Featured

ಉಡುಪಿ ನಗರದ 15 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ: ಎಸ್ಪಿ ಡಾ.ಅರುಣ್ – vishwanews24

ಉಡುಪಿ ನಗರದ 15 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ: ಎಸ್ಪಿ ಡಾ.ಅರುಣ್

ಉಡುಪಿ: ಅಪರಾಧಗಳ ಬಗ್ಗೆ ಮಾಹಿತಿ ಕಳೆಹಾಕಲು ಅನುಕೂಲ ವಾಗುವ ನಿಟ್ಟಿನಲ್ಲಿ ಉಡುಪಿ ನಗರದ ಎಲ್ಲ ಆಯಾಕಟ್ಟಿನ 15 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಈ ತಿಂಗಳ ಅಂತ್ಯ ದೊಳಗೆ ಸಂಬಂಧಪಟ್ಟವರಿಗೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿಯು ಪ್ರಮುಖ ನಗರವಾಗಿ ಬೆಳೆಯುತ್ತಿದೆ. ಈ ಹಿಂದೆ ಉಡುಪಿ ನಗರಾದ್ಯಂತ ಒಟ್ಟು 90 ಸಿಸಿಟಿವಿಗಳನ್ನು ಆಳವಡಿಸಲಾಗಿತ್ತು. ಅದರಲ್ಲಿ ಕೆಲವು ಕ್ಯಾಮೆರಾ ಕಾರ್ಯನಿರ್ವಹಿಸುತ್ತಿಲ್ಲ. ಈಗ ಹೊಸದಾಗಿ ಉಡುಪಿ ನಗರದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಜಿಲ್ಲಾಡಳಿತ, ನಗರಸಭೆಗೆ ಪ್ರಸ್ತಾಪ ಕಳುಹಿಸಲಾಗುವುದು. ಅದೇ ರೀತಿ ಜನಪ್ರತಿನಿಧಿಗಳ ಸಹಕಾರ ಮತ್ತು ಸಿಆರ್‌ಎಸ್ ಅನುದಾನದಲ್ಲಿಯೂ ಕ್ಯಾಮೆರಾ ಅಳವಡಿಸಲು ಉದ್ದೇಶಿಸಲಾಗಿದೆ ಎಂದರು.

ನಗರದ ಪ್ರವೇಶ ಮತ್ತು ನಿರ್ಗಮನ ಪ್ರದೇಶ ಸೇರಿದಂತೆ ಆಯಾಕಟ್ಟಿನ ಸ್ಥಳಗಳಲ್ಲಿ ಯಾರು ಬರುತ್ತಾರೆ ಮತ್ತು ಹೋಗು ತ್ತಾರೆ ಎಂಬ ಮಾಹಿತಿ ತಿಳಿಯಲು ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಈಗಲೇ ಯಾವ ಪ್ರದೇಶದಲ್ಲಿ ಖಾಸಗಿ ಯವರು ಸಿಸಿಟಿವಿಗಳನ್ನು ಅಳವಡಿಸಿದ್ದಾರೆ ಎಂಬುದು ಆ್ಯಪ್ ಮೂಲಕ ಕಂಡುಕೊಳ್ಳಬಹುದು. ಸಿಸಿ ಕ್ಯಾಮೆರಾ ಇಲ್ಲದ ಕಡೆಗಳಿಗೆ ಮಾತ್ರ ಕ್ಯಾಮೆರಾ ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಒಟ್ಟು 15 ಜಂಕ್ಷನ್‌ಗಳಲ್ಲಿ ಒಂದೊಂದರಲ್ಲಿ 3-4 ಕ್ಯಾಮೆರಾಗಳನ್ನು ಅಳವಡಿಸ ಲಾಗುವುದು. ಮೊದಲು ಪ್ರಥಮ ಆದ್ಯತೆ ಉಡುಪಿ ನಗರಕ್ಕೆ ಸಿಟಿ ಕ್ಯಾಮೆರಾ ಗಳನ್ನು ಅಳವಡಿಸಿ, ಮುಂದೆ ಎಲ್ಲ ತಾಲೂಕು ಕೇಂದ್ರಗಳಲ್ಲೂ ಅಳವಡಿಸ ಲಾಗುವುದು. ಇದಕ್ಕೆ ಬೇಕಾದ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತೇವೆ ಎಂದು ಎಸ್ಪಿ ತಿಳಿಸಿದರು.

