Featured

ಉಡುಪಿ : ದೇಶದ ಶ್ರೇಯೋಭಿವೃದ್ಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಒಳಿತಿಗಾಗಿ ಋಕ್ ಸಂಹಿತಾ ಮಹಾಯಾಗ – Vishwanews24

ಉಡುಪಿ : ಅಡ್ವೆಯಲ್ಲಿ ದೇಶದ ಶ್ರೇಯೋಭಿವೃದ್ಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಒಳಿತಿಗಾಗಿ ಋಕ್ ಸಂಹಿತಾ ಮಹಾಯಾಗ – Vishwanews24

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಅಡ್ವೆಯಲ್ಲಿ ಋಕ್ ಸಂಹಿತಾ ಮಹಾಯಾಗದ ಪೂರ್ಣಾಹುತಿಯಾಗಿದೆ. ಕಳೆದ ಎರಡು ವರ್ಷಗಳಿಂದ ನಿರಂತರ ಯಾಗ ನಡೆದಿದ್ದು, ಈ ಬಾರಿ ದೇಶದ ಶ್ರೇಯೋಭಿವೃದ್ಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಒಳಿತಿಗಾಗಿ ಯಾಗ ನಡೆಸಲಾಗಿದೆ.

ಅಡ್ವೆ ಗ್ರಾಮದ ವಿದ್ವಾನ್ ಅಡ್ವೆ ಲಕ್ಷ್ಮೀಶಾಚಾರ್ಯರು ನಡೆಸಿರುವ ಋಕ್ ಸಂಹಿತಾ ಯಾಗ ಇದಾಗಿದ್ದು, ಪೂರ್ಣಾಹುತಿಯಲ್ಲಿ ಮೂರು ಮಠಾಧೀಶರು ಭಾಗಿಯಾದರು. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ವಿದ್ಯಾಧೀಶ, ವಿದ್ಯಾರಾಜೇಶ್ವರ ತೀರ್ಥರು ಪೂರ್ಣಾಹುತಿಯಲ್ಲಿ ಭಾಗಿಯಾದರು. ಆಚಾರ್ಯರು ಈವರೆಗೆ ಒಟ್ಟು 10 ಸಲ ಋಕ್ ಸಂಹಿತಾ ಯಾಗ ಮಾಡಿದ್ದಾರೆ. ಯಾಗದ ಪೂರ್ಣಾಹುತಿ ಸಂದರ್ಭದಲ್ಲಿ ಕೊರೊನಾ ಮಹಾಮಾರಿ ದೂರಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.

ಅಡ್ವೆ ಎಂಬ ಪುಟ್ಟ ಹಳ್ಳಿಯಲ್ಲಿ ತಮ್ಮ ಮನೆಯಲ್ಲೇ ಕಳೆದೆರಡು ವರ್ಷಗಳಿಂದ ಯಾವ ಪ್ರಚಾರವೂ ಇಲ್ಲದೇ ನರೇಂದ್ರ ಮೋದಿಯವರಿಗೆ ಮತ್ತು ದೇಶಕ್ಕೆ ಕ್ಷೇಮ ಸುಭಿಕ್ಷೆ ಸಮೃದ್ಧಿ ಶಾಂತಿಗಾಗಿ ಪ್ರಾರ್ಥಿಸಿ ಪ್ರತಿನಿತ್ಯ ಅತ್ಯಂತ ಶ್ರದ್ಧೆಯಿಂದ ಋಗ್ವೇದ ಸಂಹಿತಾ ಯಾಗ ನಡೆಸುತ್ತಿದ್ದಾರೆ.

ಇದನ್ನೂ ಓದಿ: 

ವಿದ್ವಾನ್ ಅಡ್ವೆ ಲಕ್ಷ್ಮೀಶಾಚಾರ್ಯರು ಈ ಯಾಗದ ಕರ್ತೃವಾಗಿದ್ದು ಈಗಾಗಲೇ ಲೋಕದ ಒಳಿತಿಗಾಗಿ ಒಂಭತ್ತು ಬಾರಿ ಋಕ್ ಸಂಹಿತಾಯಾಗವನ್ನು ನಡೆಸಿದ್ದು, ಈ ಬಾರಿ ಹತ್ತನೇ ಸಲದ ಯಾಗವನ್ನು ಪೂರ್ಣಗೊಳಿಸಿದ್ದು ಅಪೂರ್ವ ಸಂಗತಿ. ಪ್ರಸ್ತುತ ದೇಶದಲ್ಲಿರುವ ತೀರಾ ಬೆರಳೆಣಿಕೆಯ ಅಗ್ನಿಹೋತ್ರಿಗಳಲ್ಲಿ ಇವರೂ ಒಬ್ಬರೂ. ಕಳೆದ ಅನೇಕ ವರ್ಷಗಳಿಂದ ತಮ್ಮ ಮನೆಯಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಿ ಒಂದು ದಿನವೂ ಬಿಡದೇ ಪ್ರತೀನಿತ್ಯ ಮೂರು ಹೊತ್ತು ಅಗ್ನಿಯ ಉಪಾಸನೆಯನ್ನು ಮಾಡುತ್ತಿರುವುದು ಈ ಕಾಲದಲ್ಲಿ ಅತ್ಯಂತ ಅಚ್ಚರಿಯ ಸಂಗತಿಯಾಗಿದೆ ಎಂದು ಪೆರಂಪಳ್ಲಿ ವಾಸುದೇವ ಭಟ್ ಹೇಳಿದ್ದಾರೆ.

ಸ್ಥಳೀಯ ಶ್ರೀ ಯೋಗದೀಪಿಕಾ ಗುರುಕುಲದಲ್ಲಿ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸುತ್ತಾ ಅದರ ಜೊತೆಗೆ ಆಸುಪಾಸಿನಲ್ಲೇ ಅಗ್ನಿಯ ಉಪಾಸನೆ, ಕೆಲವು ಕಡೆಗಳಲ್ಲಿ ಪ್ರವಚನ ಇತ್ಯಾದಿಗಳಿಂದ ಸೀಮಿತ ಆದಾಯವನ್ನು ಪಡೆಯುತ್ತಿದ್ದಾರೆ. ಆದಾಯದ ಬಹುಪಾಲನ್ನು ಲೋಕ ಹಿತಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಕೊರೊನಾ ವಿಪತ್ತಿನ ಸಂದರ್ಭದಿಂದ ಆರಂಭಿಸಿ ಎರಡು ವರ್ಷಗಳಿಂದ ಯಾಗ ಮಾಡುತ್ತಿರುವುದು ದೇವರಿಗೆ ಮೆಚ್ಚಿಗೆಯಾಗಿದೆ.

ಪರಮಪೂಜ್ಯ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮತ್ತು ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಶಾಸಕರುಗಳಾದ ಲಾಲಾಜಿ ಆರ್ ಮೆಂಡನ್ , ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಅನೇಕ ವೈದಿಕ ವಿದ್ವಾಂಸರು ಉಪಸ್ಥಿತರಿದ್ದರು.

Vishwa News 24

Recent Posts

ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮೂವರು ಮೃತ್ಯು; 5 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್‌ ವಿತರಣೆ – vishwanews24

ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮೂವರು ಮೃತ್ಯು; 5 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್‌ ವಿತರಣೆ ಮಂಗಳೂರು: ತಡೆಗೋಡೆ…

16 minutes ago

ಡಿವಿ ಸದಾನಂದಗೌಡ ಆಡಿಯೋ ವೈರಲ್ ಬಗ್ಗೆ ವಿಜಯೇಂದ್ರ ರಿಯಾಕ್ಷನ್ – vishwanews24

ಡಿವಿ ಸದಾನಂದಗೌಡ ಆಡಿಯೋ ವೈರಲ್ ಬಗ್ಗೆ ವಿಜಯೇಂದ್ರ ಫಸ್ಟ್ ರಿಯಾಕ್ಷನ್ ಆಡಿಯೋ ಧ್ವನಿ ತಮ್ಮದಲ್ಲ ಎಂದು ಸದಾನಂದಗೌಡರೇ ಹೇಳಿದ್ದಾರೆ ;…

24 minutes ago

ಬೆಳಗಾವಿ : ಜುಲೈ 10 ರಿಂದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ – vishwanews24

ಬೆಳಗಾವಿ : ಜುಲೈ 10 ರಿಂದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಜು.6 ಕ್ಕೆ ಬೆಳಗಾವಿಗೆ…

32 minutes ago

ಸಪ್ತಪದಿ ಸೇರಿ ಅಗತ್ಯ ವಿಧಿ-ವಿಧಾನಗಳು ನೆರವೇರಿದಾಗ ಮಾತ್ರ ಹಿಂದೂ ವಿವಾಹ ಮಾನ್ಯ: ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು – vishwanews24

ಸಪ್ತಪದಿ ಸೇರಿ ಅಗತ್ಯ ವಿಧಿ-ವಿಧಾನಗಳು ನೆರವೇರಿದಾಗ ಮಾತ್ರ ಹಿಂದೂ ವಿವಾಹ ಮಾನ್ಯ: ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ಅಹಮದಾಬಾದ್: ಕೇವಲ…

39 minutes ago

ಪಾನ್ ಮಸಾಲಾ, ಗುಟ್ಕಾ ಮಾರಾಟ  ಬ್ಯಾನ್ ಎಚ್ಚರಿಕೆ ನೀಡಿದ್ದ ಸಿಎಂ : ರಾಜ್ಯದಲ್ಲಿ 32 ಪಾನ್ ಮಸಾಲಾ ಮಾದರಿ ಸಂಗ್ರಹ – vishwanews24

ಪಾನ್ ಮಸಾಲಾ, ಗುಟ್ಕಾ ಮಾರಾಟ  ಬ್ಯಾನ್ ಎಚ್ಚರಿಕೆ ನೀಡಿದ್ದ ಸಿಎಂ:  ರಾಜ್ಯದಲ್ಲಿ 32 ಪಾನ್ ಮಸಾಲಾ ಮಾದರಿ ಸಂಗ್ರಹ ಬೆಂಗಳೂರು:…

51 minutes ago

ರಾಮನಗರ : ಕ್ರಷರ್ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ, ಹಲವರಿಗೆ ಗಾಯ – vishwanews24

ರಾಮನಗರ : ಕ್ರಷರ್ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ, ಹಲವರಿಗೆ ಗಾಯ ರಾಮನಗರ: ರಾಮನಗರ ಜಿಲ್ಲೆಯ ಬೆಂಗಳೂರು…

1 hour ago