Featured

ಉಡುಪಿ: ದಲಿತರು, ಮುಸ್ಲಿಮರ ಮಧ್ಯೆ ದ್ವೇಷ ಹರಡುವ ನಾಟಕ ಪ್ರದರ್ಶನ ರದ್ದುಪಡಿಸಲು ಒತ್ತಾಯಿಸಿ ಕಾಂಗ್ರೆಸ್ ಮನವಿ – vishwanews24

ಉಡುಪಿ: ದಲಿತರು, ಮುಸ್ಲಿಮರ ಮಧ್ಯೆ ದ್ವೇಷ ಹರಡುವ ನಾಟಕ ಪ್ರದರ್ಶನ ರದ್ದುಪಡಿಸಲು ಒತ್ತಾಯಿಸಿ ಕಾಂಗ್ರೆಸ್ ಮನವಿ

ಉಡುಪಿ: ನಗರದ ಕಡಿಯಾಳಿಯ ಶಾರದ ಕಲ್ಯಾಣಮಂಟಪ ಬಳಿಯ ಓವೈಸಿ ಸಭಾಂಗಣದಲ್ಲಿ ಡಿ.21ರ ರವಿವಾರ ನಡೆಯಲಿರುವ ರಂಗಭೂಮಿ ಟ್ರಸ್ಟ್ ಕೊಡಗು ಇವರು ಪ್ರಸ್ತುತ ಪಡಿಸುವ ‘ನಿಜ ಮಹಾತ್ಮ ಬಾಬಾ ಸಾಹೇಬ’ ಹೆಸರಿನ ನಾಟಕದ ಪ್ರದರ್ಶನವನ್ನು ರದ್ದುಪಡಿಸುವಂತೆ ಕೋರಿ ಪಕ್ಷದ ಎಸ್‌ಸಿ ಘಟಕದ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್‌ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದೆ.

ಅವಿತಿಟ್ಟ ಸತ್ಯಗಳ ಸ್ಪೋಟಕ ನಾಟಕ ಪ್ರದರ್ಶನ ಎಂಬ ಉಪನಾಮೆಯೊಂದಿಗೆ ನಾಟಕ ಪ್ರದರ್ಶಿಸುವ ಬಗ್ಗೆ ಬಹಿರಂಗ ಜಾಹೀರಾತುಗಳನ್ನು ಈಗಾಗಲೇ ನೀಡಲಾಗಿದೆ. ಉಡುಪಿ ಜಿಲ್ಲೆ ಕೋಮು ಸೂಕ್ಷ್ಮ ಪ್ರದೇಶವಾಗಿರು ವುದರಿಂದ ಈ ನಾಟಕದ ಪೋಸ್ಟರ್‌ಗಳಲ್ಲಿ ತಿಳಿಸಿರುವಂತೆ ನಾಟಕವು ಪಾಕಿಸ್ತಾನ ವಿಭಜನೆ, ಮುಸ್ಲಿಂರ ಬಗೆಗಿನ ಬಾಬಾ ಸಾಹೇಬರ ಅಭಿಪ್ರಾಯ, ಕಾಂಗ್ರೆಸ್ ಪಕ್ಷದ ದ್ರೋಹ ಎಂಬ ಒಕ್ಕಣೆಗಳು ಈ ನಾಟಕದ ಆಯೋಜಕರ ಪೂರ್ವಗ್ರಹ ಪೀಡಿತ ಅಸಹನೆ ಹಾಗೂ ದ್ವೇಷಪೂರಿತ ಉದ್ದೇಶಗಳನ್ನು ಒತ್ತಿ ಹೇಳುತ್ತಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.ಎಲ್ಲಾ ಪ್ರಚಾರಗಳನ್ನು ಗಮನಿಸಿದಾಗ, ಆಯೋಜಕರ ಉದ್ದೇಶ, ಸಮುದಾಯಗಳ ಮಧ್ಯದ ಸಾಮರಸ್ಯವನ್ನು ಹತ್ತಿಕ್ಕಿ ಜಿಲ್ಲೆಯಲ್ಲಿ ಕೋಮು ದ್ವೇಷವನ್ನು ಪಸರಿಸುವುದೇ ಆಗಿದೆ. ಹಾಗೂ ಮಹಾಮಾನವತಾವಾದಿಗಳಾದ ಬಾಬಾ ಸಾಹೇಬ ಅಂಬೇಡ್ಕ‌ರ್ ಅವರನ್ನು ತಪ್ಪಾಗಿ ಪ್ರಸ್ತುತ ಪಡಿಸಿ ಅವರ ಹೆಸರಿನಲ್ಲಿ ಮುಸ್ಲಿಂ- ದಲಿತ ದ್ವೇಷವನ್ನು ಹೆಚ್ಚಿಸುವುದೇ ಆಗಿದೆ.

