ಉಡುಪಿ: ದಾಮೋದರ ಆಚಾರ್ಯರ ವರ್ಣ ವಸಂತ-9 : ಚಿತ್ರಕಲಾ ಪ್ರದರ್ಶನದ ಪತ್ರಿಕಾಗೋಷ್ಠಿ: vishwanews24
ಉಡುಪಿ: ದಾಮೋದರ ಆಚಾರ್ಯರ ವರ್ಣ ವಸಂತ-9 :ಚಿತ್ರಕಲಾ ಪ್ರದರ್ಶನದ ಪತ್ರಿಕಾಗೋಷ್ಠಿ: vishwanews24
ಉಡುಪಿ: 2015ರಲ್ಲಿ “ಮನೆಮನೆಗೆ ಚಿತ್ರಕಳೆ” ಎಂಬ ನೂತನ ಶೈಲಿಯ ಕಲಾ ಸಂಘಟನೆಯನ್ನು ಸ್ಥಾಪಿಸಿ ಚಿತ್ರಕಲೆಯನ್ನು ಮನೆ ಮನೆಗೆ ತಲಪಿಸುವ ಪ್ರಯತ್ನ ಮಾಡಿರುವ ಉಡುಪಿಯ ಹಿರಿಯ ಕಲಾವಿದ ದಾಮೋದರ ಎಲ್. ಆಚಾರ್ಯರು, “ವರ್ಣ ವಸಂತ ಶೀರ್ಷಿಕಯ ಅಡಿಯಲ್ಲಿ 8 ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಈಗಾಗಲೆ ನಡೆಸಿರುತ್ತಾರೆ. ಈಗ ತನ್ನ 9ನೇ ಕಲಾ ಪ್ರದರ್ಶನವನ್ನು ದಿನಾಂಕ: 20-11-2022ರಂದು ಉಡುಪಿಯ ರಾಮಕೃಷ್ಣ ಹೋಟೆಲಲ್ಲಿ ಇರುವ ಶರನ್ ಆರ್ಟ್ ಗ್ಯಾಲರಿಯಲ್ಲಿ ನಡೆಸಲು ಅಣಿಯಾಗುತ್ತಿದ್ದಾರೆ. ಈ ಪ್ರದರ್ಶನದಲ್ಲಿ ಆವರು ತನ್ನನ್ನು ತೊಡಗಿಸಿಕೊಂಡ ಕಲಾ ಪ್ರಕಾರವಾದ ಭಾವಚಿತ್ರ, ಪ್ರಾದೇಶಿಕ ಕಲೆಗಳ ಚಿತ್ರ, ಮಿನಿಯೇಚರ್ ಚಿತ್ರಗಳು, ಪ್ರಕೃತಿ ಚಿತ್ರಗಳು ಹಾಗೂ ಸಮಕಾಲಿನ (ನವ್ಯಕಲೆ) ಕಲೆಗಳ ಬಗ್ಗೆ ರಚಿಸಿದ ಚಿತ್ರಕಲೆಗಳ ಪ್ರದರ್ಶನ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇಸ್ಲಾಂಗೆ ಮತಾಂತರವಾಗಲು ನಿರಾಕರಿಸಿದ ಗೆಳತಿಯನ್ನು 4ನೇ ಮಹಡಿಯಿಂದ ಎಸೆದು ಕೊಂದ – Vishwanews24
ದಿನಾಂಕ: 20-11-2022 ಭೂರ್ವಾಹ್ನ 10:00ಕ್ಕೆ ಉದ್ಘಾಟನೆಗೊಂಡು 22-11- 2022ರವರೆಗೆ ಪ್ರತಿ ದಿನ ಪೂರ್ವಾಹ್ನ 10:00 ರಿಂದ ಸಂಜೆ 6:30ರ ವರೆಗೆ ಈ ಕಲಾ ಪ್ರದರ್ಶನವು ಕಲಾಭಿಮಾನಿಗಳಿಗಾಗಿ ತೆರೆದಿರುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ ಉಮೇಶ್ ಪ್ರಭು,ರಥ ಶಿಲ್ಪಿ ಕೆ ರಾಜಗೋಪಾಲ್ ಆಚಾರ್ಯ, ಯು ವಿಶ್ವನಾಥ ಶೆಣೈ,ಶ್ರೀಮತಿ ಮಮತಾ ಸಮಂತ್ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಮೋದರ ಎಲ್ ಆಚಾರ್ಯ, ವಾಸುದೇವ ಆಚಾರ್ಯ, ಅನುಶ್ರೀ,ಜಯಂತ ಪುರೋಹಿತ್ ಉಪಸ್ಥಿತರಿದ್ದರು.