Vishwa News 24

Recent Posts

ಥಾಣೆ: ವ್ಯಾನ್ ಹಾಗೂ ಸಿಮೆಂಟ್ ಮಿಕ್ಸರ್ ನಡುವೆ ಭೀಕರ ರಸ್ತೆ ಅಪಘಾತ :  11 ಮಂದಿ ಸಾವು – vishwanews24

ಥಾಣೆ: ವ್ಯಾನ್ ಹಾಗೂ ಸಿಮೆಂಟ್ ಮಿಕ್ಸರ್ ನಡುವೆಭೀಕರ ರಸ್ತೆ ಅಪಘಾತ :  11 ಮಂದಿ ಸಾವು ಥಾಣೆ: ವ್ಯಾನ್ ಹಾಗೂ…

5 hours ago

ಮತ್ಸ್ಯಕ್ಷಾಮ: ಮಂಗಳೂರಿನಲ್ಲಿ ಮೀನುಗಾರಿಕೆ ನಿಲ್ಲಿಸಿದ ಶೇ.85ರಷ್ಟು ಬೋಟುಗಳು – vishwanews24

ಮತ್ಸ್ಯಕ್ಷಾಮ: ಮಂಗಳೂರಿನಲ್ಲಿ ಮೀನುಗಾರಿಕೆ ನಿಲ್ಲಿಸಿದ ಶೇ.85ರಷ್ಟು ಬೋಟುಗಳು ಮೀನುಗಳ ಕೊರತೆಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕರಾವಳಿಯ ಮೀನುಗಾರರು ಮಂಗಳೂರು(ದಕ್ಷಿಣ ಕನ್ನಡ):…

7 hours ago

ಹಿರಿಯ ಶಾಸಕರು ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪಿಲ್ಲ : ಪರಮೇಶ್ವರ್ – vishwanews24

ಹಿರಿಯ ಶಾಸಕರು ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪಿಲ್ಲ : ಪರಮೇಶ್ವರ್ ಬೆಂಗಳೂರು: ಅದೇನು ಗ್ಯಾಂಬ್ಲಿಂಗ್ ಅಲ್ಲ, ಹಿರಿಯ ಶಾಸಕರು ಸಚಿವ…

8 hours ago

ಕಾರ್ಕಳ : ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕ – 82.37 ಕೋಟಿ ರೂ.ನೆರವಿಗೆ ಸರಕಾರಕ್ಕೆ ಮನವಿ: ಡಾ.ಎಂಎನ್‌ಆರ್ – vishwanews24

ಕಾರ್ಕಳ : ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ: ಡಾ.ಎಂ.ಎನ್.ರಾಜೇಂದ್ರಕುಮಾರ್ 82.37 ಕೋಟಿ ರೂ.ನೆರವಿಗೆ ಸರಕಾರಕ್ಕೆ ಮನವಿ: ಡಾ.ಎಂಎನ್‌ಆರ್ ಕಾರ್ಕಳ: ಕಾರ್ಕಳದ…

8 hours ago

ಮೂಡುಬಿದಿರೆ: ಅಕ್ರಮ ಜಾನುವಾರು ಸಾಗಾಟ ಪತ್ತೆ; ಎಂಟು ದನಗಳ ರಕ್ಷಣೆ – vishwanews24

ಮೂಡುಬಿದಿರೆ: ಅಕ್ರಮ ಜಾನುವಾರು ಸಾಗಾಟ ಪತ್ತೆ; ಎಂಟು ದನಗಳ ರಕ್ಷಣೆ, ಎರಡು ವಾಹನ ವಶ ಮೂಡುಬಿದಿರೆ: ಅತ್ಯಂತ ಹಿಂಸಾತ್ಮಕವಾಗಿ ಹಾಗೂ…

8 hours ago

ರಾಜ್ಯದ ಹಲವೆಡೆ ಇಂದು, ನಾಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ : ಹವಾಮಾನ ಇಲಾಖೆ – vishwanews24

ರಾಜ್ಯದ ಹಲವೆಡೆ ಇಂದು, ನಾಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ : ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ ಹಲವೆಡೆ ಇಂದು…

8 hours ago