ಆದ್ದರಿಂದ ಈ ನಾಟಕದ ಪ್ರದರ್ಶನದ ಅನುಮತಿಯನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಯ ವರಲ್ಲಿ ವಿನಂತಿಸಲಾಗಿದೆ.ಮನವಿ ಸಲ್ಲಿಸಿದ ನಿಯೋಗದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್ ಕುಮಾರ ಕೊಡವೂರು, ಎಸ್‌ಸಿ ಘಟಕದ ಜಿಲ್ಲಾ ಅಧ್ಯಕ್ಷ ಜಯಕುಮಾರ್, ಕೇಶವ ಸಾಲ್ಯಾನ್, ಲಕ್ಷ್ಮೀಶ ಶೆಟ್ಟಿ, ಕಿಶೋರ್ ಕುಮಾರ್ ಎರ್ಮಾಳ್, ಸುಮನ ಬೋಳಾರ್, ಸಂಧ್ಯಾ ತಿಲಕ್, ಸುಕನ್ಯಾ ಪೂಜಾರಿ ಉಪಸ್ಥಿತರಿದ್ದರು.

Vishwa News 24

Recent Posts

ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ 15 ಲಕ್ಷ ರೂ.ವಂಚನೆ – vishwanews24

ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ 15 ಲಕ್ಷ ರೂ.ವಂಚನೆ ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ…

3 hours ago

ಹಾಸನ : ಡೆತ್ ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ – vishwanews24

ಹಾಸನ : ಡೆತ್ ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ ಹಾಸನ: ಡೆತ್ ನೋಟ್ ಬರೆದಿಟ್ಟು 21 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯೋರ್ವ…

3 hours ago

ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ – vishwanews24

ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘ ಸಭೆ ೨೦೨೩-೨೦೨೪ ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ…

3 hours ago

ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ತರಕಾರಿಗಳಿಗೆ ಕೆಮಿಕಲ್‌ ಸ್ಪ್ರೇ ಬಗ್ಗೆ ಕ್ರಮ : ಖಾದರ್‌ – vishwanews24

ಆನ್‌ಲೈನ್‌ನಲ್ಲಿ ಮಾರಾಟ ಮಾಡೋ ತರಕಾರಿಗೆ ಕೆಮಿಕಲ್‌ ಸ್ಪ್ರೇ ಮಾಡುವ ಬಗ್ಗೆ ದೂರು ಬಂದಿದೆ.. ಪರಿಶೀಲನೆ ಮಾಡ್ತಿದ್ದೇವೆ, ಮುಂದಿನ ದಿನಗಳಲ್ಲಿ ಕ್ರಮ…

4 hours ago

ಕಾಸರಗೋಡು : ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್ ; ರೋಗಿ ಮೃತ್ಯು, ನಾಲ್ವರಿಗೆ ಗಾಯ – vishwanews24

ಕಾಸರಗೋಡು : ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್ ; ರೋಗಿ ಮೃತ್ಯು, ನಾಲ್ವರಿಗೆ ಗಾಯ ಕಾಸರಗೋಡು :…

5 hours ago

ಇನ್ನು ಮುಂದೆ ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ:  CM ಡಿ.ಕೆ. ಶಿ ಸ್ಪಷ್ಟನೆ – vishwanews24

ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ:  ಡಿ.ಕೆ. ಶಿ ಸ್ಪಷ್ಟನೆ…

5 hours ago