ಉಡುಪಿ: ಮಾಜಿ ಪ್ರಧಾನಿ ನೆಹರೂ ಮತ್ತು ಅವರ ಬೆಂಬಲಿಗರದ್ದು ಹೇಡಿಗಳ ತಂಡ. ನೆಹರು ಕುರ್ಚಿಗಾಗಿ ದೇಶದ ಮಾನ ಕಳೆದರು. ದೇಶವನ್ನು ತುಂಡು ಮಾಡಿ ಗಾಂಧಿ ಮಹಾತ್ಮರಾದರು. ಬ್ರಿಟಿಷರು ಇನ್ನೈದು ವರ್ಷ ಭಾರತದಲ್ಲಿ ಇದ್ದಿದ್ದರೆ ಭಾರತದ ಸ್ಥಿತಿ ಹೀಗಾಗದೆ ಸ್ಥಿರವಾಗಿರುತ್ತಿತ್ತು ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಉಡುಪಿಯ ಕಟಪಾಡಿಯಲ್ಲಿ ಪೌರತ್ವ ಕಾಯ್ದೆಯ ಜನಜಾಗೃತಿ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, 72 ವರ್ಷದಲ್ಲಿ ಭಾರತ ದೇಶ ಭೂಮಿಯನ್ನೂ ಹಿಂದೂಗಳನ್ನು ಕಳೆದುಕೊಳ್ಳುತ್ತಿದೆ. ಅದ್ಭುತ ಹಿಂದೂ ಸಮಾಜ ಪಾತಾಳಕ್ಕೆ ಕುಸಿಯುತ್ತಿದೆ ಎಂದರು.
ಅಂಬೇಡ್ಕರ್ ಒಬ್ಬರು ರಾಷ್ಟ್ರೀಯ ನಾಯಕ. ಅವರನ್ನು ಒಂದು ಜಾತಿಗೆ ಸೀಮಿತ ಮಾಡಿದ್ದು ನಮ್ಮ ದುರ್ದೈವ. ಅಂಬೇಡ್ಕರ್ ಹೇಳಿದಂತೆ ನಾವು ಅವತ್ತೇ ಮಾಡಬೇಕಿತ್ತು. ಭಾರತದ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಲಿ ಎಂದಿದ್ದ ಅಂಬೇಡ್ಕರ್ ಅವರ ಮಾತಿನಂತೆ ನಾವು ಮಾಡಬೇಕಿತ್ತು. ಅವರ ಸಲಹೆಯನ್ನು ಯಾರೂ ನಡೆಸಿಕೊಡಲಿಲ್ಲ. ಪಾಕ್‍ನ ಹಿಂದೂಗಳು ಭಾರತಕ್ಕೆ ಬರಲಿ ಎಂದು ಅವತ್ತೇ ಸಲಹೆ ಕೊಟ್ಟಿದ್ದರು ಎಂದು ಹೇಳಿದರು.
ಹಿಂದೂಗಳು ದೇವರನ್ನು ಪ್ರತಿದಿನ ಆರಾಧಿಸುತ್ತಾರೆ. ಸರ್ವೇಜನ ಸುಖಿನೋ ಭವಂತು ಅಂದ್ರೆ ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ ಸಂಸ್ಕೃತಿ ಭಾರತದ್ದು. ನಮ್ಮವರಿಗೆ ಮಾತ್ರ ಒಳ್ಳೆಯದಾಗಲಿ ಎಂಬ ಸಂಸ್ಕೃತಿ ನಮ್ಮದಲ್ಲ. ಶುಕ್ರವಾರ ಇರುವ ಅಲ್ಲಾ ಶನಿವಾರ ಎಲ್ಲಿ ಹೋಗ್ತಾನೆ? ಭಾನುವಾರ ಬೆಳಗ್ಗೆ ಬರುವ ಏಸು ಉಳಿದ ದಿನ ಎಲ್ಲಿ ಇರುತ್ತಾನೆ ಎಂದು ಪ್ರಶ್ನಿಸುವ ಮೂಲಕ ವಿವಾದ ಸೃಷ್ಟಿಸುವ ಮಾತನಾಡಿದರು.
ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸಿದ್ದರಾಮಯ್ಯ ಅವರದ್ದು ಷಂಡ ಸರ್ಕಾರ. ಸೊರಕೆ-ಮಧ್ವರಾಜ್ ಬೆರಕೆಯವರು. ಹಗಲು ಮಾತ್ರವಾ? ರಾತ್ರಿಯೂ ಮುಸಲ್ಮಾನರ ಜೊತೆಗಿರ್ತಾರಾ ಎಂದು ಪ್ರಶ್ನಿಸುವ ಮೂಲಕ ಚರ್ಚಾಸ್ಪದ ಹೇಳಿಕೆ ಕೊಟ್ಟರು. ಅಲ್ಲದೆ ಕಾಂಗ್ರೆಸಿಗರಿಗೆ ಇಂಜೆಕ್ಷನ್‍ನಲ್ಲಿ ಬೇರೆ ಜೀನ್ಸ್ ತುಂಬಿದೆ. ಪೌರತ್ವ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ರೂಪಿಸಿದ್ದು, ಅದಕ್ಕೆ ಈಗ ತಿದ್ದುಪಡಿ ತರಲಾಗುತ್ತಿದೆ. ವೋಟ್ ಹೊರಟು ಹೋಗುತ್ತದೆ ಎಂಬ ಕಾರಣಕ್ಕೆ ಪ್ರಗತಿಪರ, ಮುಸಲ್ಮಾನರ ಜೊತೆ ಕಾಂಗ್ರೆಸ್ ಸೇರಿಕೊಂಡಿದೆ ಎಂದು ದೂರಿದರು.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…