ಉಡುಪಿ ಜಿಲ್ಲೆಯ ಯುವ ಉದ್ಯಮಿ ನವೀನ್ ಅಮೀನ್ ಶಂಕರಪುರ ಗೆ ಉದ್ಯಮ ರತ್ನ ಪ್ರಶಸ್ತಿ
ಉಡುಪಿ ಜಿಲ್ಲೆಯ ಯುವ ಉದ್ಯಮಿ ನವೀನ್ ಅಮೀನ್ ಗೆ ಉದ್ಯಮ ರತ್ನ ಪ್ರಶಸ್ತಿ.
ಕಾಪು: ಜೆಸಿಐ ಕಾಪು ಆಶ್ರಯದಲ್ಲಿ ನಡೆದ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಶಂಕರಪುರದ ಫ್ರೆಂಡ್ಸ್ ಕೆಟರಸ್ ಮಾಲಕ ಹಾಗೂ ಉದ್ಯಮಿ ನವೀನ್ ಅಮೀನ್ ಶಂಕರಪುರ ಅವರಿಗೆ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಕಾಪುವಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಜೆಸಿಐನ ರಾಷ್ಟ್ರೀಯ, ವಲಯದ ಅಧಿಕಾರಿಗಳು,ವಿವಿಧ ಗಣ್ಯರು ಉಪಸ್ಥಿತರಿದ್ದರು.
