ ರೋಹಿಂಗ್ಯಾರನ್ನು ಕೂಡಲೇ ಗಡಿಪಾರು ಮಾಡಿ : ಎಸ್ಪಿಗೆ ಶ್ರೀರಾಮಸೇನೆ ಮನವಿ – vishwanews24
ಉಡುಪಿ: ಜಿಲ್ಲೆಯಿಂದ ಬಾಂಗ್ಲಾ ವಲಸಿಗರು ಹಾಗೂ ರೋಹಿಂಗ್ಯಾ ರನ್ನು ಕೂಡಲೇ ಗಡಿಪಾರು ಮಾಡಿ : ಎಸ್ಪಿಗೆ ಶ್ರೀರಾಮಸೇನೆ ಮನವಿ
ಉಡುಪಿ: ನೆರೆಯ ದೇಶ ಬಾಂಗ್ಲಾದಲ್ಲಿ ಅಲ್ಪ ಸಂಖ್ಯಾತರಾದ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ಹಾಗೂ ದಬ್ಬಾಳಿಕೆ ಮಾಡುತ್ತಿರುವುದನ್ನು ಮನಗಂಡ ಉಡುಪಿ ಜಿಲ್ಲಾ ಶ್ರೀರಾಮಸೇನೆಯು ಉಡುಪಿ ಜಿಲ್ಲೆಯಿಂದ ಬಾಂಗ್ಲಾ ವಲಸಿಗರು ಹಾಗೂ ರೋಹಿಂಗ್ಯಾ ರನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಅಗ್ರಹಿಸಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರಿಗೆ ಮನವಿ ಮಾಡಿ ಆಗ್ರಹಿಸಿತು.
ಆಂತರಿಕ ಮೀಸಲಾತಿಯಿಂದ ಗಲಭೆಯಾಗಿ ಹಿಂದೂಗಳ ಮೇಲೆ ಅಮಾನುಷವಾಗಿ ದೌರ್ಜನ್ಯ ಎಸಗುತ್ತಿದ್ದಾರೆ. ಹಿಂದೂ ಮಂದಿರ, ದೇವಸ್ಥಾನ ಲೂಟಿ, ಹಿಂದೂಗಳ ಮನೆ ಮೇಲೆ ಆಕ್ರಮಣ, ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮುಂತಾದ ರಾಕ್ಷಶಿ ಕೃತ್ಯಗಳು ನಡೆಯುತ್ತಿದೆ.1971 ರಲ್ಲಿ ಬಾಂಗ್ಲಾ ದೇಶವಾದಾಗ 21% ಹಿಂದುಗಳು ಇದ್ದರು. ಈಗ ಇರುವ ಹಿಂದುಗಳು ಕೇವಲ 1% ಮಾತ್ರ. ಅವರು ಭಯಭೀತರಾಗಿ ಕಂಗೆಟ್ಟಿದ್ದಾರೆ.
ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾ ಮುಸ್ಲಿಂ ಹಾಗೂ ಬರ್ಮ ರೋಹಿಂಗ್ಯಾ ಮುಸ್ಲಿಮರು 10 ಲಕ್ಷಕ್ಕೂ ಅಧಿಕವಾಗಿ, ಅನಧಿಕೃತವಾಗಿ ನೆಲೆಸಿದ್ದಾರೆ. ಇವರನ್ನು ಶಿಕ್ಷಿಸುವುದು ಹಾಗೂ ರಾಜ್ಯ ಮತ್ತು ನಮ್ಮ ಜಿಲ್ಲೆಯಿಂದ ಹೊರಹಾಕುವುದು ಘನವೆತ್ತ ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿರುತ್ತದೆ. ಬಾಂಗ್ಲಾ ಮುಸ್ಲಿಂರು ಹಾಗೂ ರೋಹಿಂಗ್ಯಾಗಳು ಕಾನೂನು ಭಾಹಿರ ಚಟುವಟಿಕೆ ಅಲ್ಲದೇ ದೇಶದ ಭದ್ರತೆಗೆ ಕಂಟಕವಾಗಿದ್ದಾರೆ.ಹಾಗಾಗಿ ಕೂಡಲೇ ದೇಶದ್ರೋಹಿ ನುಸುಳುಕೊರರಾದ ಬಾಂಗ್ಲಾ ಮುಸ್ಲಿಂ ಮತ್ತು ರೋಹಿಂಗ್ಯಾ ಗಳನ್ನು ನಮ್ಮ ಜಿಲ್ಲೆ ಹಾಗೂ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಶ್ರೀರಾಮಸೇನೆಯ ಮುಖಂಡರು ಆಗ್ರಹಿಸಿದರು.
ನವಿಲು ಸಾಂಬರ್ ಮಾಡಿ ವಿಡಿಯೋ ಅಪ್ಲೋಡ್ ; ಯೂಟ್ಯೂಬರ್ ಅರೆಸ್ಟ್ – vishwanews24
