ರೋಚಕ ಕದನದಲ್ಲಿ ಗೆದ್ದ ಭಾರತ -Vishwanews24

ವೆಲ್ಲಿಂಗ್ಟನ್: ಹ್ಯಾಮಿಲ್ಟನ್ ಪಂದ್ಯದಂತೆ ಮತ್ತೊಂದು ಸೂಪರ್ ಓವರ್ ಪಂದ್ಯಕ್ಕೆ ವೆಲ್ಲಿಂಗ್ಟನ್ ಮೈದಾನ ಸಾಕ್ಷಿಯಾಗಿದೆ. ಅಂತಿಮವಾಗಿ ಭಾರತ ಗೆದ್ದು ಬೀಗಿದೆ.

ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ಆರಂಭಿಕ ಆಘಾತದ ನಂತರವೂ 165 ರನ್ ಗಳಿಸಿತು. ಕನ್ನಡಿಗ ಮನೀಶ್ ಪಾಂಡೆ 50 ರನ್ ಗಳಿಸಿ ತಂಡವನ್ನು ಆಧರಿಸಿದರು.

ಗುರಿ ಬೆನ್ನತ್ತಿದ ಕಿವೀಸ್ ಆರಂಭದಲ್ಲಿ ಸುಲಭ ಗೆಲುವನ್ನು ದಾಖಲಿಸುವ ನಿರೀಕ್ಷೆಯಲ್ಲಿತ್ತು. ಕಾಲಿನ್ ಮನಸ್ರೋ ಮತ್ತು ಟಿಮ್ ಸಿಫರ್ಟ್ ಅರ್ಧ ಶತಕ ಬಾರಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿತ್ತರು. ಅದರೆ ಅಂತಿಮವಾಗಿ ಸೈನಿ ಮತ್ತು ಶಾರ್ದೂಲ್ ಠಾಕೂರ್ ಕರಾರುವಕ್ ದಾಳಿಗೆ ನಲುಗಿದ ಕಿವೀಸ್ ಸತತ ವಿಕೆಟ್ ಕಳೆದುಕೊಂಡಿತು. ಅಂತಿಮ ಎಸೆತದಲ್ಲಿ ಎರಡು ರನ್ ಕದಿಯುವ ಸವಾಲು ಪಡೆದ ಸ್ಯಾಂಟ್ನರ್ ಒಂದು ರನ್ ತೆಗೆದು ಮತ್ತೊಂದು ರನ್ ಓಡುವಾಗ ರನ್ ಔಟ್ ಆದರು. ಅಲ್ಲಿಗೆ ಪಂದ್ಯಕ್ಕೆ ಟೈ ಮುದ್ರೆ ಒತ್ತಿತು.

ಕಿವೀಸ್ ಪರ ಸೂಪರ್ ಓವರ್ ಆಡಲು ಆಗಮಿಸಿದ್ದು ಕಾಲಿನ್ ಮನ್ರೋ ಮತ್ತು ಸೀಫರ್ಟ್. ಎಂಟು ರನ್ ಗಳಿಸಿದ್ದ ವೇಳೆ ಸೀಫರ್ಟ್ ಔಟ್. ಅಂತಿಮವಾಗಿ ಮಸ್ರೋ ನಾಲ್ಕು ರನ್ ಬಾರಿಸಿದರು. ಅಂತಿಮವಾಗಿ ಭಾರತಕ್ಕೆ ಜಯದ ಗುರಿ 13 ರನ್.

ಸೂಪರ್ ಓವರ್ ಅಡಲು ಭಾರತದ ಪರ ಬ್ಯಾಟಿಂಗ್ ಗೆ ಆಗಮಿಸಿದ್ದು ಕೆ ಎಲ್ ರಾಹುಲ್ ಮತ್ತೆ ವಿರಾಟ್ ಕೊಹ್ಲಿ. ಕಿವೀಸ್ ಪರ ಬೌಲರ್ ನಾಯಕ ಸೌಥಿ. ಗುರಿ 14 ರನ್.  ಮೊದಲ ಎಸೆತದಲ್ಲಿ ರಾಹುಲ್ ಭರ್ಜರಿ ಸಿಕ್ಸರ್. ಎರಡನೇ ಎಸೆತದಲ್ಲಿ ಬೌಂಡರಿ. ಮೂರನೇ ಎಸೆತಕ್ಕೆ ರಾಹುಲ್ ಔಟ್. ಬ್ಯಾಟಿಂಗ್ ಗೆ ಆಗಮಿಸಿದ್ದು ಸಂಜು ಸ್ಯಾಮ್ಸನ್. ಮೂರು ಎಸೆತದಲ್ಲಿ ನಾಲ್ಕು ರನ್ ಗುರಿ.

ನಾಲ್ಕನೇ ಎಸೆತದಲ್ಲಿ ಜಾಣ್ಮೆ ಪ್ರದರ್ಶಿಸಿದ ಕೊಹ್ಲಿ ಎರಡು ರನ್ ಕಸಿದರು. ಐದನೇ ಎಸೆತವನ್ನು ಬೌಂಡರಿಗಟ್ಟಿದ ಕೊಹ್ಲಿ ಮತ್ತೊಂದು ಸೂಪರ್ ವಿಜಯಕ್ಕೆ ಕಾರಣರಾದರು.

Vishwa News 24

Recent Posts

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

21 hours ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

21 hours ago

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು – vishwanews24

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…

22 hours ago

ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ – vishwanews24

ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…

22 hours ago

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ – vishwanews24

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…

22 hours ago

ಕೋಳಿಮರಿ ವಿತರಣೆ : ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ – vishwanews24

 ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ  ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…

22 hours ago