ಉಡುಪಿ : ನಮ್ಮಲ್ಲಿ ಬದಲಾವಣೆ ಆದರೆ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ : ಲೋಕಾಯುಕ್ತ ಎಸ್.ಪಿ. ಕುಮಾರಸ್ವಾಮಿ -Vishwanews24

Featured, ಉಡುಪಿ

ಉಡುಪಿ : ನಮ್ಮಲ್ಲಿ ಬದಲಾವಣೆ ಆದರೆ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ : ಲೋಕಾಯುಕ್ತ ಎಸ್.ಪಿ. ಕುಮಾರಸ್ವಾಮಿ -Vishwanews24

ಉಡುಪಿ, : ನಮ್ಮಲ್ಲಿ ಬದಲಾವಣೆಯಾದಾಗ ಮಾತ್ರ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯ. ವಿಚಕ್ಷಣಾ ದಳದವರು ಬಂದು ಕಾನೂನಿನ ಇಕ್ಕಟ್ಟಿಗೆ ಸಿಲುಕಿಸಿದ ನಂತರ ಬದಲಾವಣೆಯಾಗುವ ಬದಲು , ಭ್ರಷ್ಠಾಚಾರರ ವಿರುದ್ದ ಪ್ರತಿಜ್ಞೆ ಮಾಡಿರುವುದನ್ನು ಸ್ವಯಂ ಅನುಸರಿಸಿ, ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆಂದು ಕರ್ನಾಟಕ ಲೋಕಾಯುಕ್ತದ ದ.ಕ. ಮತ್ತು ಉಡುಪಿ ಜಿಲ್ಲೆ ಪೋಲೀಸ್ ಅಧೀಕ್ಷಕ ಎ.ಕುಮಾರಸ್ವಾಮಿ ಹೇಳಿದರು.

ಅವರು ಶುಕ್ರವಾರದಂದು ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಲೋಕಾಯಕ್ತರಿಂದ ನಡೆದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರ ವಿಚಕ್ಷಣಾ ಆಯೋಗದ ವತಿಯಿಂದ ಪ್ರತಿ ವರ್ಷ ಅಕ್ಟೋಬರ್ 26 ರಿಂದ ನವೆಂಬರ್ 1 ರವರೆಗೆ ಭಷ್ಠಾಚಾರ ನಿರ್ಮೂಲನ ಜಾಗೃತಿ/ಅರಿವು ಸಪ್ತಾಹ ಆಚರಣೆ ಮಾಡಲಾಗುತ್ತಿದೆ. ಈ ಜಾಗೃತಿ ಅಭಿಯಾನದ ಮುಖ್ಯ ಉದ್ದೇಶವೇ ಪ್ರತಿ ಇಲಾಖೆಯಲ್ಲಿ ಕರ‍್ಯ ನಿರ್ವಹಿಸುವಂತಹ ಕಛೇರಿ ಸಿಬ್ಬಂದಿ ಮತ್ತು ಸೇವೆ ಪಡೆದುಕೊಳ್ಳುವ ಸಾರ್ವಜನಿಕರಿಗೆ ಅರಿವು ಮೂಡಿಸುವಂತಹದ್ದು, ಎಲ್ಲಾ ಸಂಸ್ಥೆಗಳು, ಕಛೇರಿಗಳು, ಸಾರ್ವಜನಿಕ ಸಂಸ್ಥೆಗಳು, ಸ್ವಯಂ ಸೇವಕ ಸಂಸ್ಥೆಗಳು, ಸಮುದಾಯಗಳು ಒಗ್ಗಟ್ಟಾಗಿ ಪ್ರತಿಜ್ಞಾ ಬದ್ಧರಾಗಿ ಭಷ್ಠಾಚಾರ ಮುಕ್ತ ಸಮಾಜವನ್ನು ನಿರ್ಮಾಣ ಮಾಡಬೇಕೆಂದರು.

ಸಾರಿಗೆ ಕಛೇರಿಯ ಅಧೀಕ್ಷಕರಾದ ಗೀತಾ ಸಾರಿಗೆ ವಿಭಾಗ ಕಾರ್ಯಗಳ ಬಗ್ಗೆ , ಪಮಿತಾ ಸಾರಿಗೆಯೇತರ ವಿಭಾಗದ ಕಾರ್ಯಗಳ ಬಗ್ಗೆ , ಸರಸ್ವತಿ ಡಿಲ್ ವಿಭಾಗದ ಕಾರ್ಯಗಳ ಬಗ್ಗೆ ,ಗೀತಾ ಮಾಹಿತಿ ನೀಡಿದರು.

ಕಾರ್ಮಿಕ ಅಧಿಕಾರಿ ಕುಮಾರ್ ಕಾರ್ಮಿಕ ಇಲಾಖೆ ಸೌಲಭ್ಯಗಳ ಬಗ್ಗೆ, ಸುಗುಣ ಹಿಂದುಳಿದ ವರ್ಗಗಳ ಇಲಾಖೆ ಸೌಲಭ್ಯಗಳ ಬಗ್ಗೆ ,ಅನಿತಾ ಗಣಿ ಇಲಾಖೆಯ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಎಲ್ಲರಿಗೂ ಪ್ರತಿಜ್ಞಾ ವಿಧಿ ಭೋದಿಸಲಾಯಿತು.

ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಜಯರಾಮ ಗೌಡ, ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ಮತ್ತು ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಗಣಿ ಇಲಾಖೆಯ ಸಿಬ್ಬಂದಿಗಳು, ಚಾಲನ ತರಬೇತಿ ಶಾಲೆಯವರು, ಅಭ್ಯರ್ಥಿಗಳು, ಸಾರ್ವಜನಿಕರು, ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮೋಟಾರು ವಾಹನ ನಿರೀಕ್ಷಕ ಎನ್.ವಿಶ್ವನಾಥ ನಾಯ್ಕ್ ಸ್ವಾಗತಿಸಿ, ವಂದಿಸಿದರು.