ಉಡುಪಿ : ಜುಲೈ 6 – ದೀನದಯಾಳ್ ಚಾರಿಟೇಬಲ್ ಟ್ರಸ್ಟ್  ವತಿಯಿಂದ ಸ್ಮರಣ ಪಾರಿತೋಷಕ ವಿತರಣಾ ಸಮಾರಂಭ – vishwanews24

Featured, ಉಡುಪಿ

ಜುಲೈ 6 – ದೀನದಯಾಳ್ ಚಾರಿಟೇಬಲ್ ಟ್ರಸ್ಟ್  ವತಿಯಿಂದ ಸ್ಮರಣ ಪಾರಿತೋಷಕ ವಿತರಣಾ ಸಮಾರಂಭ.

ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯ ಪ್ರೌಢ ಶಾಲೆಗಳಲ್ಲಿ 2024-25೪ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿರುವ ಪ್ರತಿಭಾನ್ವಿತ 3 ವಿದ್ಯಾರ್ಥಿಗಳಿಗೆ ಪಂಡಿತ್ ದೀನದಯಾಳ್ಉಪಾಧ್ಯಾಯ ಸ್ಮರಣ ಪಾರಿತೋಷಕ, ಪ್ರತೀ ಶಾಲಾ ಮಟ್ಟದಲ್ಲಿ ಅತ್ಯಧಿಕ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಡಾ|. ವಿ. ಎಸ್. ಆಚಾರ್ಯ ಸ್ಮರಣ ಪಾರಿತೋಷಕ ಮತ್ತು ೨೦೨೩-೨೪ ರ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿರುವ ವಿದ್ಯಾರ್ಥಿನಿಗೆ ಕುಮಾರಿ ಗಾಯತ್ರಿ ಸ್ಮಾರಣ ಪಾರಿತೋಷಕ ವಿತರಣಾ ಸಮಾರಂಭವು ಕೀರ್ತಿಶೇಷ ಡಾ|. ವಿ. ಎಸ್. ಆಚಾರ್ಯರ ಜನ್ಮ ದಿನವಾದ ಜುಲೈ 6
ಶನಿವಾರ ಅಪರಾಹ್ನ 4.30 ಗಂಟೆಗೆ ಉಡುಪಿ ಕುಂಜಿಬೆಟ್ಟು ಜಿಲ್ಲಾ ಬಿಜೆಪಿ ಕಛೇರಿಯ ಸಹಕಾರ ಸೌಧದ “ಪಂಡಿತ್ ದೀನದಯಾಳ್ ಸಭಾಭವನ” ದಲ್ಲಿ ನಡೆಯಲಿದೆ ಎಂದು ದೀನದಯಾಳ್ ಚಾರಿಟೇಬಲ್  ಟ್ರಸ್ಟ್(ರಿ) ಪ್ರಧಾನ ಕಾರ್ಯದರ್ಶಿಯಾದ ದಿನಕರ ಶೆಟ್ಟಿ ಹೆರ್ಗ ಮತ್ತು ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಡಾ|. ವಿ. ಎಸ್. ಆಚಾರ್ಯ ಸ್ಮರಣ ಪಾರಿತೋಷಕ ಸಮಿತಿ ಸಂಚಾಲಕರಾದ ಶ್ರೀಮತಿ ಶಾಂತಾ ವಿ. ಆಚಾರ್ಯ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಡುಪಿ: ಟೋಲ್ ನಲ್ಲಿ ಸ್ಥಳೀಯ ಸಾರ್ವಜನಿಕರಿಗೆ ಈ ಹಿಂದೆ ನೀಡಿದ ರೀತಿಯಲ್ಲಿ ಸುಂಕ ವಿನಾಯಿತಿ ನೀಡಬೇಕು : ಜಿಲ್ಲಾಧಿಕಾರಿ – vishwanews24

ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಮತ್ತು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್‌ಪಾಲ್ ಎ. ಸುವರ್ಣ ಅವರು ಭಾಗವಹಿಸಿ ಪಾರಿತೋಷಕ ವಿತರಿಸಲಿದ್ದಾರೆ ಮತ್ತು ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷರಾದ ಗುಜ್ಜಾಡಿ ಪ್ರಭಾಕರ ನಾಯಕ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆಂದು ಅವರು ತಿಳಿಸಿದ್ದಾರೆ.

Leave a Reply