Featured

ಉಡುಪಿ ತುಳುಕೂಟ ಮದರೆಂಗಿದರಂಗ್ : ಜು.6 ರಂದು ಶಾಲಾ-ಕಾಲೇಜು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತುಳು ಸ್ಪರ್ಧೆ – vishwanews24

ಉಡುಪಿ ತುಳುಕೂಟ ಮದರೆಂಗಿದರಂಗ್ : ಜು.6 ರಂದು ಶಾಲಾ-ಕಾಲೇಜು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತುಳು ಸ್ಪರ್ಧೆ

ಉಡುಪಿ: ತುಳುಕೂಟ ಉಡುಪಿ(ರಿ) ವತಿಯಿಂದ ಇದೇ ಬರುವ ಜುಲೈ 6 ತಾರೀಕಿನಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತುಳುನಾಡ ಬದುಕಿನ ವಿಶೇಷತೆಯನ್ನು ಸಾರುವ ತುಳು ಸಾಂಪ್ರದಾಯಿಕ ಸ್ಪರ್ಧೆಗಳು ನಡೆಯಲಿವೆ.ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮೇಲ್ಭಾಗದಲ್ಲಿರುವ ಜಗನ್ನಾಥ ಸಭಾಭವನದಲ್ಲಿ ನಡೆಯಲಿರುವ ಈ ಸ್ಪರ್ಧೆಗಳಲ್ಲಿ ಉಡುಪಿ ಜಿಲ್ಲಾ ಶಾಲಾ ಕಾಲೇಜು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಕೋರಲಾಗಿದೆ.

ಈ ಕಾರ್ಯಕ್ರಮವನ್ನು ಮಲ್ಪೆ ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷರಾದ ಶ್ರೀ ನಾಗರಾಜ್ ಸುವರ್ಣ ಇವರು ಉದ್ಘಾಟನೆ ಮಾಡಲಿರುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಉಡುಪಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ ಶ್ರೀಮತಿ ಫರ್ಝಾನಾ ಎಮ್., ಮಣಿಪಾಲ ಆಶ್ಲೇಷ್ ಟೂರ್ಸ್ & ಟ್ರಾವೆಲ್ಸ್ ನ ಕೋ-ಫೌಂಡರ್ ಶ್ರೀಮತಿ ಶ್ರುತಿ ಗಣೇಶ್ ಶೆಣೈ, ಉದ್ಯಮಿ ಶ್ರೀಮತಿ ರಮಿತಾ ಶೈಲೇಂದ್ರ ಕಾರ್ಕಳ, ಸಮಾಜಸೇವಕರಾದ ಯು. ವಿಶ್ವನಾಥ ಶೆಣೈ, ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್ ಶೇರಿಗಾರ್, ಸಮಾಜಸೇವಕಿ ಶ್ರೀಮತಿ ಮಮತಾ ಪಿ. ಶೆಟ್ಟಿ, ತುಳುಕೂಟದ ಉಪಾಧ್ಯಕ್ಷೆ ಶ್ರೀಮತಿ ಮನೋರಮ ಶೆಟ್ಟಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸ್ಪರ್ಧೆಯ ವಿವರ:
1 ನೇ ತರಗತಿಯಿಂದ 5 ನೇ ತರಗತಿಯವರೆಗೆ
1.ಪೀಂಪಿರಿ ಊದುವ ಸ್ಪರ್ಧೆ.2.ಹಲಸಿನ ಹಣ್ಣಿನ ಬೀಜದ ಸಿಪ್ಪೆ ತೆಗೆಯುವುದು.

6 ರಿಂದ 10 ನೇ ತರಗತಿಯ ಮಕ್ಕಳಿಗೆ
1.ಮದರಂಗಿ ಸ್ಪರ್ಧೆ.2.ಔಷಧದ ಎಲೆಯ ಹೆಸರು ಬರೆಯುವುದು.3.ತೆಂಗಿನ ಗರಿ(ಒಲಿ) ಯಲ್ಲಿ ಆಟಿಕೆ ತಯಾರಿಸುವುದು.

ಕಾಲೇಜ್ ಮಕ್ಕಳಿಗೆ
1.ಮದರಂಗಿ ಸ್ಪರ್ಧೆ2.ಕೇಶಾಲಂಕಾರ 3. ಮುಂಡಾಸು ಕಟ್ಟುವ ಸ್ಪರ್ಧೆ 4.ಹೂ ಕಟ್ಟುವ ಸ್ಪರ್ಧೆ

ಸಾರ್ವಜನಿಕರಿಗಾಗಿ
1.ಮದರಂಗಿ ಸ್ಪರ್ಧೆ 2. ಜಲ್ಲಿ ಬಿಡಿಸುವ ಸ್ಪರ್ಧೆ 3. ಬತ್ತಿ ಕಟ್ಟುವ ಸ್ಪರ್ಧೆ 4. ಹೂ ಜೋಡಣೆ ಸ್ಪರ್ಧೆಯು ನಡೆಯಲಿದೆ.

ಹಾಗೆಯೇ ಎಲ್ಲಾ ವಿಭಾಗದ ಮಕ್ಕಳಿಗಾಗಿ ತುಳು ರಸಪ್ರಶ್ನೆ ಮತ್ತು ಎಲ್ಲಾ ವಿಭಾಗದವರಿಗಾಗಿ ತುಳು ಲಿಪಿಯಲ್ಲಿ ಬರೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಎಂದು ತುಳುಕೂಟದ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಯಮಗಳು:
ಮದರಂಗಿ ಸ್ಪರ್ಧೆ ಸಾಂಪ್ರದಾಯಿಕವಾಗಿರುತ್ತದೆ.ಮಾರುಕಟ್ಟೆಯಲ್ಲಿ ಸಿಗುವ ಕೋನ್ ಬಳಸುವ ಹಾಗಿಲ್ಲ.ಮದರಂಗಿ ಸೊಪ್ಪನ್ನು ಅರೆದು ತರಬೇಕು.ಕಡ್ಡಿ ಮಾತ್ರ ಬಳಸತಕ್ಕದ್ದು.ಮದರಂಗಿ ಬಿಡಿಸಲು ನಿಮ್ಮ ಜೊತೆ ಒಬ್ಬರನ್ನು ಕರೆದುಕೊಂಡು ಬರಬೇಕು.ಒಂದು ಗಂಟೆಯ ಕಾಲಾವಕಾಶ ಇರುತ್ತದೆ.
ಬತ್ತಿ ಕಟ್ಟುವವರು ಹತ್ತಿ ಹಾಗೂ ಹೂ ಕಟ್ಟುವವರು ಹೂ ತರಬೇಕು.ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9036483463.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

3 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

4 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

4 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

4 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

4 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

4 days ago