ಉಡುಪಿ:  ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಯೋಗೇಶ್ ವಿ ಶೆಟ್ಟಿ ಮೂರನೇ ಬಾರಿಗೆ ಪುನರಾಯ್ಕೆ – vishwanews24

Featured, ಉಡುಪಿ

ಉಡುಪಿ:  ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಯೋಗೇಶ್ ವಿ ಶೆಟ್ಟಿ ಮೂರನೇ ಬಾರಿಗೆ ಪುನರಾಯ್ಕೆ 

ಉಡುಪಿ: ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೇಶ್ ವಿ ಶೆಟ್ಟಿಯವರು ಸತತ ಮೂರನೇ ಬಾರಿಗೆ ಪುನರಾಯ್ಕೆ ಆಗಿದ್ದಾರೆ.
ಪಕ್ಷದ ವರಿಷ್ಠರಾದ ಎಚ್ ಡಿ ದೇವೇಗೌಡ, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಬೃಹತ್ ಮತ್ತು ಉಕ್ಕು ಸಚಿವರಾದ ಎಚ್‌ ಡಿ ಕುಮಾರಸ್ವಾಮಿಯವರ ಆದೇಶದಂತೆ ಜೆಡಿಎಸ್ ಕೋರ್ ಸಮಿತಿ ರಾಜ್ಯಾಧ್ಯಕ್ಷರಾದ ಎಂ ಕೃಷ್ಣಾರೆಡ್ಡಿ  ಮತ್ತು ಜೆಡಿಎಸ್ ನ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿರವರ ಸಮ್ಮುಖದಲ್ಲಿ ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ  ಆದೇಶ ಪತ್ರವನ್ನು ಬೆಂಗಳೂರು ಪಕ್ಷ ಕಚೇರಿಯಲ್ಲಿ ನೀಡಲಾಯಿತು.
ಕಳೆದ 32 ವರ್ಷಗಳಿಂದ ಜನತಾ ಪರಿವಾರದಲ್ಲಿ ತೊಡಗಿರುವ ಶೆಟ್ಟಿಯವರು 2016 ರಿಂದ ಜಿಲ್ಲಾಧ್ಯಕ್ಷರಾಗಿದ್ದಾರೆ.

Leave a Reply