ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸಂಘದ ಕಚೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸುಧಾಮ ಶೆಟ್ಟಿ ಮಾತಾಡಿ, ಸಂಘವು ೪,೫೪,೮೭೮ವಾರ್ಷಿಕ ನಿವ್ವಳ ಬಂಡವಾಳ ಹೊಂದಿದ್ದು ಸದಸ್ಯರಿಗೆ ಶೇ. ೨೫ ಡಿವಿಡೆಂಡ್ ಶೇ.೬೫ ಬೋನಸ್ ಘೋಷಿಸಲಾಗಿದೆ. ಭವಿಷ್ಯದಲ್ಲೂ ಸಂಘದ ಪ್ರಗತಿಗೆ ಎಲ್ಲಾ ಹೈನುಗಾರರು ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಮುಖ್ಯ ಅತಿಥಿಯಾಗಿ ಬೆಂಗಳೂರು ಹಾಲು ಮಹಾ ಮಂಡಲದ ನಿರ್ದೇಶಕರು ಹಾಗೂ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಮಂಗಳೂರು ಇದರ ಗೌರವಾನ್ವಿತ ನಿರ್ದೇಶಕರಾದ ಶ್ರೀ ದೇವಿ ಪ್ರಸಾದ್ ಶೆಟ್ಟಿಯವರು ಮೊದಲಾಗಿ ಜಂತುಹುಳ ಔಷಧಿ ಶಿಬಿರವನ್ನು ಉದ್ಘಾಟಿಸಿ ಹೈನುಗಾರಿಕರಿಗೆ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಪಶು ವೈದ್ಯರಾದ ಡಾ. ಪ್ರಶಾಂತ್ ಆರ್.ಗುಜ್ಜಲ್‌ಕರ್, ಹೈನುಗಾರಿಕೆ ಬಗ್ಗೆ ಮಾಹಿತಿ ನೀಡಿದರು. ಕೆಎಂಎಫ್ ವಿಸ್ತರಣಾಧಿಕಾರಿ ಯಶವಂತ ಅವರು ಕೆಎಂಎಫ್ ನಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸಂಘಕ್ಕೆ ಹೆಚ್ಚು ಹಾಲು ಪೂರೈಸಿದ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಸದಸ್ಯರಾದ ಗಿರಿಯಾನ್ ಅಮ್ಮಣ್ಣ ಶಶಿಧರ್ ಶೆಟ್ಟಿ ಬೆಳಪು, ಮನೇಶ ಶೆಟ್ಟಿ ಮಲ್ಲಾರು, ಇವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಮಹಾಲಿಂಗ ಅಂಚನ್, ನಿರ್ದೇಶಕರಾದ ಪಿ.ಕೆ ಕರಿಯ ಮೊಯ್ಲಿ, ಶಶಿಧರ್ ಶೆಟ್ಟಿ, ಎಂ.ಎಸ್. ಅಬ್ದುಲ್ ರೆಹೆಮಾನ್, ಅಣ್ಣಯ್ಯ ಪೂಜಾರಿ, ಕಿಶೋರ್ ಕೋಟ್ಯಾನ್, ಗಣೇಶ್ ಬಿ. ಶೆಟ್ಟಿ, ಸುಹಾಸಿನಿ ಶೆಟ್ಟಿ, ಮನೇಶ ಶೆಟ್ಟಿ, ಮೋಹಿನಿ ಮತ್ತು ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು. ಸಂಘದ ಹಿರಿಯ ಸ್ಥಾಪಕ ನಿರ್ದೇಶಕರಾದ ಮಾಹಲಿಂಗ ಅಂಚನ್ ವiತ್ತು ಶ್ರೀ ಪಿ.ಕೆ ಕರಿಯ ಮೊಯ್ಲಿ ಇವರನ್ನು ಸನ್ಮಾನಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಾತ ಟಿ. ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಸದಸ್ಯ ಪ್ರಕಾಶ್ ಅಂಚನ್ ಅವರು ವಂದಿಸಿದರು. ರಾಷ್ಟçಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ 15 ಲಕ್ಷ ರೂ.ವಂಚನೆ ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ…
ಹಾಸನ : ಡೆತ್ ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ ಹಾಸನ: ಡೆತ್ ನೋಟ್ ಬರೆದಿಟ್ಟು 21 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯೋರ್ವ…
ಆನ್‌ಲೈನ್‌ನಲ್ಲಿ ಮಾರಾಟ ಮಾಡೋ ತರಕಾರಿಗೆ ಕೆಮಿಕಲ್ ಸ್ಪ್ರೇ ಮಾಡುವ ಬಗ್ಗೆ ದೂರು ಬಂದಿದೆ.. ಪರಿಶೀಲನೆ ಮಾಡ್ತಿದ್ದೇವೆ, ಮುಂದಿನ ದಿನಗಳಲ್ಲಿ ಕ್ರಮ…
ಕಾಸರಗೋಡು : ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್ ; ರೋಗಿ ಮೃತ್ಯು, ನಾಲ್ವರಿಗೆ ಗಾಯ ಕಾಸರಗೋಡು :…
ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ: ಡಿ.ಕೆ. ಶಿ ಸ್ಪಷ್ಟನೆ…
ಉಡುಪಿ : ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಶೀರೂರು…