ಉಡುಪಿ: ಡಿ.20 ರಂದು ಉಡುಪಿ ಜಿಲ್ಲಾ ಕಾಂಗ್ರೆಸ್ ನಿಂದ ವೋಟ್ ಚೋರ್ ವಿರುದ್ಧ ಮಾನವ ಸರಪಳಿ – vishwanews24
ಉಡುಪಿ: ಡಿ.20 ರಂದು ಉಡುಪಿ ಜಿಲ್ಲಾ ಕಾಂಗ್ರೆಸ್ ನಿಂದ ವೋಟ್ ಚೋರ್ ವಿರುದ್ಧ ಮಾನವ ಸರಪಳಿ
ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ನಿಂದ ವೋಟ್ ಚೋರ್ ವಿರುದ್ಧ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಚುನಾವಣಾ ಆಯೋಗದೊಂದಿಗೆ ಸೇರಿಕೊಂಡು ಕೇಂದ್ರ ಸರಕಾರ ನಡೆಸುತ್ತಿರುವ “ವೋಟ್ ಚೋರ್” ಹಗರಣದ ಬಗ್ಗೆ ಜನಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನದ ಸಮಾರೋಪವು ಡಿ.20 ರಂದು ನಡೆಯಲಿದೆ. ಅಂದು ಬೆಳಿಗ್ಗೆ ಗಂಟೆ 9.30ಕ್ಕೆ ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ನಿಂದ ಮಣಿಪಾಲದವರೆಗೆ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ನೆರವೇರಲಿದೆ.ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವರು ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಕೇಂದ್ರ ಸರಕಾರದಿಂದ ನಡೆದ ಮತ ಕಳ್ಳತನದ ವಿರುದ್ಧ ಚುನಾವಣಾ ಆಯೋಗಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ.ಆದರೂ ಆಯೋಗವು ಮೌನವಹಿಸಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.ಮತಗಳ್ಳತನದ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲ ಗೊಳಿಸುತ್ತಿದೆ ಎಂದರು.
ಹೊನ್ನಾವರ : ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ಸಹೋದರರು ಸಮುದ್ರಪಾಲು – vishwanews24
ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರು ಎತ್ತಿರುವ ಪ್ರಶ್ನೆಗಳು ಇಂದು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಭವಿಷ್ಯಕ್ಕೆ ನೇರವಾಗಿ ಸಂಬಂಧಿಸಿದವುಗಳಾಗಿವೆ. ಈ ವಿಚಾರಗಳು ಪ್ರತಿಯೊಬ್ಬ ಜಾಗೃತ ನಾಗರಿಕನೂ ಗಂಭೀರವಾಗಿ ಯೋಚಿಸಬೇಕಾದ ವಿಷಯಗಳಾಗಿವೆ ಎಂದರು.
ಮುಖ್ಯ ನ್ಯಾಯಮೂರ್ತಿಯವರನ್ನು “ಚುನಾವಣಾ ಆಯೋಗದ ಆಯ್ಕೆ ಸಮಿತಿ”ಯಿಂದ ಯಾಕೆ ತೆಗೆದುಹಾಕಿದರು? ಮತ್ತು ಚುನಾವಣಾ ಆಯೋಗದ ಮುಖ್ಯಸ್ಥರು ಅಕ್ರಮವೆಸಗಿದರೂ, ಯಾವುದೇ ಕಾಲಕ್ಕೂ ಶಿಕ್ಷೆಯಾಗದಂತೆ ರಕ್ಷಣೆ ನೀಡುವ ಕಾನೂನನ್ನು 2024ರ ಚುನಾವಣೆಗೂ ಮೊದಲು ಅದೇಕೆ ಜಾರಿಗೊಳಿಸಿದರು? ಎಂದು ಅವರು ಪ್ರಶ್ನಿಸಿದರು.ಇನ್ನು CCTV ಫೂಟೇಜ್ ಅನ್ನು 45 ದಿನಗಳಲ್ಲಿ ನಾಶಪಡಿಸುವ ತುರ್ತು ಏನಿತ್ತು? ಅದರ ಹಿಂದಿನ ಹುನ್ನಾರ ಏನು? ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದರು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ರಾಹುಲ್ ಗಾಂಧಿಯವರು ಈ ಕುರಿತು ದೇಶಾದ್ಯಂತ ಜನಾಂದೋಲನ ಕೈಗೊಂಡಿದ್ದಾರೆ. ಅವರ ವಿರುದ್ಧ ಇಡಿ ತನಿಖೆ ನಡೆಸಲಾಗಿತ್ತು. ಆದರೆ ದೆಹಲಿ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಪರಾಕಿ ಹಾಕಿದೆ ಎಂದರು.
ಹೊನ್ನಾವರ : ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ಸಹೋದರರು ಸಮುದ್ರಪಾಲು – vishwanews24
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ರಾಜು ಪೂಜಾರಿ, ಜ್ಯೋತಿ ಹೆಬ್ಬಾರ್, ರಮೇಶ್ ಕಾಂಚನ್, ರಾಘವೇಂದ್ರ ಶೆಟ್ಟಿ ಕರ್ಜೆ, ವೈ . ಸುಕುಮಾರ್, ಗೋಪಿನಾಥ್ ಭಟ್, ದಿನೇಶ್ ಹೆಗ್ಡೆ ಮುಳವಳ್ಳಿ ಉಪಸ್ಥಿತರಿದ್ದರು.
