ಉಡುಪಿ: ಠೇವಣಿದಾರರಿಗೆ ವಂಚನೆ ಆರೋಪ- ಕಮಲಾಕ್ಷಿ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ್ ಗೆ ನ್ಯಾಯಾಂಗ ಬಂಧನ – Vishwanews24
ಉಡುಪಿ: ಠೇವಣಿದಾರರಿಗೆ ವಂಚನೆ ಆರೋಪ- ಕಮಲಾಕ್ಷಿ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ್ ಗೆ ನ್ಯಾಯಾಂಗ ಬಂಧನ
ಉಡುಪಿ: ನಗರದ ಕಮಲಾಕ್ಷಿ ವಿವಿದ್ದೋದ್ದೇಶ ಸಹಕಾರಿ ಸಂಘದ ಬಹು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟಿರುವ ಸಂಘದ ಅಧ್ಯಕ್ಷ ಬಿ.ವಿ ಲಕ್ಷ್ಮೀನಾರಾಯಣ್ ಗೆ ಜ.11 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಇಂದು ಪೊಲೀಸರು ಆರೋಪಿ ಬಿ.ವಿ ಲಕ್ಷ್ಮೀ ನಾರಾಯಣ್ ನನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಬಳಿಕ ಬಿ.ವಿ ಲಕ್ಷ್ಮೀ ನಾರಾಯಣ್ ನನ್ನು ಜ.11 ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ. ಹಾಗೂ ಈ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಜ.2 ರಂದು ಆಕ್ಷೇಪಣೆಯನ್ನು ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ದೆಹಲಿ ಗಣರಾಜ್ಯೋತ್ಸವ ಪರೇಡ್’ನಲ್ಲಿ ಭಾಗವಹಿಸಲು ಪುತ್ತೂರಿನ ಡಾ. ವಜೀದಾ ಬಾನು ಆಯ್ಕೆ – Vishwanews24
